ಕೊಲೆ ಪ್ರಕರಣ: ಗುಜರಾತ್ ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ

Posted By:
Subscribe to Oneindia Kannada

ಅಹಮದಾಬಾದ್, ಆಗಸ್ಟ್ 11: 13 ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕನಿಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಅಖಿಲ್ ಕುರೇಶಿ ಮತ್ತು ಬೈರೆನ್ ವೈಷ್ಣವ್ ವಿಭಾಗೀಯ ಪೀಠ, 2004ರ ಫೆಬ್ರವರಿ 8ರಂದು ನಡೆದಿದ್ದ ನಿಲೇಶ್ ರಯಾನಿ ಕೊಲೆ ಪ್ರಕರಣ ಸಂಬಂಧ ಗುಜರಾತ್ ನ ಗೂಂಡಲ್ ಶಾಸಕ ಜಯರಾಜ್ ಸಿನ್ಹಾ ಜಡೇಜಾ ಹಾಗೂ ಅವರ ಆಪ್ತರಾದ ಮಹೇಂದ್ರ ಸಿನ್ಹಾ ರಾಣ ಮತ್ತು ಅಮರ್ಜೀತ್ ಸಿನ್ಹಾ ಅವರಿಗೆ ಜೀವವಾಧಿ ಶಿಕ್ಷೆ ವಿಧಿಸಿದೆ.

BJP MLA From Gujarat Sentenced To Life In 13-Year-Old Murder Case

ರಾಜ್ ಕೋಟ್ ಜಿಲ್ಲೆಯ ಗೂಂಡಲ್ ನ ರಾಜ ಕುಟುಂಬಕ್ಕೆ ಸೇರಿದ 35 ಎಕರೆ ಎಸ್ಟೇಟ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಜಯರಾಜ್ ಸಿನ್ಹಾ ಆಪ್ತ ವಿಕ್ರಮ್ ಸಿನ್ಹಾ ಅವರನ್ನು 2003ರಲ್ಲಿ ಕೊಲೆ ಮಾಡಲಾಗಿತ್ತು.

ಇದಾದ ಕೆಲ ತಿಂಗಳಲ್ಲಿ ನಿಲೇಶ್ ರಯಾನಿ ಅವರನ್ನು ಜಯರಾಜ್ ಸಿನ್ಹಾ ಅವರು ಗುಂಡಿಟ್ಟು ಹತ್ಯೆ ಮಾಡಿದ್ದರು. ಇದಾದ ನಂತರ ನಾಲ್ವರು ಶಾರ್ಪ್ ಶೂಟರ್ಸ್ ಗಳು ರಯಾನಿ ಆಪ್ತ, ರಾಜ್ ಕೋಟ್ ನ ಜಿಲ್ಲಾ ಯುವ ಅಧ್ಯಕ್ಷ ವಿನು ಸಿಂಘಾಲ ಅವರನ್ನು ಅವರ ಮನೆಯಲ್ಲೇ ಶೂಟ್ ಮಾಡಿ ಕೊಲೆಗೈದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Gujarat High Court on Friday awarded life imprisonment to BJP MLA Jayrajsinh Jadeja and two others in the murder case of a man, who was shot dead by Jadeja in Rajkot in February, 2004.
Please Wait while comments are loading...