• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ಪ-ಮಗ ಕಾಂಗ್ರೆಸ್ ಸೇರಿದ್ದಕ್ಕೆ ಮಂತ್ರಿ ಸ್ಥಾನ ತೊರೆದ ಸಚಿವ

|

ಶಿಮ್ಲಾ, ಏಪ್ರಿಲ್ 12: ಪುತ್ರ ಮತ್ತು ತಂದೆ ಇಬ್ಬರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಹಿಮಾಚಲ ಪ್ರದೇಶ ಸರ್ಕಾರದ ಬಿಜೆಪಿ ಮುಖಂಡ, ಇಂಧನ ಸಚಿವ ಅನಿಲ್ ಶರ್ಮಾ ಅವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಜೆಪಿಯಿಂದ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅನಿಲ್ ಶರ್ಮಾ ಅವರ ಪುತ್ರ ಆಶ್ರಯ ಶರ್ಮಾ ಅವರಿಗೆ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡ ಆಶ್ರಯ ಶರ್ಮಾ ಅವರು ತಮ್ಮ ತಾತ ಸುಖ್ ರಾಮ್ ಅವರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.

ಕಚೇರಿಯ ಚೌಕೀದಾರನಿಗೆ ರಾಜೀನಾಮೆ ಪತ್ರ ನೀಡಿ ಪಕ್ಷ ತೊರೆದ ಬಿಜೆಪಿ ಸಂಸದ

ಈ ಘಟನೆಯ ನಂತರ ಬಿಜೆಪಿಯಲ್ಲಿ ಅನಿಲ್ ಶರ್ಮಾ ಅವರ ಮೇಲೆ ಸಾಕಷ್ಟು ಒತ್ತಡ ಹೇರಲಾಗಿತ್ತು. ಅನಿಲ್ ಶರ್ಮಾ ಅವರ ತಂದೆ ಮತ್ತು ಪುತ್ರ ಇಬ್ಬರೂ ಕಾಂಗ್ರೆಸ್ ಸೇರಿದ್ದರಿಂದ ಅವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು. ಈ ಎಲ್ಲ ಒತ್ತಡಕ್ಕೆ ಮಣಿದು ಶರ್ಮಾ ರಾಜೀನಾಮೆ ನೀಡಿದ್ದಾರೆ.

ಮಂಡಿ ಕ್ಷೇತ್ರದಿಂದ ತಮ್ಮ ಪುತ್ರ ಕಾಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ನಾನು ಅವರ ಪರವಾಗಲೀ, ಬಿಜೆಪಿ ಅಭ್ಯರ್ಥಿಯ ಪರವಾಗಲೀ ಪ್ರಚಾರ ಮಾಡುವುದಿಲ್ಲ. ಮಂತ್ರಿ ಸ್ಥಾನ ತೊರೆದಿದ್ದೇನಾದರೂ ನಾನು ಬಿಜೆಪಿಯೊಂದಿಗೇ ಇರುತ್ತೇನೆ ಎಂದು ಅನಿಲ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

English summary
BJP leader from Himachal Pradesh Anil Sharma resigned his post as power minister after his son joined BJP ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X