Get Updates
Get notified of breaking news, exclusive insights, and must-see stories!

'X' ನಲ್ಲಿ 'ಬ್ಲೂ ಟಿಕ್‌' ಕಳೆದುಕೊಂಡ ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್- ಏಕೆ ಗೊತ್ತೇ?

ನವದೆಹಲಿ, ಆಗಸ್ಟ್‌ 16: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕ ಸಂಬಿತ್ ಪಾತ್ರ ಸೇರಿದಂತೆ ಹಲವಾರು ಬಿಜೆಪಿ ನಾಯಕರು 'X' ಸಾಮಾಜಿಕ ಮಾಧ್ಯಮದಲ್ಲಿ 'ಬ್ಲೂ ಟಿಕ್‌' ಮಾರ್ಕ್‌ ಅನ್ನು ಕಳೆದುಕೊಂಡಿದ್ದಾರೆ.

'ಹರ್ ಘರ್ ತಿರಂಗಾ' ಅಭಿಯಾನದ ಭಾಗವಾಗಿ ಅವರು ತಮ್ಮ ಪ್ರೊಪೈಲ್‌ ಚಿತ್ರವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಲೂ ಟಿಕ್ ಮಾರ್ಕ್‌ ಅನ್ನು ಅವರ ಖಾತೆಯಿಂದ ತೆಗೆದುಹಾಕಲಾಗಿದೆ.

BJP leaders including UP CM Yogi Adityanath lost verified status on X | Know why‍

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಹ 'X' ನಲ್ಲಿ ಬ್ಲೂ ಟಿಕ್‌ ಕಳೆದುಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಹ ತನ್ನ ಪ್ರೊಪೈಲ್‌ ಫೋಟೊವನ್ನು ಬದಲಿಸಿದ ಬಳಿಕ 'ಬ್ಲೂ ಟಿಕ್‌' ಅನ್ನು ಕಳೆದುಕೊಂಡಿದೆ. ಬಿಸಿಸಿಐ ಸಹ ತನ್ನ ಡಿಪಿಯನ್ನು ಬದಲಿಸಿ ರಾಷ್ಟ್ರ ಧ್ವಜವನ್ನು ಹಾಕಿಕೊಂಡಿತ್ತು.

ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳು ತಮ್ಮದೇ ಆದ ನಿಯಮಗಳು ಮತ್ತು ನೀತಿಗಳನ್ನು ಹೊಂದಿವೆ. 'X' ನ ನೀತಿ ನಿಯಮಗಳ ಪ್ರಕಾರ, ಖಾತೆಗಳು ತಮ್ಮ ನೈಜ ಹೆಸರುಗಳು ಮತ್ತು ಚಿತ್ರಗಳನ್ನು ಬಳಸುವ ಅಗತ್ಯವಿದೆ. ಆದ್ದರಿಂದ, ಈ ರಾಜಕೀಯ ನಾಯಕರು ತಮ್ಮ ಪ್ರೊಫೈಲ್ ಚಿತ್ರಗಳನ್ನು ಬದಲಾಯಿಸಿದಾಗ, ಅವರು ಟ್ವಿಟರ್‌ನ ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ, ಅವರು ಬ್ಲೂ ಟಿಕ್‌ ಮಾರ್ಕ್‌ ಅನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

BJP leaders including UP CM Yogi Adityanath lost verified status on X | Know why‍

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನ ನಿರ್ವಾಹಕರು ಈ ಖಾತೆಗಳನ್ನು ಮತ್ತೊಮ್ಮೆ ಪರಿಶೀಲಿಸುತ್ತಾರೆ. ಅವು ನೀತಿಗಳಿಗೆ ಅನುಸಾರವಾಗಿರುವುದು ಕಂಡುಬಂದರೆ, ಅವುಗಳಿಗೆ ಬ್ಲೂ ಟಿಕ್‌ ಅನ್ನು ಮರಳಿ ನೀಡಲಾಗುತ್ತದೆ.

'ಹರ್ ಘರ್ ತಿರಂಗ' ಅಭಿಯಾನ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಟ್ವಿಟ್ಟರ್ ಪ್ರೊಪೈಲ್‌ ಚಿತ್ರವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬಳಕೆದಾರರಲ್ಲಿ ಕೇಳಿಕೊಂಡಿದ್ದರು. ಅವರ ವಿನಂತಿಯನ್ನು ಅನುಸರಿಸಿ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪ್ರೊಪೈಲ್‌ ಚಿತ್ರವನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿದರು.

BJP leaders including UP CM Yogi Adityanath lost verified status on X | Know why‍

ಮೋದಿ ಅವರು ಸಹ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರಗಳನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿದ್ದಾರೆ. ಮೋದಿಯವರ ಟ್ವಿಟ್ಟರ್ ಪ್ರೊಫೈಲ್‌ನಿಂದ ಗ್ರೇ ವೆರಿಫಿಕೇಶನ್ ಟಿಕ್ ಅನ್ನು ತೆಗೆದುಹಾಕಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+