ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸಂಸ್ಥಾಪನಾ ದಿನ: ಟ್ವಿಟ್ಟರ್‌ನಲ್ಲಿ ಶುಭಾಶಯ ವಿನಿಮಯ

|
Google Oneindia Kannada News

ಬೆಂಗಳೂರು, ಏಪ್ರಿಲ್ 06: ಬಿಜೆಪಿಯ 38ನೇ ಸಂಸ್ಥಾಪನಾ ದಿನವಾದ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಇಂಡಿಯಾ ಟ್ರಸ್ಟ್ ಬಿಜೆಪಿ ಎಂಬ ಹ್ಯಾಷ್ ಟ್ಯಾಗ್‌ ಭಾರಿ ಟ್ರೆಂಡ್ ಸೃಷ್ಟಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರವಿಶಂಕರ್ ಪ್ರಸಾದ್, ಪೀಯೂಷ್ ಗೋಯಲ್, ಸದಾನಂದ ಗೌಡ, ಮನೋಹರ ಲಾಲ್, ದೇವೇಂದ್ರ ಫಡಣವೀಸ್, ಅನಂತಕುಮಾರ್ ಸೇರಿದಂತೆ ಅನೇಕ ಪ್ರಮುಖರು ಟ್ವಿಟರ್‌ನಲ್ಲಿ ಸಂಸ್ಥಾಪನಾ ದಿನದ ಅಂಗವಾಗಿ ಶುಭಾಶಯ ಹಂಚಿಕೊಂಡಿದ್ದಾರೆ.

ಬಿಜೆಪಿ ಸಂಸ್ಥಾಪನಾ ದಿನಾಚರಣೆ: ಕಾರ್ಯಕರ್ತರೊಂದಿಗೆ ಮೋದಿ ಸಂವಾದಬಿಜೆಪಿ ಸಂಸ್ಥಾಪನಾ ದಿನಾಚರಣೆ: ಕಾರ್ಯಕರ್ತರೊಂದಿಗೆ ಮೋದಿ ಸಂವಾದ

ನಾಯಕರಲ್ಲದೆ, ಬಿಜೆಪಿ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರು ಸಹ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ಪಕ್ಷಕ್ಕೆ ಶುಭ ಹಾರೈಸಿ ಪೋಸ್ಟ್ ಮಾಡಿದ್ದಾರೆ.

ಪರಿವರ್ತನೆಗೆ ಬದ್ಧ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್

"ಬಿಜೆಪಿಯೆಡೆಗಿನ ದೃಢ ನಂಬಿಕೆಯಿಟ್ಟ ನನ್ನೆಲ್ಲಾ ಸಹೋದರರಿಯರು ಮತ್ತು ಸಹೋದರರಿಗೆ ಧನ್ಯವಾದಗಳು. ಭಾರತದ ಪರಿವರ್ತನೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಬದ್ಧರಾಗಿದ್ದೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

'ಬಿಜೆಪಿ ರಾಜಕೀಯ ಪಕ್ಷವಲ್ಲ'

"ಬಿಜೆಪಿ ಒಂದು ರಾಜಕೀಯ ಪಕ್ಷವಲ್ಲ. ಅದೊಂದು ಸಿದ್ಧಾಂತ. ಅದೊಂದು ಚಳವಳಿ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನವಭಾರತದ ನಿರ್ಮಾಣಕ್ಕೆ ಬಿಜೆಪಿ ಕಟಿಬದ್ಧವಾಗಿದೆ' ಎಂದು ಸಚಿವ ಡಿ.ವಿ. ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ಚಳವಳಿಯಾಗಿ ಮಾರ್ಪಾಡಾದ ಪಕ್ಷ: ಸಿ,ಟಿ, ರವಿ

"ಬಿಜೆಪಿ ಸಂಸ್ಥಾಪನಾ ದಿನದ ಮಹತ್ವದ ಗಳಿಗೆಯಂದು ಬಿಜೆಪಿಯನ್ನು ಕಟ್ಟಲು, ಪೋಷಿಸಲು ಮತ್ತು ಬಲಗೊಳಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಪ್ರತಿ ಕಾರ್ಯಕರ್ತರಿಗೂ ವಂದಿಸುತ್ತೇನೆ. 'ಕೆಲವು ವ್ಯಕ್ತಿಗಳ ಭರವಸೆ'ಯಾಗಿ ಆರಂಭವಾದ ಪಕ್ಷ, ಇಂದು ಜನರ ಚಳವಳಿಯಾಗಿ ಮಾರ್ಪಟ್ಟಿದೆ" ಎಂದು ಸಿ.ಟಿ. ರವಿ ಹೇಳಿದ್ದಾರೆ.

'ಕೇಂದ್ರದಲ್ಲಿ ಅಸಮರ್ಥ ಸರ್ಕಾರ'

"ಬಿಜೆಪಿ ನಾಯಕರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳು ಮತ್ತು ಬಿಜೆಪಿ ಸೈದ್ಧಾಂತಿಕ ವಿರೋಧಿಗಳು ಪಕ್ಷವನ್ನು ಕಟುವಾಗಿ ಟೀಕಿಸಿವೆ.

'ಕೇಂದ್ರದಲ್ಲಿ ಅಸಮರ್ಥ ಸರ್ಕಾರ'
ಅಸಮರ್ಥ ಸರ್ಕಾರ ನಡೆಸುತ್ತಿದ್ದೀರಿ. ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ. ನೋಟು ಅಮಾನ್ಯೀಕರಣ ಯೋಜನೆಯನ್ನು ತಂದಿರಿ. ಭಾರತವನ್ನು 20ನೇ ಶತಮಾನದತ್ತ ಕೊಂಡೊಯ್ದಿರಿ. ಬ್ರಿಟಿಷರ ಒಡೆದು ಆಳುವ ನೀತಿ ಅನುಸರಿಸಿದಿರಿ. ಪ್ರೀತಿ ಬದಲು ದ್ವೇಷ ಹರಡಿದ್ದೀರಿ" ಎಂದು ಲೇಖಕ ಸಲ್ಮಾನ್ ಅನೀಸ್ ಸೋಜ್ ಟೀಕಿಸಿದ್ದಾರೆ.
 ಭಾರತೀಯ ಜನತಾ ಪಕ್ಷಕ್ಕೆ 38ರ ಹರೆಯ

ಭಾರತೀಯ ಜನತಾ ಪಕ್ಷಕ್ಕೆ 38ರ ಹರೆಯ

1951ರಲ್ಲಿ ಸ್ಥಾಪಿತಗೊಂಡ ಭಾರತೀಯ ಜನಸಂಘ, ತುರ್ತು ಪರಿಸ್ಥಿತಿಯ ಬಳಿಕ 1977ರಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿತ್ತು.

1980ರಲ್ಲಿ ಆರ್‌ಎಸ್‌ಎಸ್‌ನಿಂದ ಪ್ರತ್ಯೇಕಗೊಂಡ ರಾಜಕೀಯ ನಾಯಕರು ಏಪ್ರಿಲ್ 6ರಂದು ಭಾರತೀಯ ಜನತಾ ಪಕ್ಷ ಸ್ಥಾಪಿಸಿದರು. ಅಂದಿನಿಂದ ಪ್ರತಿ ವರ್ಷ ಏಪ್ರಿಲ್ 6ರಂದು ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ.

ಮಹಾರಾಷ್ಟ್ರದ ಬಾಂದ್ರಾ ಕರ್ಲಾದಲ್ಲಿ ಶುಕ್ರವಾರ ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ,

English summary
The BJP is celebrating its Foundation Day on Friday with a huge rally of its party workers in Mumbai. leaders from the party has exchange wishes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X