ಚುನಾವಣೆಗೂ ಮುನ್ನ ಬಿಜೆಪಿಯಿಂದ 64 ಬಂಡಾಯಗಾರರು ಆಮಾನತು

ಭೋಪಾಲ್, ನವೆಂಬರ್ 15: ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಕ್ಕಾಗಿ ನವೆಂಬರ್ 28ರಂದು ಚುನಾವಣೆ ನಡೆಯಲಿದೆ. ಆದರೆ, ಚುನಾವಣೆಗೂ ಮುನ್ನ 64 ಬಂಡಾಯಗಾರರನ್ನು ಬಿಜೆಪಿ ಪಕ್ಷದಿಂದ ಹೊರ ಹಾಕಿದೆ.

ಪ್ರಮುಖವಾಗಿ ಮಾಜಿ ಸಚಿವರಾದ ರಾಮಕೃಷ್ಣ ಕುಸ್ಮಾರಿಯಾ, ಸರ್ತಾಜ್ ಸಿಂಗ್, ಗ್ವಾಲಿಯರ್ ಮೇಯರ್ ಸಮೀಕ್ಷಾ ಪಾಂಡೆ ಹಾಗೂ ಕೆಎಲ್​ ಅಗರವಾಲ್​ಪಕ್ಷದಿಂದ ವಜಾಗೊಂಡಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರ 2008 ಹಾಗೂ 2013ರ ಸರ್ಕಾರದಲ್ಲಿ ಕುಸ್ಮಾರಿಯಾ ಅವರು ಸಚಿವರಾಗಿದ್ದರು.

ಅಮಾನತುಗೊಂಡರ ಪೈಕಿ ಮೂವರು ಮಾಜಿ ಶಾಸಕರು ಹಾಗೂ ಕೆಲ ಮಾಜಿ ಮೇಯರ್​ಇದ್ದಾರೆ. ಇವರೆಲ್ಲರೂ ಪಕ್ಷದ ವಿರುದ್ಧವಾಗಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. 2932 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 578 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 538 ನಾಮಪತ್ರಗಳನ್ನು ಹಿಂಪಡೆಯಲಾಗಿದೆ.

BJP expels 64 rebel leaders days before MP assembly election

ನಾಮಪತ್ರ ಸಲ್ಲಿಕೆ ಮಾಡಿದ್ದ ಅಭ್ಯರ್ಥಿಗಳಿಗೆ ವಾಪಸ್​ ಪಡೆದುಕೊಳ್ಳುವಂತೆ ಬಿಜೆಪಿ ತಿಳಿಸಿತ್ತು. ಮಧ್ಯಪ್ರದೇಶ ಎಲ್ಲ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್​ 11ರಂದು ಫಲಿತಾಂಶ ಹೊರಬರಲಿದೆ.

15 ವರ್ಷಗಳಿಂದಲೂ ಅಧಿಕಾರದಲ್ಲಿರುವ ಬಿಜೆಪಿ, ನಾಲ್ಕನೇ ಬಾರಿಯೂ ಅಧಿಕಾರ ಪಡೆಯುವ ಉತ್ಸಾಹದಲ್ಲಿದೆ. ಆದರೆ, ಪಕ್ಷದಲ್ಲಿನ ಬಂಡಾಯ ಅಭ್ಯರ್ಥಿಗಳು ಈಗ ಪಕ್ಷಕ್ಕೆ ಮುಳುವಾಗಿದೆ.

ಶಿವರಾಜ್ ಸಿಂಗ್​ಚೌಹಾಣ್ ​ಅವರ ಗೆಲುವಿನ ನಾಗಾಲೋಟ ತಡೆಯಲು ಕಮಲ್​ನಾಥ್​ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ಕಣಕ್ಕಿಳಿದಿದ್ದು, ಭಾರಿ ಸ್ಪರ್ಧೆ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+