ಈಶಾನ್ಯ ರಾಜ್ಯಗಳ ಫಲಿತಾಂಶ ಕ್ರಾಂತಿಕಾರಿ ಗೆಲುವು: ರಾಮ್ ಮಾಧವ್
ಅಗರ್ತಲ, ಮಾರ್ಚ್ 03: "ಇದು ಕ್ರಾಂತಿಕಾರಿ ಫಲಿತಾಂಶ. ತ್ರಿಪುರ ಸುಂದರಿ ಮಠದ ಕೃಪೆ ನಮ್ಮ ಮೇಲಿದೆ" ಎಂದು ಬಿಜೆಪಿ ಮುಖಂಡ ರಾಮ್ ಮಾಧವ್ ಹೇಳಿದ್ದಾರೆ.
ಈಶಾನ್ಯ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ತ್ರಿಪುರ ರಾಜಧಾನಿ ಅಗರ್ತಲದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಗೆಲುವು ಸಾಧ್ಯವಾಗಿದ್ದು, ತ್ರಿಪುರ ಸುಂದರಿ ಮಠದ ಕೃಪೆಯಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಕಾರ್ಯಕರ್ತರಿಂದ ಎಂದು ಹೇಳಿದರು.
This is a revolutionary result, all due to the blessings of Tripura Sundari Mata and people of the state and the hard work of PM Modi and party workers: Ram Madhav,BJP #TripuraElection2018 pic.twitter.com/nr5SqMmrXp
— ANI (@ANI) March 3, 2018
ತ್ರಿಪುರ ಬಿಜೆಪಿ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿಕೂಟ ಸರ್ಕಾರ ರಚಿಸಬಹುದು. ಆದರೆ ಮೇಘಾಲಯದಲ್ಲೂ ಕಾಂಗ್ರೆಸ್ಸೇತರ ಸರ್ಕಾರ ರಚಿಸುವ ಬಗ್ಗೆ ಯೋಚನೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಈಶಾನ್ಯ ರಾಜ್ಯದಲ್ಲಿ ಮೊದಲ ಬಾರಿಗೆ ಕಮಲ ಅರಳುತ್ತಿದೆ.












Click it and Unblock the Notifications