ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ನಾಮಪತ್ರ ಸಲ್ಲಿಕೆ
ವಡೋದರಾ,ಏ.9: 'ವಡೋದರಾ ನನ್ನ ಕರ್ಮಭೂಮಿ ನಾನು ಇಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿದ್ದೇನೆ. ಈಗ ಇಲ್ಲಿನ ಜನರ ಸೇವೆ ಮಾಡುವ ಸದವಕಾಶ ಸಿಕ್ಕಿದೆ' ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನರೇಂದ್ರ ಮೋದಿ ಅವರಿಗೆ ಅನುಮೋದಕ ಬೆಂಬಲಿಗರಾಗಿ ಜನಸಮಾನ್ಯರ ಪ್ರತಿನಿಧಿಯಾಗಿ ಕಿರಣ್ ಮಹೀದಾ ಎಂಬ ಸ್ಥಳೀಯ ಚಾಹ್ ವಾಲ ಹಾಗೂ ರಾಜಮನೆತನ ಸದಸ್ಯರೊಬ್ಬರು ಬಂದಿದ್ದರು. ಮೋದಿ ಅವರ ನಾಮಪತ್ರಕ್ಕೆ ಇಬ್ಬರು ಸಹಿ ಹಾಕಿ ಹರಿಸಿದರು.
ಗುಜರಾತಿನ ಮುಖ್ಯಮಂತ್ರಿ ಅವರ ಈ ನಡೆ ಪಕ್ಷದ ಪ್ರಚಾರಕ್ಕೆ ಇಂಬು ನೀಡಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೋದಿ ಅವರೊಂದಿಗೆ ಬಿಜೆಪಿಯ ಅನಂದಿಬೇನ್ ಪಟೇಲ್ ಅವರು ರೋಡ್ ಶೋ ನಲ್ಲಿ ಪಾಲ್ಗೊಂಡಿದ್ದರು. ಏ.30ರಂದು ನಡೆಯಲಿರುವ ಮತದಾನದಂದು ಎಲ್ಲಾ ಮತದಾರರು ಕಮಲಕ್ಕೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದರು.
ವಡೋದರಾದಲ್ಲಿ ಕಾಂಗ್ರೆಸ್ ನಿಂದ ಮದುಸೂಧನ್ ಮಿಸ್ತ್ರಿ, ಆಮ್ ಆದ್ಮಿ ಪಕ್ಷದಿಂದ ಸುನಿಲ್ ಕುಲಕರ್ಣಿ ಕಣದಲ್ಲಿದ್ದಾರೆ. ಮೋದಿ ಅವರು ವಡೋದರಾ ಅಲ್ಲದೆ ವಾರಣಾಸಿಯಿಂದಲೂ ಸ್ಪರ್ಧೆಗಿಳಿದಿದ್ದಾರೆ. ಅಲ್ಲಿ ಕಾಂಗ್ರೆಸ್ಸಿನಿಂದ ಅಜಯ್ ರೈ ಹಾಗೂ ಎಎಪಿಯಿಂದ ಅರವಿಂದ್ ಕೇಜ್ರಿವಾಲ್ ಪೈಪೋಟಿ ನೀಡಲಿದ್ದಾರೆ.
ಮೋದಿ ಬ್ಯಾನರ್ ತೆರವು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುಜರಾತಿನ ವಡೋದರಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ನಗರದ ವಿವಿಧೆಡೆ ಅಳವಡಿಸಲಾಗಿರುವ ಅವರ ಭಾವಚಿತ್ರವಿರುವ ಸಾವಿರಕ್ಕೂ ಅಧಿಕ ಬ್ಯಾನರ್ ಗಳು ಹಾಗೂ ಪೋಸ್ಟರ್ ಗಳನ್ನು ಬಿಜೆಪಿ ತಾನಾಗಿಯೇ ತೆರವುಗೊಳಿಸಿದೆ.

ಮೋದಿ ಭಾವಚಿತ್ರವಿರುವ ಪೋಸ್ಟರ್ ಗಳು
ಮೋದಿ ಭಾವಚಿತ್ರವಿರುವ ಪೋಸ್ಟರ್ ಗಳು ಪಕ್ಷದ ಸಂದೇಶಗಳನ್ನು ಹೊಂದಿರುವುದರಿಂದ, ಅವರು ನಾಮಪತ್ರ ಸಲ್ಲಿಸಿದ ಬಳಿಕವೂ ಅವುಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸಿದಲ್ಲಿ, ಅವೆಲ್ಲವನ್ನೂ ಅವರ ವೈಯಕ್ತಿಕ ವೆಚ್ಚವಾಗಿ ಚುನಾವಣಾ ಆಯೋಗವು ಪರಿಗಣಿಸುವ ಸಾಧ್ಯತೆ ಇರುವುದರಿಂದ ಗುಜರಾತಿನ ಬಿಜೆಪಿ ಘಟಕ ಈ ಕ್ರಮ ಕೈಗೊಂಡಿದೆ.

ಚುನಾವಣಾ ಪ್ರಚಾರದ ವೆಚ್ಚದ ಗರಿಷ್ಠ ಮಿತಿ
ಲೋಕಸಭೆ ಚುನಾವಣಾ ಕಣದಲ್ಲಿರುವ ಓರ್ವ ಅಭ್ಯರ್ಥಿಯ ಚುನಾವಣಾ ಪ್ರಚಾರದ ವೆಚ್ಚದ ಗರಿಷ್ಠ ಮಿತಿಯನ್ನು ಚುನಾವಣಾ ಆಯೋಗವು 70 ಲಕ್ಷ ರೂ.ಗೆ ನಿಗದಿಪಡಿಸಿದೆ.

ಬಿಜೆಪಿಯು ವಡೋದರಾದಲ್ಲಿ ಮೋದಿ ಪೋಸ್ಟರ್
ಬಿಜೆಪಿಯು ವಡೋದರಾದ ಪ್ರಮುಖ ಸ್ಥಳಗಳಲ್ಲಿ 1 ಸಾವಿರಕ್ಕೂ ಅಧಿಕ ಮೋದಿಯ ಭಾವಚಿತ್ರವಿರುವ ಫಲಕಗಳನ್ನು ಅಳವಡಿಸಿದೆ. ಇದಕ್ಕೆ ಬೇಕಾದ ಜಾಗಗಳನ್ನು ಬಿಜೆಪಿಯು 15 ದಿನ ಮುಂಚಿತವಾಗಿಯೇ ಬುಕ್ ಮಾಡಿತ್ತು.
|
ಮೋದಿ ನಡೆಸಿದ ರೋಡ್ ಶೋ
ವಡೋದರಾದ ಪ್ರಮುಖ ಸ್ಥಳಗಳಲ್ಲಿ ಬಿಜೆಪಿಯು ಪ್ರಧಾನಿ ಅಭ್ಯರ್ಥಿ ಮೋದಿ ನಡೆಸಿದ ರೋಡ್ ಶೋ
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications