ಇವರೇನು ಜನಪ್ರತಿನಿಧಿಗಳಾ? ಗುಂಡಾಗಳಾ? : ನೇರ ಪ್ರಸಾರದಲ್ಲಿ ಮಾರಾಮಾರಿ: ಕೆಸಿಆರ್ ಶಾಸಕನಿಂದ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ!

ನೇರ ಪ್ರಸಾರದ ಚರ್ಚೆಯಲ್ಲಿ ಕೆಸಿಆರ್ ಪಕ್ಷದ ಶಾಸಕ ಬಿಜೆಪಿ ನಾಯಕನ ಮೇಲೆ ಹಲ್ಲೆ ನಡೆಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತೆಲುಗು ಸುದ್ದಿ ವಾಹಿನಿಯೊಂದು ಬುಧವಾರ ಬಹಿರಂಗ ಚರ್ಚೆಯನ್ನು ಆಯೋಜಿಸಿತ್ತು.

ಈ ವೇಳೆ ಬಿಆರ್‌ಎಸ್ ಶಾಸಕ ಮತ್ತು ಅವರ ಬಿಜೆಪಿ ಪ್ರತಿಸ್ಪರ್ಧಿ ನಡುವೆ ಮಾರಾಮಾರಿ ನಡೆದಿದೆ. ಇದು ತಕ್ಷಣ ವಿಕೋಪಕ್ಕೆ ತಿರುಗಿತು. ವೇದಿಕೆ ಮೇಲಿದ್ದ ಪ್ರತಿನಿಧಿಗಳ ನಡುವೆ ಜಗಳ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಜನರೂ ಆಕ್ರೋಶಗೊಂಡರು. ತಕ್ಷಣ ಪೊಲೀಸರು ಮತ್ತು ಇತರರು ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

bjp-candidate-attacked-by-kcr-party

ಕುನಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಶೈಲಗೌಡ ಹಾಗೂ ಹೈದ್ರಾಬಾದ್‌ನ ಕುತ್ಬುಲ್ಲಾಪುರದ ಬಿಆರ್‌ಎಸ್ ಶಾಸಕ ಕೆಪಿ ವಿವೇಕಾನಂದ ನಡುವೆ ಈ ಗಲಾಟೆ ನಡೆದಿದೆ. ಈ ಘಟನೆ ವಿಡಿಯೋ ವೈರಲ್ ಆದ ಬಳಿಕಾ ಇವರು ಜನಪ್ರತಿನಿಧಿಗಳಾ ಅಥವಾ ಗುಂಡಾಗಳಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಕುನಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಶೈಲಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಹೈದ್ರಾಬಾದ್‌ನ ಕುತ್ಬುಲ್ಲಾಪುರದ ಬಿಆರ್‌ಎಸ್ ಶಾಸಕ ಕೆಪಿ ವಿವೇಕಾನಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಆರೋಪಿಸಿದ್ದಾರೆ.

ಕೆಪಿ ವಿವೇಕಾನಂದ ಶ್ರೀಶೈಲಗೌಡ ಅವರ ಗಂಟಲು ಹಿಡಿದು ಹಲ್ಲೆ ನಡೆಸಿರುವುದು ಹೇಡಿತನದ ಕೃತ್ಯವಾಗಿದೆ ಎಂದು ರೆಡ್ಡಿ ಆಕ್ರೋಶಗೊಂಡರು. ಬಿಆರ್ ಎಸ್ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು, ಇಲ್ಲವಾದಲ್ಲಿ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಆರ್‌ಎಸ್ ವಕ್ತಾರ ಶ್ರವಣ್ ದಾಸೋಜು ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿದಾಗ, ಗೌಡ್ ಅವರು ಬಿಆರ್‌ಎಸ್ ಶಾಸಕ ಕೆಪಿ ವಿವೇಕಾನಂದರ ತಂದೆಯ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿದರು. ಆದರೂ ಇಬ್ಬರೂ ಚರ್ಚೆಯ ಸಮಯದಲ್ಲಿ ಸಭ್ಯತೆ ಮತ್ತು ಸೌಜನ್ಯವನ್ನು ಕಾಪಾಡಿಕೊಳ್ಳಬೇಕಾಗಿತ್ತು. ಅವರಿಬ್ಬರು ಸಂಯಮದಿಂದ ವರ್ತಿಸಬೇಕಿತ್ತು ಎಂದಿದ್ದಾರೆ.

ಮೊದಲನೆಯದಾಗಿ ಗೌಡ ಅವರು ವಿವೇಕಾನಂದರ ಪೋಷಕರ ಮೇಲೆ 'ದಾಳಿ' ಮಾಡುವ ಮೂಲಕ ಚರ್ಚೆಯನ್ನು ಪ್ರಾರಂಭಿಸಬಾರದು ಮತ್ತು ಆಡಳಿತ ಪಕ್ಷದ ಶಾಸಕರು ತಮ್ಮ ಪ್ರತಿಸ್ಪರ್ಧಿಯ ಮೇಲೆ ದಾಳಿ ಮಾಡಬಾರದು. "ಇಬ್ಬರೂ ಸರಿಯಾಗಿ ವರ್ತಿಸಬೇಕಿತ್ತು ಮತ್ತು ಇಡೀ ಜಗತ್ತು ಅವರನ್ನು ನೋಡುತ್ತಿದೆ ಎಂದು ಅರಿತುಕೊಳ್ಳಬಹುದಿತ್ತು" ಎಂದು ದಾಸೋಜು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+