Chandrayaan-3: ‘ಚಂದ್ರಯಾನ’ ಬಗ್ಗೆ ಬಿಜೆಪಿ & ಕಾಂಗ್ರೆಸ್ ಫೈಟಿಂಗ್!
'ಚಂದ್ರಯಾನ-3' ಯೋಜನೆ ಯಶಸ್ವಿಯಾಗಿ ಭಾರತದ ಕೀರ್ತಿ ಮುಗಿಲೆತ್ತರಕೆ ಏರಿದೆ. ಈ ಸಾಧನೆಗಾಗಿ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ'ಗೆ ಇಡೀ ಪ್ರಪಂಚ ತಲೆಬಾಗಿದೆ. ಇಂದು ಪ್ರಧಾನಿ ಮೋದಿ ಕೂಡ ಬೆಂಗಳೂರಿಗೆ ಬಂದು, ಯೋಜನೆ ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದ್ರೆ ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್ ಜೋರಾಗಿದೆ.
ಚಂದ್ರಯಾನ-3 ಯಶಸ್ವಿಯಾಗಿ ತನ್ನ ಲ್ಯಾಂಡರ್ ಅನ್ನ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಮಾಡಿದ ಬಳಿಕ ಭಾರತದ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಇದೇ ವಿಚಾರ ದೇಶದಲ್ಲಿ ರಾಜಕೀಯ ಕಿತ್ತಾಟಕ್ಕೂ ದಾರಿ ಮಾಡಿಕೊಟ್ಟಂತೆ ಕಾಣುತ್ತಿದೆ. ಅತ್ತ ಕಾಂಗ್ರೆಸ್ ನಾಯಕರು, ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದ ಬಳಿಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನ ನೆನೆದಿದ್ದರು. ಇದೇ ವಿಚಾರಕ್ಕೆ ಸಿಕ್ಕಾಪಟ್ಟೆ ಕಿರಿಕ್ ಶುರು ಆಗಿತ್ತು. ಬಿಜೆಪಿ & ಕಾಂಗ್ರೆಸ್ ನಡುವೆ ಫೈಟ್ ಕೂಡ ನಡೆದಿತ್ತು. ಆ ಕಿಚ್ಚು ಈಗ ಮತ್ತಷ್ಟು ಹೆಚ್ಚಾಗಿದೆ.

'ಯುಪಿಎ ಸರ್ಕಾರ ತನ್ನ ಪರಿವಾರಕ್ಕೆ...'
ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿದ ಕರ್ನಾಟಕ ಬಿಜೆಪಿ, '2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಪರಿವಾರಕ್ಕೆ ಚಂದ್ರನ ಮೇಲೂ ಜಾಗ ಮೀಸಲಿಡಲು, ಚಂದ್ರಯಾನ 1 ತನ್ನ MIP ಉಪಕರಣವನ್ನು ಚಂದ್ರನ ಮೇಲೆ ಬಿಟ್ಟ ಸ್ಥಳಕ್ಕೆ ನೆಹರುರವರ ಹೆಸರಿನಂತೆ 'ಜವಾಹರ್' ಪಾಯಿಂಟ್ ಎಂದು ಹೆಸರಿಸಿತ್ತು. ಚಂದ್ರಯಾನ 2 ಮತ್ತು 3 ಇಳಿದ ಸ್ಥಳಕ್ಕೆ ಕ್ರಮವಾಗಿ ತಿರಂಗಾ ಪಾಯಿಂಟ್ ಹಾಗೂ ಶಿವಶಕ್ತಿ ಪಾಯಿಂಟ್ ಎಂದು ನಾಮಕರಣ ಮಾಡಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಭಾರತೀಯತೆಯನ್ನು ಎತ್ತಿ ಹಿಡಿದಿದೆ.' ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಪರಿವಾರಕ್ಕೆ ಚಂದ್ರನ ಮೇಲೂ ಜಾಗ ಮೀಸಲಿಡಲು, ಚಂದ್ರಯಾನ 1 ತನ್ನ MIP ಉಪಕರಣವನ್ನು ಚಂದ್ರನ ಮೇಲೆ ಬಿಟ್ಟ ಸ್ಥಳಕ್ಕೆ ನೆಹರುರವರ ಹೆಸರಿನಂತೆ ‘ಜವಾಹರ್’ ಪಾಯಿಂಟ್ ಎಂದು ಹೆಸರಿಸಿತ್ತು.
— BJP Karnataka (@BJP4Karnataka) August 26, 2023
ಚಂದ್ರಯಾನ 2 ಮತ್ತು 3 ಇಳಿದ ಸ್ಥಳಕ್ಕೆ ಕ್ರಮವಾಗಿ ತಿರಂಗಾ ಪಾಯಿಂಟ್ ಹಾಗೂ ಶಿವಶಕ್ತಿ ಪಾಯಿಂಟ್… pic.twitter.com/6TfiIucrqB
'ತೆರಿಗೆ ಹಣವನ್ನು ಈ ರೀತಿ ಪೋಲು...'
ಇದಿಷ್ಟು ಮಾತ್ರವಲ್ಲ, ಚಂದ್ರಯಾನ ಯಶಸ್ಸಿನ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದೆ. 'ಇಸ್ರೋ ಸಂಸ್ಥೆಯ ಮಹತ್ವದ ಚಂದ್ರಯಾನ-2 ವಿಫಲವಾದಾಗ, ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ಹೇಳಿಸಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ಅಮೂಲ್ಯ ಸಹಕಾರ ಹಾಗೂ ಇಸ್ರೋದ ವಿಜ್ಞಾನಿಗಳ ಶಕ್ತಿ ಭಕ್ತಿ ಯುಕ್ತಿಯ ಅವಿಶ್ರಾಂತ ಪರಿಶ್ರಮದಿಂದ ಈಗ ಚಂದ್ರಯಾನ -3 ಯಶಸ್ವಿಯಾಗಿದೆ.' ಎಂದಿದೆ ಬಿಜೆಪಿ.

ಒಟ್ಟಾರೆ 'ಚಂದ್ರಯಾನ-3' ಯೋಜನೆ ಸಕ್ಸಸ್ ಆಗಿದ್ದು, ಚಂದ್ರನ ಮೇಲೆ ಜೀವಜಲದ ಜೊತೆಗೆ ಮನುಷ್ಯರು ಬದುಕಬಲ್ಲ ವಾತಾವರಣದ ಸಂಶೋಧನೆ ನಡೆಸುತ್ತಿದೆ ಭಾರತ. ಈ ಸಂದರ್ಭದಲ್ಲೇ 'ಚಂದ್ರಯಾನ-3' ಯೋಜನೆ ಯಶಸ್ಸು ರಾಜಕೀಯ ಕಿತ್ತಾಟಕ್ಕೂ ಕಾರಣ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ಒಂದು ಕಡೆ ಪರ-ವಿರೋಧದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಇದು ಅನಗತ್ಯ ಅಂತಿದ್ದಾರೆ ಭಾರತೀಯರು. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ಕಿತ್ತಾಟ ಇನ್ನೂ ಅದೆಷ್ಟು ದಿನ ಮುಂದುವರಿಯುತ್ತೋ? ಕಾದು ನೋಡಬೇಕು.
ಇಸ್ರೋ ಸಂಸ್ಥೆಯ ಮಹತ್ವದ ಚಂದ್ರಯಾನ-2 ವಿಫಲವಾದಾಗ, ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ತನ್ನ ವಂಧಿಮಾಗದರಿಂದ ಹೇಳಿಸಿತ್ತು.
— BJP Karnataka (@BJP4Karnataka) August 26, 2023
ಆದರೆ ಪ್ರಧಾನಮಂತ್ರಿ ಶ್ರೀ @narendramodi ಅವರ ಸರ್ಕಾರದ ಅಮೂಲ್ಯ ಸಹಕಾರ ಹಾಗೂ @isroದ ವಿಜ್ಞಾನಿಗಳ ಶಕ್ತಿ-ಭಕ್ತಿ-ಯುಕ್ತಿಯ ಅವಿಶ್ರಾಂತ ಪರಿಶ್ರಮದಿಂದ ಈಗ…
ಜಗತ್ತಿಗೇ ತನ್ನ ಶಕ್ತಿ ತೋರಿಸಿದ ಭಾರತ
ಇಸ್ರೋ ಸಂಸ್ಥೆ ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಇಡೀ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದೆ. ಸೂರ್ಯನ ಬೆಳಕು ಕಾಣದ ಚಂದ್ರನ ದಕ್ಷಿಣ ಧ್ರುವದ ಮೇಲೆ ಜಗತ್ತು ಕಣ್ಣಿಟ್ಟು ಕೂತಿತ್ತು. ಆದರೆ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ಅಧ್ಯಯನ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಇಸ್ರೋ ಮಾತ್ರ ಯಾವುದೇ ಭಯವಿಲ್ಲದೆ ಚಂದ್ರನ ದಕ್ಷಿಣ ಧ್ರುವಕ್ಕೆ ನುಗ್ಗಿ ತನ್ನ ಲ್ಯಾಂಡರ್ ಅನ್ನ ಯಶಸ್ವಿಯಾಗಿ ಇಳಿಸಿದೆ. ಹಾಗೇ ಭಾರತ ಕಳುಹಿಸಿರುವ ರೋವರ್ ಚಂದ್ರನ ಮೇಲೆ ಅಧ್ಯಯನ ಶುರು ಮಾಡಿದೆ. ಆದರೆ ಇದೇ ವಿಚಾರಕ್ಕೆ ಭೂಮಿ ಮೇಲೆ ರಾಜಕೀಯ ಕಿತ್ತಾಟ ಶುರುವಾಗಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.












Click it and Unblock the Notifications