ವಿಪಕ್ಷಗಳ ಅವಿಶ್ವಾಸದ ಮೇಲೆ ಮಾತನಾಡದಂತೆ ಮಣಿಪುರ ಸಂಸದರಿಗೆ ಬಿಜೆಪಿ ಸೂಚನೆ
ನವದೆಹಲಿ, ಆಗಸ್ಟ್ 13: ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನೀರ್ಣಯ ಮೇಲೆ ಬಯಸಿದ್ದ ಮಣಿಪುರದ ಹೊರ ಕ್ಷೇತ್ರದ ನಾಗಾ ಪೀಪಲ್ಸ್ ಫ್ರಂಟ್ (NPF) ಸಂಸದ ಲೋರ್ಹೋ ಎಸ್. ಪಿಫೋಜ್ ಅವರಿಗೆ'ಮೈತ್ರಿಯಲ್ಲಿನ ಅವರ ಸ್ನೇಹಿತರು ಅದರಲ್ಲೂ ಬಿಜೆಪಿಯವರು ಈ ಕುರಿತ ಮಾತನಾಡದಂತೆ ಅನೌಪಚಾರಿಕವಾಗಿ ಸಲಹೆ ನೀಡಿದರು ಎಂದು ಸ್ವತಃ ಸಂಸದೇ ಮಾಹಿತಿ ಬಹಿರಂಗಪಡಿಸಿದ್ದಾರೆ.
ಮಣಿಪುರ ಜನಾಂಗೀಯ ಸಂಘರ್ಷದಲ್ಲಿ ಹಿಂಸಾಚಾರ ತೀವ್ರವಾಗಿದ್ದದ್ದನ್ನು ದೇಶವೇ ನೋಡಿದೆ. ಮಣಿಪುರ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಸಂಸದರು ಈ ಹಿಂಸಾಚಾರವನ್ನು ನಿಲ್ಲಿಸಬೇಕಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಮಣಿಪುರದಲ್ಲಿ ಮತ್ತೆ ಶಾಂತಿ ಮರಳಿ ತರಲು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕೇಂದ್ರ ಸರ್ಕಾರ ಅಲ್ಲಿನ ಮತದಾರರು ಹಾಗೂ ದೇಶದ ಜನರಿಗೆ ವಿಶ್ವಾಸ ನೀಡಿದೆ ಎಂದರು ಎಂದು ದಿ ಹಿಂದು ವರದಿ ಮಾಡಿದೆ.

IMD India Weather: ದೇಶದ ಈ ರಾಜ್ಯಗಳಲ್ಲಿ ಆ.14 ರವರೆಗೆ ಮಳೆ, ಪ್ರದೇಶವಾರು ಮುನ್ಸೂಚನೆ
ಮಣಿಪುರದ ಕುಕಿ-ಝೋ ವರ್ಗದವರು ಘರ್ಷನೆಯಲ್ಲಿ ಹೆಚ್ಚು ಬಳಲುತ್ತಿದ್ದು, ಅವರೆಲ್ಲ ನಮ್ಮ ಮತದಾರರು ಎಂದು ಅವರು ಹೇಳಿಕೊಂಡರು. ಅವರ ಕ್ಷೇತ್ರದಲ್ಲಿ ಬರುವ ಇತರ ಮೂರು ಜಿಲ್ಲೆಗಳ ಭಾಗಗಳಲ್ಲಿ ವಾಸಿಸುತ್ತಿದ್ದಾರೆ.
ಅಮಿತ್ ಶಾ ಮಾತನಾಡಿದ್ದಾರೆ-ನೀವು ಮಾತನಾಡುವುದು ಬೇಡ
ಮಣಿಪುರದ ವಿಚಾರವಾಗಿ ಅವಿಶ್ವಾಸ ಗೊತ್ತುವಳಿ ಮಂಡನೆ ಆಗಿದೆ ಎಂದು ತಿಳಿದು, ಸದನದಲ್ಲಿ ನಿರ್ಣಯ ಮೇಲೆ ಮಾತನಾಡಲು ಬಯಸಿದ್ದೆ. ಆದರೆ ಆಗ ಮೈತ್ರಿಕೂಟದ ನನ್ನ ಸ್ನೇಹಿತರು, ವಿಶೇಷವಾಗಿ ಬಿಜೆಪಿಯ ಕೆಲವರು ನನ್ನು ಸಂಪರ್ಕಿಸಿ ಮಾತನಾಡಬಾರದು. ಈಗಾಗಲೇ ಗೃಹ ಸಚಿವ ಅಮಿತ್ ಅವರು ಬಹಳಷ್ಟು ಮಾತನಾಡಿದ್ದು, ನೀವು ಮಾತನಾಡದಿದ್ದರೆ ಒಳಿತು ಎಂದು ಸಲಹೆ ನೀಡಿದ್ದರು. ಹೀಗಾಗಿ ನಾನು ಸ್ಪೀಕರ್ ಬಳಿ ಸಲಹೆ ಕೇಳಲಿಲ್ಲ ಎಂದರು.
ಮಣಿಪುರದ ಮತ್ತೊಬ್ಬ ಬಿಜೆಪಿ ಸಂಸದರಾದ ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವಬಿಜೆಪಿಯ ಆರ್.ಕೆ. ರಂಜನ್ ಸಿಂಗ್ ಅವರಿಗೆ ಮಾತನಾಡದಂತೆ ಸಲಹೆ ನೀಡಲಾಯಿತು.
ಮಣಿಪುರ ಹಿಂಸಾಚಾರವಾಗಿ ಮಾತನಾಡುವಾಗಿ ಆ ಬಗ್ಗೆ ಮಣಿಪುರ ಸಂಸದರನ್ನು ಮಾತನಾಡಲು ತಿಳಿಸಬೇಕು. ಆದರೆ ಹಾಗಾಗಲಿಲ್ಲ. ಸದ್ಯ ಚುನಾವಣೆಗಳು ಬರಲಿವೆ, ಮಣಿಪುರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರವು ಗಂಭೀರ ಚಿಂತಿಸಬೇಕು ಎಂದು ಲೋರ್ಹೋ ಎಸ್. ಪಿಫೋಜ್ ಹೇಳಿದರು.
ಸ್ಪೀಕರ್‌ಗೆ ಮನವಿ ಮಾಡಿದರೂ ಅವಕಾಶ ನೀಡಲಿಲ್ಲ
ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಟ್ವಿಟ್ಟರ್ (X) ನಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಭಾರತೀಯ ಸಂಸತ್ತಿನಲ್ಲಿ ನಾನು ಸೇರಿದಂತೆ ಮಣಿಪುರದ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಆದರೆ ಬಿಜೆಪಿ 2 ಸಂಸದರಿಗೆ ಅವಕಾಶ ನೀಡಲಿಲ್ಲ. ಸ್ಪೀಕರ್ ಅವರನ್ನು ಬೇಡಿಕೊಂಡರು ಸಹ ಪ್ರಧಾನಿ ಮೋದಿ ಮತ್ತು ಗೃಹ ಅಮಿತ್ ಶಾ ಅವಬ್ಬರಿಗೂ ಮಣಿಪುರ ಸಂಸದರ ಮಾತುಗಳನ್ನು ಆಲಿಸುವ ಸೂಕ್ಷ್ಮತೆ ಅಥವಾ ತಾಳ್ಮೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ವಿರುದ್ಧ ಜೈರಾಮ್ ರಮೇಶ್ ಕಿಡಿ
ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಅವರು ಆರ್.ಕೆ. ರಂಜನ್ ಸಿಂಗ್ ಅವರ ಸುದ್ದಿಯ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ಅವಿಶ್ವಾಸ ನಿರ್ಣಯ ಮೇಲೆ ಮಾತನಾಡಲು ಮಣಿಪುರದ ಬಿಜೆಪಿ ಸಂಸದರು ಮನವಿ ಮಾಡಿದರೂ ಸಹ ಸಂಸತ್ತಿನಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ದುರದೃಷ್ಟಕರ ಅಷ್ಟೇ ಅಲ್ಲ, ಮಣಿಪುರದ ಜನರಿಗೆ ಮಾಡಿ ಅವಮಾನವಾಗಿದೆ. ಮಣಿಪುರದ ಬಿಜೆಪಿ ಸಂಸದರದನ್ನು ಪಕ್ಷವೇ ಮಾತನಾಡದಂತೆ ತಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಜರಿದರು.
ಕಾಂಗ್ರೆಸ್‌ನ ರಾಹುಲ್ ಗಾಂಧಿಯನ್ನು ಬಿಜೆಪಿ ವಿಧವಿಧವಾಗಿ ಪ್ರಶ್ನಿಸಿತು. ಮಣಿಪುರದ ಕುರಿತು ಪ್ರಧಾನ ಮಂತ್ರಿಯವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಭಾಷನದಲ್ಲಿ ಪ್ರಧಾನಿ ಮೋದಿಯವರು ಹೆಚ್ಚಿನ ಸಮಯವನ್ನು ಈಶಾನ್ಯ ಪ್ರದೇಶದ ಅಭಿವೃದ್ಧಿ ಕುರಿತು ತಿಳಿಸಿದರು. ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳ ಮೇಲಿನ ಟೀಕೆಗೆ ಹೆಚ್ಚು ಸಮಯ ಕಳೆದಿದ್ದಾರೆ.
ಸಂಪೂರ್ಣ ಅವಿಶ್ವಾಸ ನಿರ್ಣಯವು ಮಣಿಪುರದ ಮೇಲೆಯೇ ಕೇಂದ್ರಿಕೃತವಾಗಿತ್ತು. ಪ್ರಧಾನಿ ಮೋದಿ ಅವರು ಮೊದಲು ಮಣಿಪುರದ ಬಗ್ಗೆ ಮಾತನಾಡಬೇಕಿತ್ತು. ನಂತರ ಅವರು ತಮ್ಮ ಪ್ರಸ್ತಾವನೆಗೆ ಅಥವಾ ಮಣಿಪುರಕ್ಕೆ ಶಾಂತಿ ಮತ್ತು ಸಹಜತೆಯನ್ನು ಮರಳಿ ತರುವುದು ಹೇಗೆ ಎಂಬ ಅವರ ಯೋಜನೆಗೆ ಸ್ವಲ್ಪ ಹೆಚ್ಚು ಸಮಯವನ್ನು ನೀಡಬೇಕಿತ್ತು ಎಂದು ಎನ್‌ಪಿಎಫ್ ಲೋರ್ಹೋ ಎಸ್ ಪಿಫೋಜ್ ಹೇಳಿದರು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications