ನಾಯಿ, ಮಂಗ ಕಚ್ಚಿದರೆ ಎರಡು ಲಕ್ಷ ಪರಿಹಾರ ಸಿಗುತ್ತೆ!

ನವದೆಹಲಿ, ಏ. 11 : ಬೀದಿ ನಾಯಿ, ಮಂಗ ಕಚ್ಚಿದರೆ ವಾರದೊಳಗೆ 2 ಲಕ್ಷ ಪರಿಹಾರ. ಬಿಡಾಡಿ ದನಗಳ ಹಾವಳಿಯಿಂದ ಗಾಯಗೊಂಡರೆ ಲಘು ಗಾಯಕ್ಕೆ 1 ಲಕ್ಷ ಮತ್ತು ಗಂಭೀರ ಗಾಯಕ್ಕೆ 2 ಲಕ್ಷ ಪರಿಹಾರ ದೊರೆಯಲಿದೆ. ಆದರೆ, ಇದು ಉತ್ತರಾಖಂಡದ ನೈನಿತಾಲ್ ಪಟ್ಟಣದಲ್ಲಿ ಮಾತ್ರ, ಪರಿಹಾರ ನೀಡಬೇಕೆಂದು ಆದೇಶ ನೀಡಿರುವುದು ಹೈಕೋರ್ಟ್.

ನ್ಯಾಯಮೂರ್ತಿ ಅಲೋಕ್ ಸಿಂಗ್, ಸರ್ವೇಶ್ ಕುಮಾರ್ ಗುಪ್ತಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೊರಡಿಸಿರುವ ಆದೇಶವಿದೆ. ಬೀದಿ ನಾಯಿ, ಮಂಗ ಕಚ್ಚಿದರೆ ವಾರದೊಳಗೆ 2 ಲಕ್ಷ ಪರಿಹಾರ ನೀಡಬೇಕು. ಇದರಲ್ಲಿ ಅರ್ಥ ಪಾಲು ಸ್ಥಳೀಯ ಪಾಲಿಕೆಯದ್ದು, ಇನ್ನರ್ಧ ಸರ್ಕಾರದ್ದು. [ಮಂಡ್ಯದಲ್ಲಿ ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು!]

dog

ಉತ್ತರಾಖಂಡದ ನೈನಿತಾಲ್‌ ಪಟ್ಟಣದಲ್ಲಿ ಮೂರು ವರ್ಷಗಳಲ್ಲಿ ಬೀದಿನಾಯ ದಾಳಿಗೆ ಒಳಗಾದವರ ಸಂಖ್ಯೆ 4000. ಈ ಕುರಿತ ಸಮಗ್ರ ವರದಿ ಪಡೆದುಕೊಂಡ ಹೈಕೋರ್ಟ್ ಸ್ಥಳೀಯ ಆಡಳಿತ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ದಂಡ ಶುಲ್ಕವನ್ನು ನಿಗದಿ ಮಾಡಿದೆ. [ಶಂಭು, ಶ್ವಾನದ ಸ್ನೇಹ ಕಥೆ ದುರಂತ ಅಂತ್ಯ]

ಬೀದಿ ನಾಯಿ, ಮಂಗ, ಬೀಡಾಡಿ ದನಗಳ ಹಾವಳಿ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಕೋರ್ಟ್‌ಗೆ ಸಂಪೂರ್ಣ ವಿವರ ನೀಡುವಂತೆ ತನ್ನ ಆದೇಶಿಸಿದೆ. ಈ ಆದೇಶ ಪ್ರಕಟವಾದ ಶುಕ್ರವಾರವೇ ನೈನಿತಾಲ್‌ನಲ್ಲಿ ಬೀದಿನಾಯಿ ಕಡಿತದ 5 ಪ್ರಕರಣಗಳು ವರದಿಯಾಗಿವೆ.

ಈ ಹೈಕೋರ್ಟ್ ತೀರ್ಪಿನಿಂದ ಉಳಿದ ಪಾಲಿಕೆಗಳು ಎಚ್ಚೆತ್ತುಕೊಂಡು ಬೀದಿನಾಯಿ, ಮಂಗ, ಬಿಡಾಡಿ ದನದ ಹಾವಳಿಯನ್ನು ತಡೆಯಲು ಯೋಜನೆ ರೂಪಿಸುತ್ತಾರೆಯೇ? ಎಂದು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+