ಸಾಂಪ್ರದಾಯಿಕ ದಿರಿಸಿನಲ್ಲಿ ಬಟ್ಟಲುಗಣ್ಣಿನ ಚೆಲುವೆ ದಿಯಾ ಮಿರ್ಜಾ

Posted By:
Subscribe to Oneindia Kannada

ಗುಜರಾತ್ ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜ್ಯಸಭೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಗುಜರಾತ್ ನಲ್ಲೇ ಕಾಂಗ್ರೆಸ್ ನಿಂದ ಒಂದೊಂದೇ ವಿಕೆಟ್ ಬೀಳುತ್ತಿದೆ. ಅಹ್ಮದ್ ಪಟೇಲ್ ಅವರಿಗೆ ಈ ಸಲ ರಾಜ್ಯಸಭಾ ಸ್ಥಾನ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಮಟ್ಟಿಗೆ ಅನುಮಾನ ಸೃಷ್ಟಿಯಾಗಿದೆ.

ಇತ್ತ ಬಿಹಾರದಲ್ಲಿ ನಿತೀಶ್ ಕುಮಾರ್ ಬಹುಮತ ಸಾಬೀತು ಮಾಡಿದ್ದಾರೆ. ಮತ್ತೆ ಎನ್ ಡಿಎ ಜತೆಗೆ ದೋಸ್ತಿ ಮಾಡಿ, ಬಹುಮತವನ್ನೂ ಸಾಬೀತು ಮಾಡಿಬಿಟ್ಟರು ನಿತೀಶ್. ಆರ್ ಜೆಡಿಯ ಲಾಲೂ ಪ್ರಸಾದ್ ಯಾದವ್ ಅಕ್ಷರಶಃ ಕನಲಿ ಕೆಂಡವಾಗಿದ್ದಾರೆ. ಉಪ ಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್, ಕಾಂಗ್ರೆಸ್ ನ ರಾಹುಲ್ ಗಾಂಧಿ..ಹೀಗೆ ಸಿಟ್ಟು ಮಾಡಿದವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ನಿತೀಶ್ ಬಗ್ಗೆ ಹೇಳಿಕೆ ನೀಡಿ ಧರ್ಮಸಂಕಟಕ್ಕೆ ಸಿಲುಕಿದ ರಾಹುಲ್

ಪನಾಮಾ ಪೇಪರ್ಸ್ ಹಗರಣದಲ್ಲಿ ಮೊದಲ ತಲೆ ದಂಡವಾಗಿದೆ. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಪದಚ್ಯುತಿಗೆ ಅಲ್ಲಿನ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತುಂಬ ಒಳ್ಳೆ ಸ್ಥಿತಿಯಲ್ಲಿದೆ. ಇನ್ನಷ್ಟು ಸುದ್ದಿ-ಚಿತ್ರ ನಿಮ್ಮ ಮುಂದೆ.

ಸಾಂಪ್ರದಾಯಿಕ ದಿರಿಸಿನಲ್ಲಿ ದಿಯಾ ಮಿರ್ಜಾ

ಸಾಂಪ್ರದಾಯಿಕ ದಿರಿಸಿನಲ್ಲಿ ದಿಯಾ ಮಿರ್ಜಾ

ನವದೆಹಲಿಯಲ್ಲಿ ತಾಜ್ ಪ್ಯಾಲೇಸ್ ನಲ್ಲಿ ಎಫ್ ಡಿಸಿಐ ಇಂಡಿಯಾ ಕಲ್ಚರ್ ವೀಕ್ 2017ರಲ್ಲಿ ಬಾಲಿವುಡ್ ನಟಿ ದಿಯಾ ಮಿರ್ಜಾ ಕಾಣಿಸಿಕೊಂಡಿದ್ದು ಹೀಗೆ.

ರಂಗನ ಹೆರಾತ್ ವಿಕೆಟ್ ಗಳಿಸಿದ ಸಂಭ್ರಮ

ರಂಗನ ಹೆರಾತ್ ವಿಕೆಟ್ ಗಳಿಸಿದ ಸಂಭ್ರಮ

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ನ ಮೂರನೇ ದಿನ ಲಂಕಾ ಕ್ಯಾಪ್ಟನ್ ರಂಗನ ಹೆರಾತ್ ವಿಕೆಟ್ ಉರುಳಿಸಿದ ಸಂಭ್ರಮದಲ್ಲಿ ಭಾರತದ ಬೌಲರ್ ರವೀಂದ್ರ ಜಡೇಜಾ

ನವಾಜ್ ಷರೀಫ್ ಪದಚ್ಯುತಿ ಸಂಭ್ರಮಾಚರಣೆ

ನವಾಜ್ ಷರೀಫ್ ಪದಚ್ಯುತಿ ಸಂಭ್ರಮಾಚರಣೆ

ಪಾಕಿಸ್ತಾನದ ಸುಪ್ರೀಂ ಕೋರ್ಟ್ ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ರನ್ನು ಪದಚ್ಯುತಗೊಳಿಸಿ ಆದೇಶ ನೀಡಿತು. ಆ ಘೋಷಣೆಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವಿರೋಧ ಪಕ್ಷದ ಬೆಂಬಲಿಗರು.

ಮಾಧ್ಯಮದ ಜತೆ ಮಾತುಕತೆ

ಮಾಧ್ಯಮದ ಜತೆ ಮಾತುಕತೆ

ಬಿಹಾರದಲ್ಲಿ ನಿತೀಶ್ ಕುಮಾರ್ ಬಹುಮತ ಸಾಬೀತು ಪಡಿಸಿದ ನಂತರ ಶುಕ್ರವಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮಾಧ್ಯಮದ ಜತೆ ಮಾತನಾಡಿದರು.

ಬಹುಮತ ಸಾಬೀತಿನ ವಿಜಯದ ಸಂಕೇತ

ಬಹುಮತ ಸಾಬೀತಿನ ವಿಜಯದ ಸಂಕೇತ

ಬಿಹಾರದಲ್ಲಿ ಶುಕ್ರವಾರ ನಿತೀಶ್ ಕುಮಾರ್ ಬಹುಮತ ಸಾಬೀತು ಪಡಿಸಿದ ನಂತರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ವಿಜಯದ ಚಿಹ್ನೆ ತೋರಿಸಿದರು.

ರಾಜ್ಯಸಭೆಗೆ ಸ್ಮೃತಿ ಇರಾನಿ ನಾಮಪತ್ರ

ರಾಜ್ಯಸಭೆಗೆ ಸ್ಮೃತಿ ಇರಾನಿ ನಾಮಪತ್ರ

ಗುಜರಾತ್ ನ ಗಾಂಧಿನಗರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದ್ದಾರೆ.

ಅಮಿತ್ ಷಾ ರಾಜ್ಯಸಭೆ ನಾಮಪತ್ರ

ಅಮಿತ್ ಷಾ ರಾಜ್ಯಸಭೆ ನಾಮಪತ್ರ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗುಜರಾತ್ ನ ಗಾಂಧಿನಗರದಲ್ಲಿ ಶುಕ್ರವಾರ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bihar political crisis, rajyasabha nomination by BJP from Gujarat and other national and international event represent through PTI photos.
Please Wait while comments are loading...