ಬಿಹಾರದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಲೇಡಿ ಬಾಂಬರ್ ಕೃತ್ಯ?
ಬೆಂಗಳೂರು, ಜ. 23: ಬಿಹಾರದ ಅರಾಹ್ ಸಿವಿಲ್ ಕೋರ್ಟ್ ಬಳಿ ಶುಕ್ರವಾರ ಬೆಳಗ್ಗೆ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಒಬ್ಬ ಪೊಲೀಸ್ ಪೇದೆ ಮತ್ತು ಮಹಿಳೆ ಮೃತಪಟ್ಟಿದ್ದು, ಒಟ್ಟು 10 ಜನ ಗಾಯಗೊಂಡಿದ್ದಾರೆ. ಸತ್ತ ಮಹಿಳೆಯೇ ಬಾಂಬ್ ತೆಗೆದುಕೊಂಡು ಹೋಗಿದ್ದಳು ಎಂದು ಹೇಳಲಾಗಿದ್ದು ಇದು ಆತ್ಮಾಹುತಿ ಬಾಂಬ್ ದಾಳಿಯೇ? ಎಂಬ ಶಂಕೆ ವ್ಯಕ್ತವಾಗಿದೆ.['ಪಶ್ಚಿಮ ಬಂಗಾಳ ಬಾಂಬ್ ರಾಜಧಾನಿ' ಎಂಬ ಟೀಕೆ ನಿಜವೇ?]

ಲೇಡಿ ಬಾಂಬರ್?
ಮಹಿಳೆ ನಿಜವಾಗಿಯೂ ಈ ಬಾಂಬ್ ಹೊತ್ತು ತಂದಿದ್ದಳೇ? ಇಲ್ಲವೇ? ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಆಕೆಯ ದೇಹ ಛಿದ್ರ ಛಿದ್ರವಾಗಿರುವುದನ್ನು ಗಮನಿಸಿದರೆ ಬಾಂಬ್ ಅವಳ ಮೈಮೇಲೆ ಇತ್ತು ಎಂಬುದು ಮೇಲ್ನೋಟಕ್ಕೆ ದೃಢಪಡುತ್ತದೆ ಎಂದು ಪೊಲೀಸರು ಹೇಳಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಚ್ಚಾ ಬಾಂಬ್ ಎಲ್ಲಿಂದ ಬಂತು?
ಸ್ಫೋಟವಾಗಿರುವುದು ಕಚ್ಚಾ ಬಾಂಬ್ ಎನ್ನುವುದರಲ್ಲಿ ಅನುಮಾನವಿಲ್ಲ. ಇದು ಉಗ್ರರ ಕೃತ್ಯವೋ? ಅಥವಾ ಹಿನ್ನೆಲೆ ಬೇರೆ ಇದೆಯೇ? ಎಂಬುದರ ಬಗ್ಗೆ ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಇನ್ನು ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಕೋಲ್ಕೊತಾದಲ್ಲಿ ಕಚ್ಚಾ ಬಾಂಬ್ ಸ್ಫೋಟ, 2 ಮಕ್ಕಳಿಗೆ ಗಾಯ]
ಪೊಲೀಸರು ಮತ್ತು ಬಾಂಬ್ ತಪಾಸಣಾ ದಳದ ಅಧಿಕಾರಿಗಳು ಪ್ರದೇಶದಲ್ಲಿ ಇನ್ನು ಹೆಚ್ಚಿನ ಸ್ಫೋಟಕಗಳಿವೆಯೇ ಎಂಬುದರ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮಹಿಳೆ ನ್ಯಾಯಾಲಯದ ಆವರಣ ಪ್ರವೇಶಿಸಿದ ಕೆಲವೇ ಕ್ಷಣದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಅನೇಕರು ನೆಲಕ್ಕೆ ಕುಸಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.












Click it and Unblock the Notifications