ಬಿಹಾರ: 3 ಬಲಿ ಪಡೆದ 'ಕೈ' ಎಂಪಿ ಭದ್ರತಾ ಸಿಬ್ಬಂದಿ ಕಾರು

Posted By:
Subscribe to Oneindia Kannada

ಸುಪೌಲ್, ಆಗಸ್ಟ್ 21: ಸುಪೌಲ್ ಸಂಸತ್ ಕ್ಷೇತ್ರದಿಂದ ಚುನಾಯಿತರಾಗಿರುವ ಕಾಂಗ್ರೆಸ್ ನ ಮಹಿಳಾ ನಾಯಕಿ ರಂಜೀತ್ ರಂಜನ್ ಅವರಿಗೆ ಸೇರಿದ ಭದ್ರತಾ ಸಿಬ್ಬಂದಿಯ ಕಾರು ಮೂವರನ್ನು ಬಲಿ ಪಡೆದ ಘಟನೆ ಸೋಮವಾರ (ಆಗಸ್ಟ್ 21) ನಡೆದಿದೆ.

ಇದು ಅಧಿಕೃತ, ಎನ್ ಡಿಎ ಮೈತ್ರಿಕೊಟದೊಳಗೆ ಜೆಡಿಯು ಸೇರ್ಪಡೆ

ಕಾಂಗ್ರೆಸ್ ನ ವಕ್ತಾರರೂ ಆಗಿರುವ ರಂಜೀತ್ ಅವರು ಸುಪೌಲ್ ನ ನಿರ್ಮಲ್- ಸಿಕರ್ಹಾತಾ ಪ್ರಾಂತ್ಯಕ್ಕೆ ಭೇಟಿ ನೀಡಿದಾಗ, ರಂಜೀತ್ ಅವರ ಭದ್ರತಾ ಸಿಬ್ಬಂದಿಯ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯ ಅಕ್ಕಪಕ್ಕದಲ್ಲಿ ನೆರೆದಿದ್ದ ಜನರ ಮೇಲೆ ಹರಿಯಿತು. ಆಗ ಹಲವಾರು ಮಂದಿ ಗಾಯಗೊಂಡರು.

Bihar: Congress MP Ranjeet Ranjan's convoy crushes 3 to death

ಈ ಘಟನೆ ಜರುಗಿದಾ ನಿರ್ಮಲ್-ಸಿಕರ್ಹಾತಾ ಪ್ರಾಂತ್ಯದ ಕಾಂಗ್ರೆಸ್ ಅಧ್ಯಕ್ಷ ರಾಮ್ ಪ್ರಸೇಸ್ ಯಾದವ್ ಅವರು, ಸ್ಥಳದಲ್ಲಿದ್ದರು. ಅವರೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.

ಇವರಲ್ಲಿ ಮೂವರು ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The convoy of Ranjeet Ranjan, the Congress spokesperson and MP from Supaul in Bihar, crushed three people to death on Monday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ