ಪ್ರಧಾನಿ ಮೋದಿ ಒಬಿಸಿ ಸ್ಥಾನಮಾನ, ಕೇಂದ್ರ ಜಾತಿ ಗಣತಿ ಬಗ್ಗೆ ಜೆಡಿ(ಯು) ಹೇಳೋದೇನು?
ಪಾಟ್ನಾ, ಅಕ್ಟೋಬರ್ 16: ಕೇಂದ್ರ ಬಿಜೆಪಿ ಸರ್ಕಾರವು ಪ್ರಧಾನಮಂತ್ರಿಗಳ ಒಬಿಸಿ ಸ್ಥಾನಮಾನ ಬಗೆಗಿನ ಸುಳ್ಳು ಮಾಹಿತಿ ಬಹಿರಂಗಗೊಳ್ಳುತ್ತದೆ ಎಂಬ ಕಾರಣಕ್ಕೆ ಜಾತಿ ಜನಗಣತಿ ನಡೆಸಲು ಹಿಂದೇಟು ಹಾಕುತ್ತಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ (ಯು) ಪಕ್ಷವು ಆರೋಪಿಸಿದೆ.
ಪಾಟ್ನಾದಲ್ಲಿರುವ ಜೆಡಿ (ಯು) ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಜೆಡಿ (ಯು) ಪಕ್ಷದ ಎಂಎಲ್‌ಸಿ ಮತ್ತು ಮುಖ್ಯ ವಕ್ತಾರ ನೀರಜ್ ಕುಮಾರ್ ಅವರು, ಪ್ರಧಾನಿ ಮೋದಿಯವರು "ಅತಿ ಪಿಚ್ಡಾ" (ಅತ್ಯಂತ ಹಿಂದುಳಿದ ವರ್ಗಗಳು) ಸಮುದಾಯಕ್ಕೆ ಸೇರಿದವರು ಎಂದು ನೀಡಿದ್ದ ಹೇಳಿಕೆಯನ್ನು ಪ್ರಶ್ನೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು 2002ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೋದಿ ಅವರ ಜಾತಿಯಾದ 'ಮೋದ್ ಘಾಂಚಿ'ಯನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂಬ ವಿಚಾರ ಪ್ರಸ್ತಾಪಿಸಿದರು. 1994 ರಲ್ಲಿ ಗುಜರಾತ್ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸಿದ್ದಾಗಲೇ ಪಟ್ಟಿಗೆ ಸೇರಿಸಲಾಗಿದೆ ಎಂದು ಜೆಡಿಎಸ್ ನಾಯಕರು ಶನಿವಾರ ತಿಳಿಸಿದ್ದಾರೆ ಎಂದರು.
ಬಿಜೆಪಿಗೆ ಸವಾಲು ಹಾಕಿದ ಜೆಡಿಯು
ಕುಮಾರ್ ಅವರು ಆ ವರ್ಷದ ಗೆಜೆಟ್ ಆಫ್ ಇಂಡಿಯಾ ಸಂಬಂಧಿ ಪತ್ರಗಳನ್ನು ಪ್ರದರ್ಶಿಸಿ, ಹಿಂದುಳಿದ ವರ್ಗಗಳ (ಒಬಿಸಿ) ಜಾತಿಗಳನ್ನು ಉಲ್ಲೇಖಿಸಿದರು. ಘಾಂಚಿ ಜಾತಿಯು ಆರು ಉಪ ಗುಂಪುಗಳನ್ನು ಹೊಂದಿದೆ. ಅದರಲ್ಲಿ 1994 ರಲ್ಲಿ ಒಬಿಸಿಗಳ ಪಟ್ಟಿಯಲ್ಲಿ ಕೇವಲ ಒಂದಾಗಿದ್ದು, ಅದು ಘಾಂಚಿ (ಮುಸ್ಲಿಂ) ಎಂದಾಗಿದೆ. ಇದನ್ನು ಬಿಜೆಪಿ ನಿರಾಕರಿಸಲಿ ಎಂದು ಅವರು ಸವಾಲು ಹಾಕಿದರು.

ಚುನಾವಣಾ ಲಾಭದ ಗೀಳಿನಿಂದಾಗಿ ಪ್ರಧಾನಿ ಮೋದಿಯವರು 'ಮೋದ್ ಘಾಂಚಿ' ಎಂದು ಸೇರಿಸಿಕೊಂಡಿದ್ದಾರೆ. 1931ರ ಜನಗಣತಿಯ ಪ್ರಕಾರ, ಪ್ರಧಾನ ಮಂತ್ರಿಯ ಜಾತಿಯು ಬ್ರಾಹ್ಮಣರಿಗೆ ಸಮಾನವಾಗಿ ಮತ್ತು ರಜಪೂತರಿಗಿಂತ ಹೆಚ್ಚಿನ ಸಾಕ್ಷರತೆಯನ್ನು ಹೊಂದಿದೆ. ಆದ್ದರಿಂದ, OBC ಗಳಿಗೆ ವಿಸ್ತರಿಸುವ ಪ್ರಯೋಜನಗಳ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
ಜೆಡಿ(ಯು) ಜಾತಿ ಸಮೀಕ್ಷೆಯಿಂದ ಸಂಚಲನ
19ನೇ ಶತಮಾನದ ಆರಂಭದಲ್ಲಿ, ಮೋದ್ ಘಾಂಚಿಗಳು ತಮ್ಮನ್ನು ಗಣತಿ ಮಾಡುವಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂಬುಕ್ಕೆ ದಾಖಲೆಗಳಿವೆ. ನಿತೀಶ್ ಕುಮಾರ್ ಅವರ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ದೇಶಾದ್ಯಂತ ಸಂಚಲನ ಮೂಡಿಸಿದೆ ಎಂದು ಜೆಡಿ (ಯು) ಪ್ರತಿಪಾದಿಸಿದೆ ಎಂದರು.
ಇನ್ನೂ ಗುಜರಾತ್‌ನಲ್ಲಿನ ಗಣತಿ, ಜಾತಿ ವಿಚಾರದಲ್ಲಿ ಸುಳ್ಳು ಬಹಿರಂಗವಾಗಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಜಾತಿ ಗಣತಿಯನ್ನು ನಡೆಸಲು ನಿರಾಕರಿಸುತ್ತಿದೆ ಎಂದು ಜೆಡಿಯು ವಕ್ತಾರರು ಪುನರುಚ್ಚರಿಸಿದರು.












Click it and Unblock the Notifications