ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮರಕ್ಕೂ ಮುನ್ನವೇ ಹಿಂದೆಸರಿದ ಮೈತ್ರಿ ಕೂಟದ ಕಿಂಗ್

By Mahesh
|
Google Oneindia Kannada News

ನವದೆಹಲಿ, ಸೆ. 03: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತ ಜನತಾ ಪರಿವಾರದಲ್ಲಿ ಒಡಕು ಮೂಡಿದೆ. ಬಿಹಾರ ಚುನಾವಣೆ ಮಹಾ ಸಮರಕ್ಕೂ ಮುನ್ನವೇ ಮೈತ್ರಿಕೂಟದ ಕಿಂಗ್ ಮುಲಾಯಂ ಸಿಂಗ್ ಯಾದವ್ ಅವರು ಶಸ್ತ್ರತ್ಯಾಗ ಮಾಡಿದ್ದಾರೆ.

ಆರು ಪಕ್ಷಗಳ ಅಧಿಕೃತ ವಿಲೀನಗೊಂಡು ನಾಲ್ಕು ತಿಂಗಳುಗಳು ಕಳೆಯುವಷ್ಟರಲ್ಲೇ ಸಮಾಜವಾದಿ ಪಕ್ಷ ಭಿನ್ನರಾಗ ಹಾಡಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಸ್ವತಂತ್ರವಾಗಿ ಸ್ಪರ್ಧೆಗಿಳಿಯಲಿದೆ ಎಂದು ಮುಲಾಯಂ ಸಿಂಗ್ ಗುರುವಾರ ಘೋಷಿಸಿದ್ದಾರೆ. ಇದರಿಂದ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಭಾರಿ ಮುನ್ನಡೆ ದೊರೆತಂತಾಗಿದೆ.

Mulayam Singh Yadav pulls out of alliance

ರಾಷ್ಟ್ರೀಯ ಜನತಾ ದಳ, ಜನತಾ ದಳ ಸೆಕ್ಯುಲರ್, ಸಮಾಜವಾದಿ ಜನತಾ ಪಕ್ಷ, ಭಾರತೀಯ ರಾಷ್ಟ್ರೀಯ ಲೋಕದಳ, ಸಮಾಜವಾದಿ ಪಕ್ಷ, ಜನತಾದಳ ಯುನೈಟೆಡ್ ಮುಖಂಡರು ಒಗ್ಗೂಡಿ ಸೇರಿಸಿದ್ದ ಮೈತ್ರಿಕೂಟಕ್ಕೆ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ನಾಯಕರನ್ನಾಗಿಸಲಾಗಿತ್ತು. ಪಕ್ಷದ ಸಂಸದೀಯ ಸಮಿತಿ ಮುಖ್ಯಸ್ಥರಾಗಿ ಸಂಸತ್ತಿನ ನಾಯಕರಾಗಿ ಕೂಡಾ ಮುಲಾಯಂ ಅವರನ್ನೇ ಆರಿಸಲಾಗಿತ್ತು.[6 ಪಕ್ಷಗಳ ವಿಲೀನ, ಜನತಾ ಪರಿವಾರಕ್ಕೆ ಮುಲಾಯಂ ಕಿಂಗ್]

ಅದರೆ, ಬಿಹಾರದಲ್ಲಿ ಎಸ್ ಪಿ ಸ್ವಂತಬಲದಿಂದ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಲಕ್ನೋದಲ್ಲಿ ಹೇಳಿದ್ದಾರೆ. ಆರ್ ಜೆ ಡಿ ಹಾಗೂ ಜೆಡಿಯು 100ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸಿಗೆ 40 ಸ್ಥಾನ ಬಿಟ್ಟುಕೊಡಲಾಗುವುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಘೋಷಿಸಿದ್ದರು.

ಮೈತ್ರಿಕೂಟದಲ್ಲಿರುವ ಎನ್ ಸಿಪಿ ಹಾಗೂ ಐಎನ್ ಎಲ್ ಡಿ ಕೂಡಾ ಇದಕ್ಕೆ ಬಹುತೇಕ ಸಮ್ಮತಿಸಿತ್ತು. ಆದರೆ, ಸೀಟು ಹಂಚಿಕೆ ಬಗ್ಗೆ ಅಪಸ್ವರ ತೆಗೆದಿರುವ ಸಮಾಜವಾದಿ ಪಕ್ಷ ಬಿಹಾರದಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ.

ಸಂಸತ್ತಿನಲ್ಲಿ ಎಸ್ ಪಿ 6 ಜನ ಸದಸ್ಯರನ್ನು ಹೊಂದಿದೆ.ಆರ್ ಜೆ ಡಿ ನಾಲ್ಕು ಜೆಡಿಯು,ಜೆಡಿಎಸ್ ಹಾಗೂ ಐಎನ್ ಎಲ್ ಡಿ ತಲಾ 2 ಸಂಸದರನ್ನು ಹೊಂದಿದೆ. ಲೋಕಸಭೆಯಲ್ಲಿ ಜನತಾ ಪರಿವಾರದ ಬಲ 15. ರಾಜ್ಯಸಭೆಯಲ್ಲಿ ಎಸ್ ಪಿ 15, ಜೆಡಿಯು 12, ಐಎನ್ ಎಲ್ ಡಿ, ಜೆಡಿಎಸ್ ಹಾಗೂ ಆರ್ ಜೆಡಿ ತಲಾ ಒಬ್ಬ ಸದಸ್ಯರನ್ನು ಹೊಂದಿದೆ. ಮೇಲ್ಮನೆಯಲ್ಲಿ ಜನತಾ ಪರಿವಾರದ ಬಲ 30.

English summary
Mulayam Singh Yadav on Thursday said his Samajwadi Party exited the ‘grand’ alliance that was formed with Nitish Kumar, Lalu Yadav, and the Congress, saying he will fight the Bihar elections alone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X