Bihar P-Marq Exit Polls: ಪಿ-ಮಾರ್ಕ್ಯೂ ಸಮೀಕ್ಷೆ ಪ್ರಕಾರ ಬಿಹಾರದಲ್ಲಿ ಚುಕ್ಕಾಣಿ ಹಿಡಿಯಲಿರುವ ಪಕ್ಷ ಯಾವ್ದು ಗೊತ್ತಾ?
Bihar Election 2025 P-Marq Exit Poll: ಬಿಹಾರ ವಿಧಾನಸಭಾ ಚುನಾವಣೆ 2025ರ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಇದೀಗ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಹಾಗಾದ್ರೆ, ಪಿ-ಪಿ-ಮಾರ್ಕ್ (P-Marq) ನಡೆಸಿದ ಸಮೀಕ್ಷೆ ಪ್ರಕಾರ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಹಾಗೂ ಎಷ್ಟು ಸ್ಥಾನಗಳು ಬರಲಿವೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಹಾರ ವಿಧಾಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಪಿ-ಪಿ-ಮಾರ್ಕ್ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿನ ನಗೆ ಬೀರಲಿದೆ. ಎನ್‌ಡಿಎ 142-162 ಸೀಟುಗಳನ್ನು ಪಡೆಯಲಿದ್ದು, ಮಹಾಘಟಬಂಧನ್ (MGB) 80-98, JSP 1-4, ಪಕ್ಷೇತರ ಮೂರು ಸ್ಥಾನಗಳನ್ನು ಪಡೆಯಲಿದೆ.

ಪಿ-ಮಾರ್ಕ್ಯೂ ಸಮೀಕ್ಷೆ: ಪಕ್ಷವಾರು ಸ್ಥಾನಗಳು
* NDA - 142-162
* MGB - 80-98
* JSP - 1-4
* OTH - 0-3
ಬಿಹಾರ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನ ನೆವಂಬರ್ 6ರಂದು ನಡೆದಿದ್ದು, ನವೆಂಬರ್ 11ರಂದು ಎರಡನೇ ಹಾಗೂ ಕೊನೇ ಹಂತದಲ್ಲಿ ಮತದಾನ ನಡೆದಿದೆ. ಇದರ ಬೆನ್ನಲ್ಲೇ ಚುನಾವಣೋತ್ತರ ಫಲಿತಾಂಶ ಕೂಡ ಹೊರಬಿದ್ದಿದೆ. ಅಧಿಕೃತವಾಗಿ ಚುನಾವಣಾ ಆಯೋಗವು ನವೆಂಬರ್ 14ರಂದು ಮತ ಎಣಿಕೆ ನಡೆಸಲಿದ್ದು, ಅಂದೇ ನಿಜವಾದ ಫಲಿತಾಂಶ ಹೊರಬೀಳಿಲಿದೆ.
ಎಲ್ಲೆಲ್ಲಿ ಎಷ್ಟು ಮತದಾನ?: ರಾಜ್ಯ ವಿಧಾನಸಭೆಗೆ ಇಂದು ನಡೆದ ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ಮಾಹಿತಿಯ ಪ್ರಕಾರ, ಎರಡನೇ ಹಂತದಲ್ಲಿ ದಾಖಲೆಯ ಶೇಕಡಾ 67.14ರಷ್ಟು ಮತದಾನ ಆಗಿದೆ.
ನವೆಂಬರ್ 6ರಂದು ಮೊದಲ ಹಂತದಲ್ಲಿ ಶೇಕಡಾ 65.09ರಷ್ಟು ಮತದಾನ ಆಗಿತ್ತು. ಎರಡನೇ ಹಂತದಲ್ಲಿ ಇದಕ್ಕೂ ಮೀರಿ ಅತ್ಯಧಿಕ ಪ್ರಮಾಣದಲ್ಲಿ ಜನರು ಮತ ಚಲಾವಣೆ ಮಾಡಿದ್ದಾರೆ. 122 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಒಟ್ಟು 3.70 ಕೋಟಿ ಮತದಾರರಿದ್ದರು.
ರಾಜ್ಯದ ಏಕೈಕ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯಾದ ಕಿಶನ್‌ಗಂಜ್‌ನಲ್ಲಿ ಇದುವರೆಗೆ ಅತಿ ಹೆಚ್ಚು ಮತದಾನ ಆಗಿರುವ ಬಗ್ಗೆ ವರದಿಯಾಗಿದೆ. ಇಲ್ಲಿ ಶೇಕಡ 76.26ರಷ್ಟು ಮತ ದಾಖಲಾಗಿದೆ. ಅದರ ಪಕ್ಕದ ಕತಿಹಾರ್ ಕ್ಷೇತ್ರದಲ್ಲಿ ಶೇಕಡ 75.23, ಪುರ್ನಿಯಾದಲ್ಲಿ ಶೇಕಡ 73.79, ಸುಪೌಲ್ನಲ್ಲಿ ಶೇಕಡ 70.69, ಅರಾರಿಯಾದಲ್ಲಿ ಶೇಕಡ 67.79ರಷ್ಟು ಮತದಾನ ಆಗಿರುವ ಬಗ್ಗೆ ವರದಿಯಾಗಿದೆ.
ಇನ್ನು ದಕ್ಷಿಣ ಬಿಹಾರ ಜಿಲ್ಲೆಗಳಾದ ಜಮುಯಿ ಕ್ಷೇತ್ರದಲ್ಲಿ ಶೇಕಡ 67.81, ಗಯಾದಲ್ಲಿ ಶೇಕಡ 67.50, ಕೈಮೂರ್ನಲ್ಲಿ ಶೇಕಡ 67.22 ಮತದಾನ ಆಗಿದೆ. ನವಾಡಾದಲ್ಲಿ ಅತ್ಯಂತ ಕಡಿಮೆ ಶೇಕಡಾ 57.31ರಷ್ಟು ಮತದಾನ ಆಗಿದೆ. ಎರಡನೇ ಹಂತದ ಚುನಾವಣೆಯಲ್ಲಿ 1,302 ಅಭ್ಯರ್ಥಿಗಳಿದ್ದರು. ಗಯಾ, ಭಾಗಲ್ಪುರ್, ಮಧುಬನಿ, ಕಟಿಹಾರ್, ಪೂರ್ಣಿಯಾ ಮತ್ತು ಪಶ್ಚಿಮ ಚಂಪಾರಣ್ ಸೇರಿದಂತೆ 20 ಜಿಲ್ಲೆಗಳ ಸಾವಿರಾರು ಬೂತ್‌ಗಳಲ್ಲಿ ಮತದಾನ ನಡೆದಿದೆ. ಇನ್ನೂ ಅಧಿಕೃತವಾಗಿ ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications