ವೈಮಾನಿಕ ದಾಳಿಯಿಂದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡ ಮಟ್ಟದ ಹಾನಿ
Recommended Video

ನವದೆಹಲಿ, ಫೆಬ್ರವರಿ 26: ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಖೈಬರ್ಕಣಿವೆಯ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮಂಗಳವಾರ ಬೆಳಗ್ಗೆ ಭಾರತೀಯ ವಾಯು ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡಮಟ್ಟದ ಹಾನಿಯಾಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.
ಭಾರತೀಯ ವಾಯುಪಡೆಯ ಮಿರಾಜ್ಜೆಟ್ ಯುದ್ಧ ವಿಮಾನ ಬಳಸಿ, ಪಾಕಿಸ್ತಾನದ ಖೈಬರ್ಪಖ್ತುಂಖ್ವಾ ಪ್ರಾಂತ್ಯದ ಬಾಲಕೋಟ್ ನಿಖರವಾದ ಸ್ಥಳವನ್ನು ಗುರುತಿಸಿ, ಉಗ್ರರ ಅಡಗುತಾಣಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ಉಳಿದಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಲಾಗಿದೆ.
ಭಾರತದ ದಾಳಿಯನ್ನು ಗುರುತಿಸಿದ ಪಾಕಿಸ್ತಾನ ಅಮೆರಿಕ ಎಫ್ -16 ವಿಮಾನಗಳನ್ನ ಕಳುಹಿಸಿ ಮಿರಾಜ್ ಹೊಡೆದುರುಳಿಸಿರುವ ಯೋಜನೆ ರೂಪಿಸಿತ್ತು. ಎಫ್ 16 ಟೆಕ್ ಆಫ್ಆಗುವಷ್ಟರಲ್ಲಿ ಮಿರಾಜ್ ತನ್ನ ಕೆಲಸ ಮುಗಿಸಿ ಭಾರತದ ನೆಲಕ್ಕೆ ವಾಪಸ್ಆಗಿತ್ತು.

ವ್ಯತಿರಿಕ್ತ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಬಲ್ಲ ಮಿರಾಜ್2000 ವಿಮಾನಗಳನ್ನೇ ಬಳಸುವ ಮೂಲಕ ಬಾಲಕೋಟ್ ನ ಜನವಸತಿ ಪ್ರದೇಶದಿಂದ ದೂರದಲ್ಲಿ ನೆಲೆಸಿದ್ದ ಉಗ್ರರ ಮೇಲೆ ನಿಖರವಾಗಿ ದಾಳಿ ನಡೆಸಲು ಸಾಧ್ಯವಾಗಿದೆ.
ಉರಿ ದಾಳಿಗಿಂತ ದೊಡ್ಡದು: 2016ರ ಸೆಪ್ಟೆಂಬರ್ 29ರಂದು ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಸಮೀಪವಿದ್ದ ಕುಪ್ವಾರ ಹಾಗೂ ಪೂಂಚ್ ಪ್ರದೇಶದಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ಗಿಂತ ಬಾಲಕೋಟ್ ದಾಳಿ ದೊಡ್ಡದು.
ಈಗ ಮಂಗಳವಾರ (ಸೆಪ್ಟೆಂಬರ್ 26)ದಂದು ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಾಕ್ ಹೇಳಿಕೊಳ್ಳುವಂತೆ ಅಜಾದ್ ಕಾಶ್ಮೀರ ನೆಲದಲ್ಲಿ ದಾಳಿ ನಡೆಸಲಾಗಿದೆ. ಯುದ್ಧ ಸಂದರ್ಭದಲ್ಲಿ ಮಾತ್ರ ಈ ಪ್ರದೇಶ ತನಕ ಭಾರತದ ವಿಮಾನಗಳು ಹಾರಾಟ ನಡೆಸಿದ್ದವು.
1971ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ರೇಡಾರ್ ವ್ಯಾಪ್ತಿಗೆ ಗೋಚರವಾಗುವಂತೆ ನುಗ್ಗಿ ಪಾಕಿಸ್ತಾನದ ವೈಮಾನಿಕ ಕ್ಷೇತ್ರದಲ್ಲೆ ದಾಳಿ ನಡೆಸಿದ್ದವು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಪಾಕಿಸ್ತಾನಿ ವಾಯು ನೆಲೆಯನ್ನು ಭಾರತೀಯ ವಿಮಾನಗಳು ದಾಟಿರಲಿಲ್ಲ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ನಿಖರ ಗುರಿಯ ಮೇಲೆ ಅಗತ್ಯವಾದ ಬಲ ಪ್ರಯೋಗ ಮಾತ್ರ ಮಾಡಲಾಗುತ್ತಿದೆ. ಆದರೆ, ಇಲ್ಲಿ ಬಳಸಲಾದ ಬಾಂಬ್ ಪ್ರಮಾಣ, ಗಾತ್ರ ಎಲ್ಲವೂ ಹಿರಿದಾಗಿದೆ. ಸುಮಾರು 1,000 ಕಿಲೋಗ್ರಾಮ್ ನಷ್ಟು ಲೇಸರ್ ನಿರ್ದೇಶಿತ ಬಾಂಬನ್ನು ಬಳಸಲಾಗಿದೆ. ಈ ತಂತ್ರಜ್ಞಾನವನ್ನು ಮೊದಲಿಗೆ ಕಾರ್ಗಿಲ್ ಯುದ್ಧದಲ್ಲಿ ಬಳಸಲಾಗಿತ್ತು.
ಅಮೆರಿಕ ಎಫ್ 16 ಯುದ್ಧ ವಿಮಾನಗಳನ್ನು ಪ್ರಯೋಗಿಸಿ, ಎಲ್ ಒಸಿ ದಾಟಿದ್ದ ಮಿರಾಜ್ 2000ಗಳನ್ನು ಹಿಂದಕ್ಕೆ ಕಳಿಸಲು ಯತ್ನಿಸುವ ಪ್ರಯತ್ನದಲ್ಲಿದ್ದಾಗಲೆ ಭಾರಿ ಆಘಾತ ನೀಡಿದ್ದು, ಭಾರತದ ವಾಯು ಸೇನೆ ಪಾಲಿನ ಅತಿದೊಡ್ಡ ದಾಳಿಯಾಗಿದೆ ಎಂದು ರಕ್ಷಣಾ ತಂತ್ರಜ್ಞರು ಹೇಳಿದ್ದಾರೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications