ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್; ಭುವನೇಶ್ವರ-ಯಶವಂತಪುರ ವಿಶೇಷ ರೈಲು ಸೇವೆ ವಿಸ್ತರಣೆ
ಬೆಂಗಳೂರು: ಪೂರ್ವ ಕರಾವಳಿ ರೈಲ್ವೆಯು ಭುವನೇಶ್ವರ- ಯಶವಂತಪುರ- ಭುವನೇಶ್ವರ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಗಳ ವಿಸ್ತರಣೆ ಮಾಡಲಾಗಿದೆ. ಸದರಿ ಮಾರ್ಗದಲ್ಲಿ ಓಡಾಡುವ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ (02811/02812) ಇವಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸೇವೆಯನ್ನು ಮುಂದಿನ ಆದೇಶದವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ತಿಳಿಸಿದರು.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಈ ಯಶವಂತಪುರ- ಭುವನೇಶ್ವರ ಎಕ್ಸ್‌ಪ್ರೆಸ್ ರೈಲುಗಳನ್ನು ಆಗಸ್ಟ್ 29ರವರೆಗೆ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿತ್ತು. ಆ ಅವಧಿ ಮುಗಿಯುವುದರೊಳಗೆ ಭುವನೇಶ್ವರ ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (02811) ಸೇವೆಯನ್ನು ಸೆಪ್ಟಂಬರ್ 05 ರಿಂದ ನವೆಂಬರ್28 ವಿಸ್ತರಣೆ ಮಾಡಲಾಗಿದೆ.

ಅದೇ ರೀತಿ, ಈ ಹಿಂದೆ ಆಗಸ್ಟ್ 31 ರವರೆಗೆ ಸಂಚರಿಸಲು ನಿಗದಿಯಾಗಿದ್ದ ಯಶವಂತಪುರ - ಭುವನೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (02812) ಸೇವೆಯನ್ನು ಸದ್ಯ ಕೈಗೊಂಡ ನಿರ್ಧಾರದ ಮೇರೆಗೆ ಸೆಪ್ಟಂಬರ್ 07ರಿಂದ ನೆವೆಂಬರ್ 30ರವರೆಗೆ ವಿಸ್ತರಣೆ ಮಾಡಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಈ ರೈಲುಗಳು ವಿಸ್ತರಿತ ಅವಧಿಯಲ್ಲಿ ಪ್ರತಿ ಮಾರ್ಗದಲ್ಲೂ 13 ಹೆಚ್ಚುವರಿ ಟ್ರಿಪ್‌ಗಳನ್ನು ಸಂಚರಿಸಲಿವೆ. ಇವುಗಳ ವೇಳಾಪಟ್ಟಿ, ನಿಲ್ದಾಣಗಳು ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ನೀವು ರೈಲ್ವೆ ಇಲಾಖೆಯ ಅಧಿಕೃತ https://indianrail.gov.in/ aDi ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಕೋರಲಾಗಿದೆ.
ಯಶವಂತಪುರ-ಚಂಡೀಗಢ ರೈಲು ತಾತ್ಕಲಿಕ ನಿಲುಗಡೆ
ಭೋಡ್ವಾಲ್ ಮಜ್ರಿಯಲ್ಲಿ ನಡೆಯುತ್ತಿರುವ 79 ನೇ ವಾರ್ಷಿಕ ಅಂತಾರಾಷ್ಟ್ರೀಯ ನಿರಂಕಾರಿ ಸಂತರ ಸಮಾಗಮಕ್ಕೆ ಹಾಜರಾಗುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಉತ್ತರ ರೈಲ್ವೆಯು ಆ ಭಾಗದಲ್ಲಿ ನಿಲುಗಡೆಗೆ ನಿರ್ಧರಿಸಿದೆ. ಯಶವಂತಪುರ-ಚಂಡೀಗಢ-ಯಶವಂತಪುರ ದ್ವೈವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳನ್ನು (22685/22686) ಭೋಡ್ವಾಲ್ ಮಜ್ರಿ (ಬಿಡಿಎಂಜೆ) ನಿಲ್ದಾಣದಲ್ಲಿ ಅಕ್ಟೋಬರ್ 01 ರಿಂದ ಅಕ್ಟೋಬರ್ 31 ರವರೆಗೆ ತಾತ್ಕಾಲಿಕ ನಿಲುಗಡೆ ಮಾಡಲಿದೆ.
ಯಶವಂತಪುರ-ಚಂಡೀಗಢ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22685) ಕ್ರಮವಾಗಿ 13:04/13:06 ಗಂಟೆಗೆ ಭೋಡ್ವಾಲ್ ಮಜ್ರಿ ನಿಲ್ದಾಣಕ್ಕೆ ಆಗಮಿಸುತ್ತದೆ/ನಿರ್ಗಮಿಸುತ್ತದೆ. ಅದೇ ರೀತಿ, ಚಂಡೀಗಢ-ಯಶವಂತಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22686) ಕ್ರಮವಾಗಿ 05:56/05:58 ಗಂಟೆಗೆ ಭೋಡ್ವಾಲ್ ಮಜ್ರಿ ನಿಲ್ದಾಣಕ್ಕೆ ಆಗಮಿಸಿ/ನಿರ್ಗಮಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications
