'ಸಾವರ್ಕರ್‌ಗೆ ಭಾರತ ರತ್ನ': ಮೊದಲ ಕಾರ್ಯಕಾರಿಣಿ ಸಭೆಯಲ್ಲಿ ಪ್ರಸ್ತಾಪಿಸಿದ ಶಿಂಧೆ ಸೇನೆಯ ಬೇಡಿಕೆಗಳಿವು..
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮಂಗಳವಾರ ತನ್ನ ಮೊದಲ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಸಿತು. ಶಿಂಧೆ ಸೇನೆಯ ಹಲವಾರು ಬೇಡಿಕೆಗಳು ಇಂತಿವೆ.
ಚುನಾವಣಾ ಆಯೋಗ ಪಕ್ಷದ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಹಂಚಿಕೆ ಮಾಡಿದ ಕೆಲವು ದಿನಗಳ ನಂತರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮಂಗಳವಾರ ತನ್ನ ಮೊದಲ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಸಿತು. ಸಭೆಯಲ್ಲಿ ಪ್ರಸ್ತಾಪಿಸಲಾದ ನಿರ್ಣಯಗಳಲ್ಲಿ ಹಿಂದುತ್ವದ ಆದರ್ಶವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ಬೇಡಿಕೆಯೂ ಸೇರಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಚರ್ಚಿಸಲಾದ ಮತ್ತೊಂದು ಪ್ರಸ್ತಾಪವೆಂದರೆ ಚರ್ಚ್‌ಗೇಟ್ ರೈಲ್ವೆ ನಿಲ್ದಾಣವನ್ನು ಮಾಜಿ ಕೇಂದ್ರ ಹಣಕಾಸು ಸಚಿವ ಚಿಂತಾಮನರಾವ್ ದೇಶಮುಖ್ ಅವರ ಹೆಸರನ್ನು ಮರುನಾಮಕರಣ ಮಾಡುವ ಬೇಡಿಕೆ ಇಡಲಾಗಿದೆ.
ಸಭೆಯಲ್ಲಿ ಚರ್ಚಿಸಲಾದ ಇತರ ಪ್ರಸ್ತಾಪಗಳು:
- ರಾಜ್ಯದಲ್ಲಿ ಮಣ್ಣಿನ ಪುತ್ರರಿಗೆ (ಭೂಮಿಪುತ್ರ) ಶೇ.80 ರಷ್ಟು ಉದ್ಯೋಗ ಒದಗಿಸುವುದು. ಎಲ್ಲ ಯೋಜನೆಗಳಲ್ಲಿ ಸ್ಥಳೀಯ ಯುವಕರಿಗೆ ಶೇ 80ರಷ್ಟು ಉದ್ಯೋಗ ನೀಡುವುದು.
- ಮರಾಠಿ ಭಾಷೆಗೆ ಗಣ್ಯ (ಅಭಿಜಾತ) ಭಾಷೆಯ ಸ್ಥಾನಮಾನ ನೀಡಲಾಗುವುದು.
- UPSC ಮತ್ತು MPSC ಯ ಮರಾಠಿ ವಿದ್ಯಾರ್ಥಿಗಳಿಗೆ ಬಲವಾದ ಬೆಂಬಲವನ್ನು ಒದಗಿಸುವುದು.

ಪ್ರಾಸಂಗಿಕವಾಗಿ, ಶಿವಸೇನೆ ಸಾವರ್ಕರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಬೇಕೆಂದು ಒತ್ತಾಯಿಸಿದೆ.
ಕಳೆದ ವಾರ ಭಾರತೀಯ ಚುನಾವಣಾ ಆಯೋಗ ಶಿವಸೇನೆ ಮತ್ತು ಪಕ್ಷದ ಬಿಲ್ಲು ಬಾಣದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ಹಂಚಿತ್ತು. ಕಳೆದ ವರ್ಷ ಶಿಂಧೆ ಬಂಡಾಯದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಹೋರಾಡುತ್ತಿರುವ ಉದ್ಧವ್ ಠಾಕ್ರೆ ಬಣಕ್ಕೆ ಇದು ಭಾರಿ ಹೊಡೆತವಾಗಿದೆ.












Click it and Unblock the Notifications