ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಭೇಟಿಯಾಗಿ ಭಾವುಕಳಾದ ಯುವತಿ

|
Google Oneindia Kannada News

ಯುವತಿಯೊಬ್ಬಳು ರಾಹುಲ್ ಗಾಂಧಿಯನ್ನು ಭೇಟಿಯಾಗಿ ಭಾವುಕಳಾಗಿ ಕಣ್ಣೀರಾಕಿದ ಘಟನೆ ಕೇರಳದಲ್ಲಿ ನಡೆದಿದೆ. ಮಾತ್ರವಲ್ಲದೆ ಯುವತಿ ರಾಹುಲ್ ಗಾಂಧಿಯವರನ್ನು ಕಂಡು ಸಂತೋಷದಿಂದ ಜಿಗಿದಾಡಿದ್ದಾಳೆ. ನಗುತ್ತಾಳೆ ಮತ್ತು ಅದೇ ಸಮಯದಲ್ಲಿ ಅಳುತ್ತಾಳೆ. ಅವಳ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ. ಇಂತಹ ಪ್ರತಿಕ್ರಿಯೆಗಳನ್ನು ಸಾಮಾನ್ಯವಾಗಿ ನಟರು ಅಥವಾ ಪಾಪ್ ತಾರೆಗಳನ್ನು ನೋಡಿದಾಗ ಕಂಡುಬರುತ್ತವೆ. ಆದರೆ ಇದು ರಾಜಕಾರಣಿ ವಿಚಾರಕ್ಕೆ ನಡೆದಿದೆ.

ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಕಂಡು ಕೇರಳದಲ್ಲಿ ಯುವತಿಯೊಬ್ಬಳು ಭಾವುಕಳಾಗಿದ್ದಾಳೆ. ಇತರರು ಅವಳ ಉತ್ಸಾಹವನ್ನು ನೋಡಿ ಮುಗುಳ್ನಕ್ಕಾಗ ರಾಹುಲ್ ಗಾಂಧಿ ಅವಳನ್ನು ಆಲಂಗಿಸಿದರು. ಜೊತೆಗೆ ಅವಳನ್ನು ಶಾಂತಗೊಳಿಸಲು ಪ್ರಯತ್ನಿಸಿದರು.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಇಂದು 18 ನೇ ದಿನ. ಕೇರಳದಲ್ಲಿ ರಾಹುಲ್ ಗಾಂಧಿ ಮೆರವಣಿಗೆ ಹೊರಟಿದ್ದಾರೆ. ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಅನುಯಾಯಿಗಳು ಅವರೊಂದಿಗಿದ್ದರು. ಈ ವೇಳೆ ಯುವತಿ ರಾಹುಲ್ ಗಾಂಧಿ ಅವರನ್ನು ಕಂಡು ಭಾವುಕಳಾಗಿ ಕುಣಿದಾಡಿದ್ದಾಳೆ. ಇಲ್ಲಿನ ಪಂಡಿಕ್ಕಾಡ್ ಶಾಲಾ ಪಾಡಿಯಿಂದ ಆರಂಭವಾದ ಮೆರವಣಿಗೆ ಬೆಳಗ್ಗೆ 10.30ರ ಸುಮಾರಿಗೆ ವಂಡೂರು ಜಂಕ್ಷನ್‌ನಲ್ಲಿ ವಿರಾಮಕ್ಕೆ ನಿಂತು ಮುನ್ನಡೆದಿದೆ.

ಇದು ಹಗಲಿನಲ್ಲಿ ವಯನಾಡು ಕ್ಷೇತ್ರವನ್ನು ಪ್ರವೇಶಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ. 3,570 ಕಿ.ಮೀ ಮತ್ತು 150 ದಿನಗಳ ಸುದೀರ್ಘ ಪಾದಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

Bharat Jodo Yatra: Young woman gets emotional after meet Rahul Gandhi

ಸೆಪ್ಟೆಂಬರ್ 10 ರಂದು ಕೇರಳವನ್ನು ಪ್ರವೇಶಿಸಿದ ಯಾತ್ರೆಯು 450 ಕಿಲೋಮೀಟರ್‌ಗಳನ್ನು ಕ್ರಮಿಸಲಿದ್ದು, ಅಕ್ಟೋಬರ್ 1 ರಂದು ಕರ್ನಾಟಕವನ್ನು ಪ್ರವೇಶಿಸುವ ಮೊದಲು ಏಳು ಜಿಲ್ಲೆಗಳನ್ನು ಮುಟ್ಟಲಿದೆ.

English summary
Bharat Jodo Yatra: A video of a young woman crying after meet the Rahul Gandhi has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X