ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಮೂಗಿನ ಲಸಿಕೆ; ಏಮ್ಸ್‌ನಲ್ಲಿ 2/3ನೇ ಹಂತದ ಪ್ರಯೋಗ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ಕೊರೊನಾ ಸೋಂಕಿನ ವಿರುದ್ಧ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ, ಮೂಗಿನ ಮೂಲಕ ನೀಡುವ ಲಸಿಕೆಯ 2/3ನೇ ಹಂತದ ಪ್ರಯೋಗವು ಇನ್ನೆರಡು ವಾರಗಳಲ್ಲಿ ಆರಂಭವಾಗಲಿದೆ.

ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಯಲಿದೆ. ಆಗಸ್ಟ್‌ ತಿಂಗಳಿನಲ್ಲಿಯೇ ಭಾರತ್ ಬಯೋಟೆಕ್ ಸಂಸ್ಥೆ, ಮೂಗಿನ ಮೂಲಕ ನೀಡುವ ಲಸಿಕೆ BBV154 ಪ್ರಯೋಗ ನಡೆಸಲು ಕೇಂದ್ರದಿಂದ ಅನುಮೋದನೆ ಪಡೆದುಕೊಂಡಿದೆ. ಈ 2/3ನೇ ಹಂತದ ಪ್ರಯೋಗಗಳಿಗೆ, ಏಮ್ಸ್‌ ಎಥಿಕ್ಸ್‌ ಸಮಿತಿಯಿಂದ ಅನುಮತಿ ಕಡ್ಡಾಯವಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.

ದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆ

ಅನುಮೋದನೆ ಸ್ವೀಕರಿಸಿದ ನಂತರ ನಾಲ್ಕು ವಾರಗಳ ಅಂತರದೊಂದಿಗೆ ಎರಡು ಡೋಸ್‌ಗಳ ಲಸಿಕೆಯನ್ನು ಸ್ವಯಂ ಕಾರ್ಯಕರ್ತರಿಗೆ ನೀಡಿ ಪ್ರಯೋಗಕ್ಕೆ ಒಳಪಡಿಸಲಾಗುವುದು. ಈ ಪ್ರಯೋಗಗಳನ್ನು ಡಾ. ಸಂಜಯ್ ರೈ ನೇತೃತ್ವದಲ್ಲಿ ನಡೆಸಲಾಗುವುದು. ಎರಡನೇ ಹಂತದ ಪ್ರಯೋಗ ಸಂಪೂರ್ಣಗೊಂಡ ನಂತರವೇ ಮೂರನೇ ಹಂತದ ಪ್ರಯೋಗ ಆರಂಭವಾಗಲಿದೆ.

 Bharat Biotechs Nasal Covid 19 Vaccine Trial To Begin In AIIMS Shortly

ದೇಶದಲ್ಲಿ ಮಾನವ ಪ್ರಯೋಗಕ್ಕೆ ಒಳಗಾದ ಮೊದಲ ನಾಸಿಕ ಲಸಿಕೆ BBV154 ಆಗಿದೆ. ಮೊದಲ ಹಂತದ ಪ್ರಯೋಗವನ್ನು 18-60 ವಯಸ್ಸಿನವರ ಮೇಲೆ ನಡೆಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ ಎಂದು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸೋಸಿಯೇಟ್ ಕೌನ್ಸಿಲ್ (ಬಿಐಆರ್‌ಎಸಿ) ಬೆಂಬಲದೊಂದಿಗೆ ಲಸಿಕೆ ಅಭಿವೃದ್ಧಿಗೊಂಡಿದೆ.

ಕೊನೆಯ ಹಂತದ ಪ್ರಯೋಗವನ್ನು ತಲುಪಿದ ದೇಶದ ಮೊದಲ ನಾಸಿಕ ಲಸಿಕೆ ಇದಾಗಿದೆ ಎಂದು ಡಿಬಿಟಿ ಕಾರ್ಯದರ್ಶಿ ಡಾ. ರೇಣು ಸ್ವರೂಪ್ ಹೇಳಿದ್ದಾರೆ.

ಭಾರತ್ ಬಯೋಟೆಕ್‌ನ ನೇಸಲ್ ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮೋದನೆಭಾರತ್ ಬಯೋಟೆಕ್‌ನ ನೇಸಲ್ ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮೋದನೆ

ಭುವನೇಶ್ವರ, ಪುಣೆ, ನಾಗಪುರ ಮತ್ತು ಹೈದರಾಬಾದ್‌ನ ನಾಲ್ಕು ಕೇಂದ್ರಗಳಲ್ಲಿ ಮೊದಲ ಹಂತಗಳಲ್ಲಿ 18-65 ವರ್ಷದೊಳಗಿನ ಕನಿಷ್ಠ 30-45 ಆರೋಗ್ಯವಂತ ಸ್ವಯಂಸೇವಕರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

 Bharat Biotechs Nasal Covid 19 Vaccine Trial To Begin In AIIMS Shortly

ಇತರೆ ಕೊರೊನಾ ಲಸಿಕೆಗಳನ್ನು ಸ್ನಾಯುವಿನ ಮೂಲಕ ನೀಡಲಾಗುತ್ತದೆ. ಆದರೆ ನಾಸಲ್ ವ್ಯಾಕ್ಸಿನ್ ಅನ್ನು ಸೋಂಕು ಹರಡುವ ಮೂಲ ಜಾಗವಾದ ಮೂಗಿನ ಮೂಲಕವೇ ನೀಡಲಾಗುತ್ತದೆ. ಈ ಲಸಿಕೆ ದೇಹದಾದ್ಯಂತ ಬಲವಾದ ಪ್ರತಿರಕ್ಷಣಾ ಸ್ಪಂದನೆ ನೀಡುತ್ತದೆ ಎಂದು ಕೆಲವು ಅಧ್ಯಯನಗಳು ಸಾಬೀತುಪಡಿಸಿವೆ.

'ನಾವು ಮೂಗಿನ ಮೂಲಕ ನೀಡಲಾಗುವ ಲಸಿಕೆಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ವಾಷಿಂಗ್ಟನ್‌ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಜತೆ ಪಾಲುದಾರಿಕೆ ಹೊಂದಿದ್ದೇವೆ. ಮೂಗಿನ ಲಸಿಕೆ ಅತ್ಯುತ್ತಮ ಆಯ್ಕೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಕೊರೊನಾ ವೈರಸ್ ಮೂಗಿನ ಮೂಲಕ ದಾಳಿ ನಡೆಸಬಹುದಾದ್ದರಿಂದ ಇದು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ' ಎಂದು ಭಾರತ್ ಬಯೋಟೆಕ್ ಮುಖ್ಯಸ್ಥ ಕೃಷ್ಣ ಎಲ್ಲಾ ಹೇಳಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧ ದೇಶದಲ್ಲಿ ಮೊದಲು ಲಸಿಕೆ ಉತ್ಪಾದನೆ ಮಾಡಿದ ಸಂಸ್ಥೆಯಲ್ಲಿ ಭಾರತ್ ಬಯೋಟೆಕ್ ಒಂದಾಗಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಾಗೂ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್‌ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾಗುತ್ತಿದೆ.

ಕೊರೊನಾ ಸೋಂಕಿನ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ 77.8% ದಕ್ಷತೆ ತೋರಿದೆ.

ಚೀನಾದಲ್ಲಿ ಮೂಗಿನ ಮೂಲಕ ಸಿಂಪಡಿಸುವ ಲಸಿಕೆ: ಕೊರೊನಾ ಸೋಂಕಿನ ವಿರುದ್ಧ ಚೀನಾದಲ್ಲಿ ಮೂಗಿಗೆ ಸಿಂಪಡಿಸುವ ಲಸಿಕೆ ಕೂಡ ಪ್ರಾಯೋಗಿಕ ಹಂತದಲ್ಲಿದೆ. ಹಾಂಕಾಂಗ್ ವಿಶ್ವವಿದ್ಯಾಲಯ, ಕ್ಸಿಯಾಮೆನ್ ವಿಶ್ವವಿದ್ಯಾಲಯ ಮತ್ತು ಬೀಜಿಂಗ್ ವಾಂಟೈ ಬಯೊಲಾಜಿಕಲ್ ಫಾರ್ಮಸಿಯ ಸಂಶೋಧಕರು ಜತೆಗೂಡಿ ಲಸಿಕೆ ಅಭಿವೃದ್ಧಿಪಡಿಸಿದ್ದು, ಮೂಗಿಗೆ ಸಿಂಪಡಿಸುವ ಲಸಿಕೆಯ ಮೊದಲ ಹಂತದ ಪ್ರಯೋಗವು ನವೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ 100 ಮಂದಿ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ಮೂರು ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಲು ಇನ್ನೂ ಒಂದು ವರ್ಷ ಬೇಕಾಗಬಹುದು ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ಮೈಕ್ರೊಬಯಾಲಜಿಸ್ಟ್ ಯುಯೆನ್ ಕ್ವೊಕ್ ಯುಂಗ್ ತಿಳಿಸಿದ್ದಾರೆ.

English summary
AIIMS to begin Phase 2/3 trials of Bharat Biotech’s nasal Covid-19 vaccine within couple of weeks
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X