ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಗಳಿಗೆ ಸಿಹಿ ಸುದ್ದಿ; ಕೊವ್ಯಾಕ್ಸಿನ್ ಲಸಿಕೆ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 29; ಕೋವಿಶೀಲ್ಡ್‌ ಬಳಿಕ ಕೊರೊನಾ ಸೋಂಕಿನ ವಿರುದ್ಧದ ಕೊವ್ಯಾಕ್ಸಿನ್ ಬೆಲೆಯನ್ನು ಸಹ ಇಳಿಕೆ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ 600 ರೂ. ಬದಲು 400 ರೂ.ಗಳಿಗೆ ಲಸಿಕೆ ಸಿಗಲಿದೆ.

ಭಾರತ್ ಬಯೋಟೆಕ್ ಕಂಪನಿ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಬೆಲೆಯನ್ನು ಗುರುವಾರ ಕಡಿಮೆ ಮಾಡಲಾಗಿದೆ. ಸೆರಮ್ ಇನ್‌ಸ್ಟಿಟ್ಯೂಟ್ ಬುಧವಾರ ಲಸಿಕೆ ಬೆಲೆಯನ್ನು ಇಳಿಕೆ ಮಾಡುವುದಾಗಿ ಘೋಷಣೆ ಮಾಡಿತ್ತು.

ಮಂಗಳೂರಿನಲ್ಲಿ ಕೊರೊನಾ ಲಸಿಕೆ ಪಡೆಯಲು ಮುಗಿಬಿದ್ದ ಜನರುಮಂಗಳೂರಿನಲ್ಲಿ ಕೊರೊನಾ ಲಸಿಕೆ ಪಡೆಯಲು ಮುಗಿಬಿದ್ದ ಜನರು

ಕೋವಿಶೀಲ್ಡ್ ಲಸಿಕೆ ಬೆಲೆಯನ್ನು 400 ರೂ. ನಿಂದ 300 ರೂ.ಗೆ ಇಳಿಕೆ ಮಾಡಲಾಗಿತ್ತು. ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಬೆಲೆಯನ್ನು 600 ರೂ. ನಿಂದ 400 ರೂ.ಗಳಿಗೆ ಕಡಿತಗೊಳಿಸಿದೆ.

ಸಿಹಿ ಸುದ್ದಿ; ಲಸಿಕೆ ದರವನ್ನು ಕಡಿತಗೊಳಿಸಿದ ಕೋವಿಶೀಲ್ಡ್‌ ಸಿಹಿ ಸುದ್ದಿ; ಲಸಿಕೆ ದರವನ್ನು ಕಡಿತಗೊಳಿಸಿದ ಕೋವಿಶೀಲ್ಡ್‌

Bharat Biotech Reduced Price Of Covaxin

ಮೇ 1 ರಿಂದ ದೇಶದಲ್ಲಿ 18 ರಿಂದ 45 ವರ್ಷದ ಎಲ್ಲಾ ಜನರಿಗೂ ಕೋವಿಡ್ ಸೋಂಕಿನ ವಿರುದ್ಧದ ಲಸಿಕೆಯನ್ನು ನೀಡಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆಗಳ ಬೆಲೆ ಇಳಿಕೆ ಮಾಡಬೇಕು ಎಂದು ಲಸಿಕೆ ತಯಾರಿಕಾ ಕಂಪನಿಗೆ ಪತ್ರವನ್ನು ಬರೆದಿತ್ತು.

ದೇಶದಲ್ಲಿ ಇದುವರೆಗೂ 15 ಕೋಟಿ ಜನರಿಗೆ ಕೊರೊನಾ ಲಸಿಕೆದೇಶದಲ್ಲಿ ಇದುವರೆಗೂ 15 ಕೋಟಿ ಜನರಿಗೆ ಕೊರೊನಾ ಲಸಿಕೆ

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಉತ್ಪಾದನಾ ಕಂಪನಿಗಳು ಶೇ 50ರಷ್ಟು ಲಸಿಕೆಯನ್ನು ಪ್ರತಿ ಡೋಸ್‌ಗೆ 150 ರೂ. ನಂತೆ ಕೇಂದ್ರ ಸರ್ಕಾರಕ್ಕೆ ಪೂರೈಕೆ ಮಾಡಲಿವೆ. ಉಳಿದ ಲಸಿಕೆಯನ್ನು ರಾಜ್ಯಗಳು, ಖಾಸಗಿ ಆಸ್ಪತ್ರೆ ಮತ್ತು ವಿದೇಶಗಳಿಗೆ ಪೂರೈಕೆಯಾಗಲಿದೆ.

English summary
Bharat Biotech has reduced the price of its Covaxin. For state governments from it will available for 400 per dose. For private hospitals at the cost of 1,200 per dose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X