ಜಾತಿ ಆಧಾರಿತ ಮೀಸಲಾತಿ ವಿರೋಧಿಸಿ ಇಂದು' ಭಾರತ್ ಬಂದ್'
ನವದೆಹಲಿ, ಏಪ್ರಿಲ್ 10: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಅನೌಪಚಾರಿಕವಾಗಿ ಭಾರತ್ ಬಂದ್ ಗೆ ಕರೆನೀಡಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಂದ್ ಕುರಿತು ಮಾಹಿತಿ ಲಭ್ಯವಾಗಿದ್ದು ಈಇ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಲಭ್ಯವಿಲ್ಲ.
ಆದರೂ ಬಂದ್ ನಿಮಿತ್ತ ಸೂಕ್ಷ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಕಳೆದ ವಾರವಷ್ಟೇ(ಏ.2) ಪರಿಶಿಷ್ಠ ಜಾತಿ/ ಪಂಗಡ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ವಿವಿಧ ದಲಿತ ಸಂಘಟನೆಗಳು ನಡೆಸಿದ್ದ ಭಾರತ್ ಬಂದ್ ಗೆ 10 ಕ್ಕೂ ಹೆಚ್ಚು ಜನ ಮೃತರಾಗಿದ್ದರು.
ಈ ಹಿಂಸೆಯನ್ನು ವಿರೋಧಿಸಿಯೂ ಇಂದು ಬಂದ್ ನಡೆಯುತ್ತಿದೆ. ಆದರೆ ಇಂದಿನ ಬಂದ್ ಗೆ ಕರೆ ನೀಡಿದ್ದು ತಾವೇ ಎಂದು ಯಾವ ನಿರ್ದಿಷ್ಟ ಸಂಘಟನೆಗಳೂ ಹೇಳಿಲ್ಲ. ಕೇವಲ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಲಭ್ಯವಾಗಿದೆಯಷ್ಟೇ.

"ಬಂದ್ ಕುರಿತು ನಮಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೂ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಸೂಕ್ತ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ" ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications