ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್: ಎಲ್ಲಿಯೂ ಪ್ರತಿಭಟನೆಯ ಬಿಸಿ ತಟ್ಟಿಲ್ಲ!

|
Google Oneindia Kannada News

ಬೆಂಗಳೂರು, ಜನವರಿ 09: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಮತ್ತು ಬುಧವಾರ(ಜ.8-9), ಕಾರ್ಮಿಕ ಸಂಘಟನೆಗಳು ಕರೆನೀಡಿದ್ದ 'ಭಾರತ್ ಬಂದ್' ಗೆ ಮಂಗಳವಾರ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಜನವರಿ 9ರಂದು ಯಾವ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಜನವರಿ 9ರಂದು ಯಾವ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಮುಷ್ಕರ ಆರಂಭವಾಗಿದ್ದು, ಜನವರಿ 9 ರ ಸಂಜೆ 5 ರವರೆಗೂ ಮುಂದುವರಿಯಲಿದೆ.

ಚಿತ್ರಗಳು : ಕಾರ್ಮಿಕ ಸಂಘಟನೆಗಳ ಭಾರತ್ ಬಂದ್ ಹೇಗಿತ್ತು

Bharat Bandh still continuing on Jan 9: LIVE updates

ಬಂದ್ ಕಾರಣ ಇಂದು ಸಹ ಕರ್ನಾಟಕದ ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿದ್ದು, ಉಬರ್ ಮತ್ತು ಓಲಾ ಕ್ಯಾಬ್ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ.

ಭಾರತ್ ಬಂದ್‌: ಯಾವ ಜಿಲ್ಲೆಗಳಲ್ಲಿ ಹೇಗೆ ನಡೀತಿದೆ ಬಂದ್ ಭಾರತ್ ಬಂದ್‌: ಯಾವ ಜಿಲ್ಲೆಗಳಲ್ಲಿ ಹೇಗೆ ನಡೀತಿದೆ ಬಂದ್

ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಭಾರತ್ ಬಂದ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
3:05 PM, 9 Jan

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾರ್ಮಿಕರ ಪ್ರತಿಭಟನೆ. ರಸ್ತೆಯಲ್ಲೇ ಕೂತು ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು
1:31 PM, 9 Jan

ಟೌನ್ ಹಾಲ್ ನಿಂದ ರಾಜಭವನದ ವರೆಗೆ ಬೃಹತ್ rally. ಬಿಗಿ ಪೊಲೀಸ್ ಬಂದೋಬಸ್ತ
11:37 AM, 9 Jan

ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿರುವ ಪ್ರತಿಭಟನಕಾರರು
10:58 AM, 9 Jan

ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಮೆಟ್ರೋ ಮೊರೆಹೋಗಿದ್ದಾರೆ
10:35 AM, 9 Jan

ಹುಬ್ಬಳ್ಳಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಮುಚ್ಚಿದ್ದ 16 ಅಂಗಡಿಗಳಲ್ಲಿ ಕಳವು
10:33 AM, 9 Jan

ಬೆಂಗಳೂರಿನ ಟೌನ್ ಹಾಲ್ ಬಳಿ ಕಾರ್ಮಿಕರ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತ್
10:09 AM, 9 Jan

ರಾಮನಗರ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಯಥಾಸ್ಥಿತಿ, ಬಂದ್ ಪ್ರಭಾವ ಕಾಣಿಸುತ್ತಿಲ್ಲ
Advertisement
10:07 AM, 9 Jan

ಹುಬ್ಬಳ್ಳಿಯಲ್ಲಿ ಎಂದಿನಂತೇ ಶಾಲಾ-ಕಾಲೇಜ್, ಹೊಟೇಲ್, ಪೆಟ್ರೋಲ್ ಬಂಕ್ ತೆರೆದಿದ್ದು, ಬಸ್ ಸಂಚಾರವೂ ಆರಂಭವಾಗಿದೆ.
10:06 AM, 9 Jan

ಬಸ್ ಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಬಿಎಂಟಿಸಿ ಅಧಿಕಾರಿಗಳು
9:30 AM, 9 Jan

ಕೊಪ್ಪಳದ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ರಜೆ ನೀಡದಿದ್ದರೂ ಜಿಲ್ಲಾಧಿಕಾರಿ ಆದೇಶಕ್ಕೂ ಕ್ಯಾರೇ ಎನ್ನದೆ ಕಾಲೇಜಿಗೆ ಹಾಜರಾಗದ ಉಪನ್ಯಾಸಕರು
9:16 AM, 9 Jan

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಬಂದ್
9:03 AM, 9 Jan

ಬೆಂಗಳೂರಿನ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ
Advertisement
7:55 AM, 9 Jan

ಬಸ್ ಗಳ ಸಂಖ್ಯೆ ಇಳಿಮುಖ: ಪ್ರಯಾಣಿಕರ ಪರದಾಟ
7:55 AM, 9 Jan

ಡಿಪೋಗಳಿಂದ ಬಿಎಂಟಿಸಿ ಬಸ್ ಹೊರಬಿಡದಂತೆ ಸೂಚನೆ
7:05 AM, 9 Jan

ಏರ್ ಪೂರ್ಟ್ ರಸ್ತೆ, ಸುಂಕದಕಟ್ಟೆ ಮುಂತಾದ ಕಡೆಗಳಲ್ಲಿ ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲುತೂರಾಟ
6:53 AM, 9 Jan

ಹುಬ್ಬಳ್ಳಿಯಲ್ಲಿ ಬಂದ್ ಬಿಸಿ ತಟ್ಟಿದ ಕುರುಹುಗಳು ಕಂಡುಬರುತ್ತಿಲ್ಲ. ಜನಜೀವನ ಸಹಜ ಸ್ಥಿತಿಗೆ ಮರಳಿದೆ.
6:52 AM, 9 Jan

ಬಿಎಂಟಿಸಿ ಬಸ್ ಸಂಚಾರ ಆರಂಭಿಸಿದ್ದವಾದರೂ, ಕೆಲವೆಡೆ ಬಸ್ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣಗಳು ಕೇಳಿಬಂದ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ
6:48 AM, 9 Jan

ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಬಂದ್ ನಡೆಯುತ್ತಿದೆ.
6:48 AM, 9 Jan

ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಮಸೂದೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ರೂ.100ರಿಂದ ಕನಿಷ್ಠ ರೂ.500 ಹಾಗೂ ಗರಿಷ್ಠ 500, ಅತಿವೇಗಕ್ಕೆ ರೂ.400 ರಿಂದ ರೂ.1000, ನಿರ್ಲಕ್ಷ್ಯದ ಚಾಲನೆಗೆ ರೂ.1000 ರಿಂದ ರೂ.5000 ಹೆಚ್ಚಿಸಲಾಗಿದೆ ಇದನ್ನು ವಿರೋಧಿಸಿ ಬಂದ್ ನಡೆಯಗುತ್ತಿದೆ.
6:44 AM, 9 Jan

ಆಂಬುಲೆನ್ಸ್ ಗೆ ದಾರಿ ಬಿಡದಿರುವುದಕ್ಕೆ ರೂ.10 ಸಾವಿರ ದಂಡ ಮತ್ತು 6 ತಿಂಗಳ ಜೈಲು ವಿಧಿಸಲಾಗುತ್ತದೆ. ವಿಮೆ ಇಲ್ಲದೆ ಚಾಲನೆಗೆ ರೂ.2 ಸಾವಿರ ದಂಡ ಮತ್ತು ಆರು ತಿಂಗಳ ಜೈಲು ವಿಧಿಸಲಾಗುತ್ತದೆ ಇದಕ್ಕೆ ಮುಷ್ಕರನಿರತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
6:43 AM, 9 Jan

ಎಐಟಿಯುಸಿ, ಸಿಐಟಿಯು, ಐಎನ್ ಟಿಯುಸಿ, ಎಲ್‌ಪಿಎಫ್ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ರಾಷ್ಟ್ರವ್ಯಾಪ್ತಿ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಂಡಿವೆ.
6:41 AM, 9 Jan

ಪ್ರತಿಭಟನಕಾರರು ಹೊಸ ಪಿಂಚಣಿ ವ್ಯವಸ್ಥೆಯನ್ನು ವಿರೋಧಿಸಿ ಮತ್ತು ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ. ಸಾರ್ವತ್ರಿಕ ಸಾಮಾಜಿಕ ಭದ್ರತೆ, ಕಾರ್ಮಿಕರ ವೇತನ ಹೆಚ್ಚಳ, ಸಾರ್ವಜನಿಕ ಮತ್ತು ಸರ್ಕಾರಿ ವಿಭಾಗಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿಯೂ ಬಂದ್ ನಡೆಯುತ್ತಿದೆ.

English summary
Trade unions call 2 days bharat bandh on Jan 8 and 9. On 8th bandh got mixed reactions in the country. Today also it will be continuing. Here are the LIVE updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X