ಡಿಸೆಂಬರ್ 8ಕ್ಕೆ ಭಾರತ ಬಂದ್: ನೀವು ತಿಳಿಯಬೇಕಾದ ಅಂಶಗಳು

ನವದೆಹಲಿ, ಡಿಸೆಂಬರ್ 07: ಕೇಂದ್ರ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿಯಲ್ಲಿ ವಾರಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಭಾರತ ಬಂದ್‌ಗೆ ಕರೆ ನೀಡಿದ್ದಾರೆ.

ಡಿಸೆಂಬರ್ 8 ರಂದು ಭಾರತ ಬಂದ್ ನಡೆಯಲಿದೆ. ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಬೆಂಬಲ ನೀಡಿವೆ.

ಈಗಾಗಲೇ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ 5 ಸುತ್ತಿನ ಮಾತುಕತೆಗಳು ಮುಗಿದಿದ್ದು, ಸಂಧಾನ ವಿಫಲವಾಗಿದೆ. ಡಿಸೆಂಬರ್ 9 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

Bharat Bandh On December 8: Reasons, Who Supports And All You Need To Know In Kannada

*ದೆಹಲಿಯಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾಗವನ್ನು ಸೂಚಿಸಲಾಗಿದೆ.

*ಘಾಜಿಪುರ್ ಗಡಿಯಲ್ಲಿರುವ ಎನ್‌ಎಚ್‌24 ನ್ನು ಬಂದ್ ಮಾಡಲಾಗಿದೆ. ದೆಹಲಿಗೆ ಬರುವವರು ಅಪ್ಸರಾ, ಭೋಪ್ರಾ, ಡಿಎನ್‌ಡಿ ಮಾರ್ಗವಾಗಿ ಬರಲು ಸೂಚಿಸಲಾಗಿದೆ.

ಟಿಕ್ರಿ ಹಾಗೂ ಝರೋಡಾ ಹೆದ್ದಾರಿಯಲ್ಲೂ ಕೂಡ ರೈತರು ಪ್ರತಿಭಟಿಸುತ್ತಿದ್ದು, ಕೇವಲ ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

*ಸಿಂಘು, ಆಚಂಡಿ, ಲಾಂಪರ್, ಪಿಯಾವೋ ಮನಿಯಾರಿ, ಮಂಗೇಶ್ ಗಡಿಯನ್ನು ಮುಚ್ಚಲಾಗಿದೆ. ಎನ್‌ಎಚ್ 44 ಎರಡೂ ಕಡೆ ಬಂದ್ ಮಾಡಲಾಗಿದೆ.

*ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಡಿಎಂಕೆ, ಶಿವಸೇನೆ, ಕಮಲ್ ಹಾಸನ್‌ರ ಎಂಎನ್‌ಎಂ, ಎಡಪಕ್ಷಗಳು, ಟಿಎಂಸಿ, ಟಿಆರ್‌ಎಸ್ ಬಂದ್‌ಗೆ ಬೆಂಬಲ ಸೂಚಿಸವೆ.

*ಕೇಂದ್ರ ಸರ್ಕಾರವು ರೈತರ ಒಳಿತಿಗಾಗಿ ಮಸೂದೆಯನ್ನು ಜಾರಿಮಾಡಿದೆ. ಅದನ್ನು ಹಿಂತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಸಚಿವ ಕೈಲಾಶ್ ಚೌಧರಿ ತಿಳಿಸಿದ್ದಾರೆ. ಈ ಮಸೂದೆಯಿಂದ ರೈತರು ಸ್ವಾತಂತ್ರ್ಯ ದೊರೆಯಲಿದೆ. ಅವರು ಬೆಳೆದಿರುವ ಪದಾರ್ಥಗಳನ್ನು ಅವರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+