ಗುಜರಾತಿನ ಸ್ವಾಮಿನಾರಾಯಣ ದೇವಸ್ಥಾನದ ಅರ್ಚಕನ ಮೇಲೆ ಹಲ್ಲೆ

Posted By:
Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 8: ಗುಜರಾತ್ ವಿಧಾನಭೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೇ ಇಲ್ಲಿನ ಪ್ರಸಿದ್ಧ ಸ್ವಾಮಿನಾರಾಯಣ ದೇವಸ್ಥಾನದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಅರ್ಚಕ ಭಕ್ತಿ ಪ್ರಸಾದ್ ಎನ್ನುವರ ಮೇಲೆ ಗುರುವಾರ ತಡರಾತ್ರಿ ಗುಜರಾತಿನ ಜುನಾಗಢ್ ದ ಕೋಟ್ದಾದಲ್ಲಿ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಅರ್ಚಕ ಭಕ್ತಿ ಪ್ರಸಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Miscreants attacked Gujarat Swaminarayan temple priest

ಮೂಲಗಳ ಪ್ರಕಾರ ಅರ್ಚಕ ಭಕ್ತಿ ಪ್ರಸಾದ್ ಸ್ಥಳೀಯ ಬಿಜೆಪಿ ಅಭ್ಯರ್ಥಿ ಕೀರ್ತಿ ಪಟೇಲ್ ಪರ ಪ್ರಚಾರ ನಡೆಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಳೆ (ಶನಿವಾರ) ಮೊದಲ ಹಂತದ ಮತದಾನ, ಎರಡನೇ ಹಂತ ಡಿಸೆಂಬರ್ 14. ಫಲಿತಾಂಶ ಡಿಸೆಂಬರ್ 18 ಸೋಮವಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bhakti Prasad a priest was attacked by 2 unidentified miscreants in poll- bound Gujarat. Prasad a priest in Swamy Narayana Temple attacked while he was campaigning for BJP candidate.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ