ಭಾರತದಲ್ಲಿ ಬಿಎಫ್7: ಇದರ ರೋಗ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮ ತಿಳಿಯಿರಿ
ಚೀನಾ ಮತ್ತೊಂದು ಕೋವಿಡ್-19 ಅಲೆಗೆ ಸಾಕ್ಷಿಯಾಗಿದೆ. ಚೀನಾದಲ್ಲಿ ಪ್ರಸ್ತುತ ಓಮಿಕ್ರಾನ್ ರೂಪಾಂತರಿ ಬಿಎಫ್7 ವೇಗವಾಗಿ ಹರಡುತ್ತಿದೆ. ಜೊತೆಗೆ ಜನರನ್ನು ಹೆಚ್ಚಾಗಿ ಬಾದಿಸುತ್ತಿದೆ. ಭಾರತದಲ್ಲಿ ಇದುವರೆಗೆ ಬಿಎಫ್7 ರೂಪಾಂತರದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‌ನಲ್ಲಿ ಎರಡು ಮತ್ತು ಒಡಿಶಾದಿಂದ ಎರಡು ಪ್ರಕರಣಗಳು ವರದಿಯಾಗಿವೆ. ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ಡೆನ್ಮಾರ್ಕ್, ಯುಎಸ್ ಮತ್ತು ಯುಕೆ ಸೇರಿದಂತೆ ಹಲವಾರು ಇತರ ದೇಶಗಳಲ್ಲಿ ಈ ಬಿಎಫ್7 ವೈರಸ್ ಪತ್ತೆಯಾಗಿದ್ದು ವೇಗವಾಗಿ ಹರಡುತ್ತಿದೆ.
ಬಿಎಫ್7 ಓಮಿಕ್ರಾನ್ ರೂಪಾಂತರದ ಬಿಎ5ನ ಉಪ-ವಂಶವಾಗಿದೆ. ಪಿಟಿಐ ಪ್ರಕಾರ, ಇದು ಕಡಿಮೆ ಅವಧಿಯಲ್ಲಿ ಹೆಚ್ಚು ಹರಡುವ ರೂಪಾಂತರವಾಗಿದೆ. ಇದು ಮರು-ಸೋಂಕನ್ನು ಉಂಟುಮಾಡುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಲಸಿಕೆ ಹಾಕಿದ ವ್ಯಕ್ತಿಗಳಿಗೆ ಸಹ ಸೋಂಕು ತರಬಹುದು.
'ಸೆಲ್ ಹೋಸ್ಟ್ ಮತ್ತು ಮೈಕ್ರೋಬ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಿಎಫ್ 7 ರೂಪಾಂತರವು ಮೂಲ ವುಹಾನ್ ವೈರಸ್‌ಗಿಂತ 4.4 ಪಟ್ಟು ಹೆಚ್ಚಿನ ತಟಸ್ಥೀಕರಣ ಪ್ರತಿರೋಧವನ್ನು ಹೊಂದಿದೆ. ಇದರರ್ಥ ವ್ಯಾಕ್ಸಿನೇಷನ್‌ನಿಂದ ಪ್ರತಿಕಾಯಗಳು ವೈರಸ್ ವಿರುದ್ಧ ಸಾಕಷ್ಟು ಪರಿಣಾಮಕಾರಿಯಾಗಿರುವುದಿಲ್ಲ.

ಓಮಿಕ್ರಾನ್ ಬಿಎಫ್ 7 ರೂಪಾಂತರದ ಲಕ್ಷಣಗಳು
ಹೊಸ ರೂಪಾಂತರ ಜ್ವರ, ಗಂಟಲು ನೋವು, ಮೂಗು ಸೋರುವಿಕೆ ಮತ್ತು ಕೆಮ್ಮು ಸೇರಿದಂತೆ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದೆ. ಕೆಲವು ರೋಗಿಗಳು ಅತಿಸಾರ ಮತ್ತು ವಾಂತಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಅನುಭವಿಸಬಹುದು. ಯಾರಾದರೂ ಅಂತಹ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ಪರೀಕ್ಷೆಗೆ ಒಳಗಾಗಲು ತಜ್ಞರು ಸಲಹೆ ನೀಡುತ್ತಾರೆ. ಈ ರೂಪಾಂತರವು ಯಾವುದೇ ಗಂಭೀರ ತೊಡಕುಗಳಿಗೆ ಕಾರಣವಾಗುವುದಿಲ್ಲ. ಆದರೆ ವೇಗವಾಗಿ ಹರಡಬಹುದು. ಆದ್ದರಿಂದ, ಆರಂಭಿಕ ಪತ್ತೆ ಮತ್ತು ಪ್ರತ್ಯೇಕತೆಯು ಅತ್ಯಂತ ನಿರ್ಣಾಯಕವಾಗಿದೆ.

ಚಳಿಗಾಲದಲ್ಲಿ ಕಂಡುಬರುವ ಸಾಮಾನ್ಯ ರೋಗ ಲಕ್ಷಣಗಳು
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಗಳು ಹತ್ತಿರದಲ್ಲಿರುವುದರಿಂದ, ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಎಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಸಂಭವನೀಯ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವ ಮೂಲ ಹಂತಗಳಾಗಿವೆ.
ಭಾರತದಲ್ಲಿ ಈ ತಿಂಗಳುಗಳಲ್ಲಿ ಶೀತ, ಕೆಮ್ಮು ಮತ್ತು ಇತರ ಋತುಮಾನದ ಕಾಯಿಲೆಗಳು ಸಹ ಸಾಮಾನ್ಯವಾಗಿದೆ. ಆದರೆ ನೀವು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಅಥವಾ ನಿಮ್ಮ ಸುತ್ತಮುತ್ತಲಿನ ಯಾರಾದರೂ ಈ ಕೆಳಗಿನ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣವೇ ಕೋವಿಡ್ ಪರೀಕ್ಷೆಯನ್ನು ಮಾಡಿ ಮತ್ತು ಸ್ವಯಂ-ಪ್ರತ್ಯೇಕತೆಯನ್ನು ಅಭ್ಯಾಸ ಮಾಡಿ.

ತಡೆಹಿಡಿಯುವ ಕ್ರಮಗಳು
ಹಿಂದಿನ ಸೋಂಕುಗಳಿಂದಾಗಿ ಕಡಿಮೆ ಮಟ್ಟದ ರೋಗನಿರೋಧಕ ಶಕ್ತಿಯು ಚೀನಾದಲ್ಲಿ ಉಲ್ಬಣಗೊಳ್ಳಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
1. ಲಸಿಕೆಯನ್ನು ಪಡೆಯುವುದು
ಇದು ಚಳಿಗಾಲವಾಗಿರುವುದರಿಂದ ಜ್ವರ, ನಗಡಿ, ಕೆಮ್ಮು ಇವೆಲ್ಲವೂ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿವೆ. ಲಸಿಕೆ ಹಾಕುವ ಮೂಲಕ ನೀವು ನಿಮ್ಮನ್ನು ರಕ್ಷಿಸಿಕೊಳ್ಳುತ್ತೀರಿ, ಆದರೆ ವೃದ್ಧರು ಮತ್ತು ಚಿಕ್ಕ ಮಕ್ಕಳು ಸೇರಿದಂತೆ ಇತರ ದುರ್ಬಲ ವ್ಯಕ್ತಿಗಳನ್ನು ಸಹ ರಕ್ಷಿಸುತ್ತೀರಿ.
2. ಸಾಕಷ್ಟು ವ್ಯಾಯಾಮ ಮಾಡಿ
ವ್ಯಾಯಾಮವು ನಿಮ್ಮ ದೇಹವನ್ನು ಪ್ರತಿರಕ್ಷಣಾ-ಉತ್ತೇಜಿಸುವ ಹಾರ್ಮೋನುಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸುತ್ತದೆ ಮತ್ತು ಪ್ರತಿರಕ್ಷೆಯನ್ನು ಹೆಚ್ಚಿಸುವ ಅತ್ಯುತ್ತಮ ವಿಧಾನವಾಗಿದೆ. ನೀವು ವ್ಯಾಯಾಮ ಮಾಡುವಾಗ, ನಿಮ್ಮ ದೇಹವು ಬೆವರಲು ಪ್ರಾರಂಭಿಸುತ್ತದೆ. ಇದು ನಿಮ್ಮ ದೇಹದಲ್ಲಿ ಇರಬಹುದಾದ ಯಾವುದೇ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹಕ್ಕೆ ಸೋಂಕುಗಳ ವಿರುದ್ಧ ಹೋರಾಡಲು ಸುಲಭವಾಗುತ್ತದೆ.
3. ಆರೋಗ್ಯಕರ ಆಹಾರ ಸೇವನೆ
ಚಳಿಗಾಲದಲ್ಲಿ ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳುವುದು ಕಷ್ಟವೇನಲ್ಲ. ಏಕೆಂದರೆ ಆರೋಗ್ಯಕರ ಆಹಾರ ತಯಾರಿಸಲು ಹಣ್ಣುಗಳು ಮತ್ತು ತರಕಾರಿಗಳು ಲಭ್ಯವಿವೆ. ಆಹಾರದಲ್ಲಿ ಆರೋಗ್ಯಕರ ವಸ್ತುಗಳನ್ನು ಸೇರಿಸುವುದನ್ನು ಮುಂದುವರಿಸುವುದರಿಂದ ನಿಮ್ ಆರೋಗ್ಯ ಚೆನ್ನಾಗಿರುತ್ತದೆ.
4. ಮಾಸ್ಕ್ ಧರಿಸಿ
ಇದೀಗ ಬಹುತೇಕ ಎಲ್ಲಾ ಸಾಂಕ್ರಾಮಿಕ ಚಳಿಗಾಲದ ರೋಗಗಳ ವಿರುದ್ಧ ಹೋರಾಡಲು ನಾವುಗಳು ಮಾಸ್ಕ್‌ಗಳನ್ನು ಧರಿಸುತ್ತೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ. ನಮ್ಮ ಕೈಗಳನ್ನು ತೊಳೆಯುವ ಬಗ್ಗೆ ಶ್ರದ್ಧೆಯಿಂದ ಇರುವುದರ ಜೊತೆಗೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಇದು ಚಳಿಗಾಲದ ಹೆಚ್ಚಿನ ಕಾಯಿಲೆಗಳಿಗೆ ಕಾರಣವಾಗಿದೆ.
5. ಸಮರ್ಪಕವಾಗಿ ನಿದ್ದೆ ಮಾಡಿ
ನೀವು ನಿದ್ದೆ ಮಾಡುವಾಗ ನಿಮ್ಮ ದೇಹವು ಮರುಪೂರಣಗೊಳ್ಳುವುದರಿಂದ, ದೃಢವಾದ ಮತ್ತು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ನಿದ್ರೆ ಪಡೆಯುವುದು ಅತ್ಯಗತ್ಯ. ಪ್ರತಿ ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಮಾಡಿ.
6. ಕೈಗಳನ್ನು ತೊಳೆಯುವುದು
ಮನೆಗೆ ಬಂದ ಮೇಲೆ ಹಾಗೆಯೇ ಪ್ರತಿ ಊಟದ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯುವುದು ವಾಡಿಕೆಯಂತೆ ಮಾಡಿ. ಕನಿಷ್ಠ ಇಪ್ಪತ್ತು ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನೀವು ಹೊರಗೆ ಇರುವಾಗ, ನಿಮ್ಮ ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸಲು ಪ್ರಯತ್ನಿಸಿ.

ನಾಲ್ಕು ಪ್ರಕರಣಗಳು ವರದಿ
ಭಾರತದಲ್ಲಿ ಇಲ್ಲಿಯವರೆಗೆ ಬಿಎಫ್7 ರೂಪಾಂತರದ ನಾಲ್ಕು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಜನರು ಕೋವಿಡ್-ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ. "COVID ಇನ್ನೂ ಮುಗಿದಿಲ್ಲ. ನಾನು ಸಂಬಂಧಪಟ್ಟ ಎಲ್ಲರಿಗೂ ಎಚ್ಚರಿಕೆ ವಹಿಸಲು ಮತ್ತು ಕಣ್ಗಾವಲು ಬಲಪಡಿಸಲು ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ" ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ಸುದ್ದಿ ಸಂಸ್ಥೆ ಎಎನ್‌ಐಗೆ ಮಾತನಾಡಿ, ಕೇಂದ್ರ ಸರ್ಕಾರವು ಮಂಗಳವಾರ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಸರಿಯಾಗಿ ಪರೀಕ್ಷಿಸಲು ಮತ್ತು ಜೀನೋಮ್ ಅನುಕ್ರಮವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ.












Click it and Unblock the Notifications