ಎಚ್ಚರ, ನಿಷೇಧಿತ ವೆಬ್ ತಾಣ ತೆರೆದರೆ 3 ವರ್ಷ ಜೈಲು!

Subscribe to Oneindia Kannada

ನವದೆಹಲಿ, ಆಗಸ್ಟ್, 22: ಎಚ್ಚರ, ಅನಧಿಕೃತ ಮತ್ತು ನಿಷೇಧ ಪಟ್ಟಿಗೆ ಸೇರಿರುವ ವೆಬ್ ತಾಣಗಳನ್ನು ಬೇರೆ ಕಿಂಡಿ ಯನ್ನು ಬಳಕೆ ಮಾಡಿ ತೆರೆದು ನೋಡಿದರೆ ನಿಮ್ಮನ್ನು ಜೈಲಿಗೆ ಹಾಕಬಹುದು!

ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕಠಿಣ ಕ್ರಮದ ಪ್ರಕಾರ ಅನಧಿಕೃತ ವೆಬ್ ತಾಣ ತೆರದು ಅಲ್ಲಿಂದ ಮಾಹಿತಿ ಪಡೆದುಕೊಂಡರೆ 3 ವರ್ಷ ಜೈಲು ಜತೆಗೆ 3 ಲಕ್ಷ ರು. ದಂಡ ಕಟ್ಟಬೇಕಾಗುವುದು.[ಚೀನಾ ಹಾದಿಯಲ್ಲಿ ಭಾರತ, ಪೋರ್ನ್ ಸೈಟ್ಸ್ ಬಂದ್]

ಕಳೆದ 2015 ಆಗಸ್ಟನಲ್ಲಿ 857 ವೆಬ್ ತಾಣ, ಮತ್ತು ಹಲವು ಯುಆರ್‍ ಎಲ್ ಗಳನ್ನು ಕೇ೦ದ್ರ ಸಕಾ೯ರ ನಿಷೇಧಿಸಿದೆ. ಇದರಲ್ಲಿ ಹೆಚ್ಚಿನವು ಅಶ್ಲೀಲ ವಿಡಿಯೋ, ಫೋಟೋಕ್ಕೆ ಸ೦ಬ೦ಧಿಸಿದ್ದಾಗಿದೆ. ಆಕ್ಷೇಪಾಹ೯ ಅ೦ಶಗಳಿರುವ 170 ವೆಬ್ ತಾಣಗಳಿಗೂ ನಿಷೇಧ ಹೇರಲಾಗಿದೆ.[ಪೋರ್ನ್ ಬ್ಯಾನ್ ಮಾಡಿದರೆ ಅನಾಹುತ: ಆರ್ ಜಿವಿ]

ಕಳೆದ ವರ್ಷ ಪೋರ್ನ್ ಸೈಟ್ ಗಳನ್ನು ನಿಷೇಧ ಮಾಡಲು ಮುಂದಾಗಿದ್ದ ಮೋದಿ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗಿತ್ತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆ ಎಂಬ ಆರೋಪಗಳು ಕೇಳಿಬಂದಿದ್ದವು. ಚರ್ಚೆಗಳ ನಂತರ ಕೇಂದ್ರ ಸರ್ಕಾರ ಪೋರ್ನ್ ಸೈಟ್ ಬ್ಯಾನ್ ಹಿಂದಕ್ಕೆ ಪಡೆದುಕೊಂಡರೂ ಮಕ್ಕಳನ್ನು ಅಶ್ಲೀಲವಾಗಿ ತೋರಿಸುತ್ತಿದ್ದ ಸೈಟ್ ಗಳನ್ನು ಬಂದ್ ಮಾಡಿತ್ತು.

ಕಠಿಣ ಕ್ರಮ ಯಾಕಾಗಿ?

ಕಠಿಣ ಕ್ರಮ ಯಾಕಾಗಿ?

ಹೆಚ್ಚುತ್ತಿರುವ ಪೈರಸಿ ತಡೆ ಮತ್ತು ಉಗ್ರವಾದವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಏನು ಮಾಡುವ ಹಾಗೆ ಇಲ್ಲ

ಏನು ಮಾಡುವ ಹಾಗೆ ಇಲ್ಲ

ಹೊಸ ಸಿನಿಮಾ, ಹಾಡು ಡೌನ್ ಲೋಡ್ ಮಾಡಿದರೆ ನಿಮ್ಮ ಐಪಿ ಅಡ್ರೆಸ್ ಮೇಲೆ ಸರ್ಕಾರ ಕಣ್ಣಿಟ್ಟಿರುತ್ತದೆ. ನಿಷೇಧಿತ ಅಶ್ಲೀಲ ತಾಣ ಓಪನ್ ಮಾಡಲು ಮುಂದಾದರೆ ಅದನ್ನು ದಾಖಲಿಸಿಕೊಳ್ಳಲಾಗುತ್ತದೆ.

ಯಾವ ಮೆಸೇಜ್ ಬರುತ್ತದೆ

ಯಾವ ಮೆಸೇಜ್ ಬರುತ್ತದೆ

ನಿಷೇಧಿತ ತಾಣ ತೆರೆಯಲು ಒಂದು ವೇಳೆ ಮುಂದಾದರೆ "This URL has been blocked under the instructions of the Competent Government Authority or in compliance with the orders of a Court of competent jurisdiction" ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.ಅನ್ಯ ಮಾರ್ಗ ಬಳಸಿ ಮುಂದುವರಿದರೆ ನೀವು ಶಿಕ್ಷೆಗೆ ಗುರಿಯಾಗುತ್ತೀರಿ.

ಬಿಟ್ ಟೊರೆಂಟ್ ಮಾಲೀಕ ಬಂಧನ

ಬಿಟ್ ಟೊರೆಂಟ್ ಮಾಲೀಕ ಬಂಧನ

ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಯಾದ ದಿನವೇ ಹಲವರ ಮೊಬೈಲ್ ನಲ್ಲಿ ಕಾಣಿಸಿಕೊಂಡಿತ್ತು. ಇದೇ ವೇಳೆ ಬಿಟ್ ಟೋರೆಂಟ್ ಮಾಲೀಕ ಆಟ೯ಮ್ ವಾಲಿಯಮ್‍ನನ್ನು ಪೋಲೆಂಡ್ ನಲ್ಲಿ ಬಂಧಿಸಿ ವಿಒಚಾರಣೆಗೆ ಗುರಿಪಡಿಸಲಾಗಿತ್ತು.

ಬೇರೆ ಹೆಸರು

ಬೇರೆ ಹೆಸರು

ಕೆಲ ತಾಣಗಳ ಮೇಲೆ ನಿಷೇಧ ಹೇರಿದ್ದರೂ ಅವು ಬೇರೆ ಹೆಸರಿನಲ್ಲಿ ಜಾರಿಗೆ ಬಂದಿವೆ. ಜಾಣ ಬಳಕೆದಾರನಿಗೆ ಇದು ಗೊತ್ತಿರುತ್ತದೆ. ಹಾಗಾಗಿ ನಕಲಿ ಜಾಲ ತಡೆಯಲು ಬಳಕೆದಾರನಿಗೆ ದಿಗ್ಬಂಧನ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If you visit a torrent website, a report suggests, you might be committing a crime, one that earns a 3 lakh fine and 3 years in jail.
Please Wait while comments are loading...