ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಷರಮ್ ರಾಂಗ್ ವಿವಾದ: ಹಾಡು ಎಡಿಟ್ ಮಾಡಲು 'ಪಠಾಣ್' ತಯಾರಕರಿಗೆ CBFC ಸೂಚನೆ

|
Google Oneindia Kannada News

ನವದೆಹಲಿ ಡಿಸೆಂಬರ್ 29: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡಿನ ವಿವಾದ ಸದ್ಯಕ್ಕೆ ಕೊನೆಗೊಳ್ಳುವಂತೆ ಕಾಣಿಸುತ್ತಿಲ್ಲ. ವಿವಾದದ ಬೆನ್ನಲ್ಲೆ CBFC ಪರೀಕ್ಷಾ ಸಮಿತಿಯು ಸಿನಿಮಾವನ್ನು ಪುನ: ಪರಿಶೀಲಿಸಿದೆ.

ಇದರ ಬೆನ್ನಲ್ಲೇ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರದ ಹಾಡುಗಳು ಸೇರಿದಂತೆ 'ಬದಲಾವಣೆ'ಗಳನ್ನು ಅಳವಡಿಸುವಂತೆ ತಯಾರಕರಿಗೆ ನಿರ್ದೇಶನ ನೀಡಿದೆ ಎಂದು ಅಧ್ಯಕ್ಷ ಪ್ರಸೂನ್ ಜೋಶಿ ಗುರುವಾರ ಹೇಳಿದ್ದಾರೆ. ಆದರೆ ಅವರು ತಯಾರಕರಿಗೆ ಸೂಚಿಸಿದ ಬದಲಾವಣೆಗಳನ್ನು ವಿವರಿಸಿಲ್ಲ.

ಬೋರ್ಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬೇಷರಮ್ ರಾಂಗ್ ಎಡಿಟ್ ಮಾಡಲು ಸಿಬಿಎಫ್‌ಸಿ ಪ್ರೊಡಕ್ಷನ್ ಬ್ಯಾನರ್ ಯಶ್ ರಾಜ್ ಫಿಲ್ಮ್ಸ್‌ಗೆ ಕೇಳಿದೆ ಎಂದು ಜೋಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 12 ರಂದು ದೀಪಿಕಾ ಪಡುಕೋಣೆ ಒಳಗೊಂಡಿರುವ "ಬೇಷರಂ ರಂಗ್" ಹಾಡು ಬಿಡುಗಡೆಯಾದ ನಂತರ "ಪಠಾಣ್" ಸಿನಿಮಾ ವಿವಾದವನ್ನು ಎದುರಿಸುತ್ತಿದೆ. ಸಿನಿಮಾ ನಿಷೇಧಕ್ಕೆ ಒತ್ತಡ ಹೆಚ್ಚಾಗಿದೆ. ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದೇ ವಿವಾದಕ್ಕೆ ಕಾರಣವಾಗಿದೆ. ಈ ಹಾಡಿನಲ್ಲಿ ಉಡಲಾದ ಉಡುಗೆ "ಹಿಂದೂ ಭಾವನೆಗಳನ್ನು" ನೋಯಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಹೀಗಾಗಿ ಸಿನಿಮಾ ನಿಷೇಧಕ್ಕೆ ಒತ್ತಾಯ ಹೇರಲಾಗುತ್ತಿದೆ.

Besharam rang controversy: CBFC instructs Pathan makers to edit song

ಹೀಗಾಗಿ ಸಮಿತಿಯು ಸಿನಿಮಾ ಬಿಡುಗಡೆಗೂ ಮುನ್ನ ಹಾಡಿನಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಮಾರ್ಗದರ್ಶನ ನೀಡಿದೆ ಎಂದು ಜೋಶಿ ಪಿಟಿಐಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಯಾರಕರ ಸೃಜನಶೀಲತೆ ಮತ್ತು ಪ್ರೇಕ್ಷಕರ ಭಾವನೆಗಳ ನಡುವೆ ಸಮತೋಲನವನ್ನು ಸಾಧಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಪರಿಹಾರವನ್ನು ಕಂಡುಹಿಡಿಯುವುದು CBFC ಯ ಗುರಿಯಾಗಿದೆ ಎಂದು ಜೋಶಿ ಹೇಳಿದರು. "ನಮ್ಮ ಸಂಸ್ಕೃತಿ ಮತ್ತು ನಂಬಿಕೆಯು ವೈಭವಯುತವಾಗಿದೆ. ಸಂಕೀರ್ಣವಾಗಿದೆ ಮತ್ತು ಸೂಕ್ಷ್ಮ ವ್ಯತ್ಯಾಸಗಳಿಂದ ಕೂಡಿದೆ ಎಂದು ನಾನು ಪುನರುಚ್ಚರಿಸಬೇಕು. ರಚನೆಕಾರರು ಮತ್ತು ಪ್ರೇಕ್ಷಕರ ನಡುವಿನ ನಂಬಿಕೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ ಮತ್ತು ಸೃಷ್ಟಿಕರ್ತರು ಅದರ ಕಡೆಗೆ ಕೆಲಸ ಮಾಡುತ್ತಾರೆ" ಎಂದು ಜೋಶಿ ಹೇಳಿದರು.

Besharam rang controversy: CBFC instructs Pathan makers to edit song

"ಬೇಷರಾಮ್ ರಂಗ್" ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದವರು ಮತ್ತು ಅದರಲ್ಲಿ ಬದಲಾವಣೆಗಳನ್ನು ಒತ್ತಾಯಿಸಿದವರಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮತ್ತು ವಿಶ್ವ ಹಿಂದೂ ಪರಿಷತ್ ಸೇರಿದ್ದಾರೆ. ಮಧ್ಯಪ್ರದೇಶ ಉಲೇಮಾ ಮಂಡಳಿಯು ಇದೆ "ಚಿತ್ರದ ಮೇಲೆ ನಿಷೇಧವನ್ನು ಕೋರಿದೆ. ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಶಾರುಖ್, ದೀಪಿಕಾ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

English summary
In the wake of the Besharam rang controversy, the CBFC has instructed the makers of 'Pathan' to edit the song.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X