Vande Bharat Sleeper: ಬೆಂಗಳೂರು-ವಿಶಾಖಪಟ್ಟಣಕ್ಕೆ ವಂದೇ ಭಾರತ್ ಸ್ಲೀಪರ್ ರೈಲು, ಮಾರ್ಗ, ತಾತ್ಕಾಲಿಕ ವೇಳಾಪಟ್ಟಿ
Sleeper Vande Bharat Express Train: ಬೆಂಗಳೂರಿನಿಂದ ಮುಂಬೈ ಸ್ಲೀಪರ್ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ಅನುಮೋದನೆ ಬೆನ್ನಲ್ಲೇ ಬೆಂಗಳೂರಿನಿಂದ ಮತ್ತೊಂದು ರಾಜ್ಯದ ಪ್ರಮುಖ ನಗರಕ್ಕೆ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು (Vande Bharat Express Sleeper Train) ಕಾರ್ಯಾಚರಣೆಗೆ ಆಗ್ರಹ ಜೋರಾಗಿದೆ. ನಂದ್ಯಾಲ್ ಮೂಲಕ ವಿಶಾಖಪಟ್ಟಣ ಮತ್ತು ಬೆಂಗಳೂರು ನಡುವೆ ಓಡಿಸಲು ಈಗಾಗಲೇ ಪ್ರಸ್ತಾಪಿಸಲಾಗಿದ್ದು, ತಾತ್ಕಾಲಿಕ ವೇಳಾಪಟ್ಟಿ ಸಹ ಬಿಡುಗಡೆ ಮಾಡಲಾಗಿದೆ. ಈ ರೈಲು ಸಂಚಾರದ ಮಾರ್ಗ, ನಿಲ್ದಾಣಗಳು, ಇತರ ಮಾಹಿತಿ ಇಲ್ಲಿದೆ.
ದಕ್ಷಿಣ ಕರಾವಳಿ ರೈಲ್ವೆ (SCoR) ವ್ಯಾಪ್ತಿಗೆ ಬರುವ ಆಂಧ್ರಪ್ರದೇಶದ ವಿಶಾಖಪಟ್ಟಣ ನಗರದಿಂದ ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ರೈಲನ್ನು ಸೇವೆ ಆರಂಭವಾದರೆ ಸುದೀರ್ಘ ಪ್ರಯಾಣ ಹಾಗೂ ರಾತ್ರಿ ಪ್ರಯಾಣಿಕರಿಗೆ ಐಶಾರಾಮಿ, ಅತ್ಯಾಧುನಿಕ ವ್ಯವಸ್ಥಿತ ರೈಲ್ವೆ ಸೇವೆ ಸಿಕ್ಕಂತಾಗುತ್ತದೆ. ಈ ಸಂಬಂಧ ಅಂತಿಮ ಅನುಮೋದನೆ ಬಾಕಿ ಇದೆ. ರೈಲ್ವೆ ವಲಯಗಳಿಂದ ತಾತ್ಕಾಲಿಕ ವೇಳಾಪಟ್ಟಿ ಮತ್ತು ರೈಲನ್ನು ನಿರ್ವಹಿಸುವ ಕಾರ್ಯಸಾಧ್ಯತೆ ಕುರಿತು ಪ್ರತಿಕ್ರಿಯಿಸಲಾಗಿದೆ.

6 ದಿನ VSKP-SBC ಸ್ಲೀಪರ್ 'ವಿಬಿ' ಸಂಚಾರ, ವೇಳಾಪಟ್ಟಿ
ಸೋಮವಾರ ಹೊರತುಪಡಿಸಿ ವಾರದ ಆರು ದಿನ ವಿಶಾಖ ಪಟ್ಟಣದಿಂದ ಮತ್ತು ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಬೆಂಗಳೂರು ನಗರದಿಂದ ವಂದೇ ಭಾರತ್ ಸಂಚರಿಸುವಂತೆ ಪ್ಲ್ಯಾನ್ ಮಾಡಲಾಗಿದೆ.
ನಿಲ್ದಾಣ ಬಿಡುವ ಸಮಯ
ವಿಶಾಖಪಟ್ಟಣಂನಿಂದ ರಾತ್ರಿ 8.15ಕ್ಕೆ ಹೊರಡುತ್ತದೆ. ಮಾರನೇ ದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಸಂಚಾರ ಪ್ರಾರಂಭಿಸಿ ಮರುದಿನ ಬೆಳಗ್ಗೆ 10ಕ್ಕೆ ವಿಶಾಖಪಟ್ಟಣಂ ರೈಲು ನಿಲ್ದಾಣ ತಲುಪುತ್ತದೆ.
ನಿಲುಗಡೆ ನಿಲ್ದಾಣಗಳು ಯಾವುವು?
ಪ್ರಸ್ತುತ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಶಾಖಪಟ್ಟಣಂ, ದುವ್ವಾಡ, ವಿಜಯವಾಡ, ಗುಂಟೂರು, ನಂದ್ಯಾಲ, ಗೂಟಿ, ಧರ್ಮಾವರಂ ಮತ್ತು ಬೆಂಗಳೂರಿನ ಮಾರ್ಗವಾಗಿ ಎರಡು ದಿಕ್ಕಿನಲ್ಲಿ ಈ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ಸದ್ಯದ ತಾತ್ಕಾಲಿಕ ವೇಳಾಪಟ್ಟಿ ಮಾಹಿತಿ ನೀಡಿದೆ.
ಎಸಿ ಥ್ರಿಟೈರ್, ಎಸಿ ಟು ಟೈರ್, ಎಸಿ ಒನ್ ಟೈರ್ ಸೇರಿ ಒಟ್ಟು 20 ಬೋಗಿಗಳನ್ನು ಒಳಗೊಂಡಿದೆ. ಪ್ರತಿ ಗಂಟೆಗೆ 75ಕಿಲೋ ಮೀಟರ್ ವೇಗದಲ್ಲಿ ಓಡಿಸಲು ಪ್ಲ್ಯಾನ್ ಮಾಡಲಾಗಿದೆ. ಭವಿಷ್ಯದಲ್ಲಿ ಇದರ ವೇಗ ಹೆಚ್ಚುವ ಸಾಧ್ಯತೆ ಇದೆ ಎಂದು ದಕ್ಷಿಣ ಕರಾವಳಿ ರೈಲ್ವೆ (SCoR) ಅಧಿಕಾರಿ ಮೂಲಗಳು ಮಾಹಿತಿ ನೀಡಿವೆ.


Click it and Unblock the Notifications
