'ಪಟ್ಟಣದ ಕೆಲಸ ಬಿಟ್ಟು ಹಳ್ಳಿಗೆ ಹೋದ ಮೂರ್ಖ ಅಂದ್ರು': ಇಂದು 2.5 ಕೋಟಿ ಒಡೆಯನಾದ ಪ್ರಿನ್ಸ್ ಶುಕ್ಲಾ
ಬಿಹಾರ: ಬೆಂಗಳೂರಿನ ಐಷಾರಾಮಿ ಜೀವನ, ಕೈತುಂಬಾ ಸಂಬಳ ಮತ್ತು ಸುಸಜ್ಜಿತ ಕಾರ್ಪೊರೇಟ್ ಕೆಲಸ... ಇವೆಲ್ಲವನ್ನೂ ಬಿಟ್ಟು ಹಳ್ಳಿಗೆ ಹೋಗಿ ಕೃಷಿ ಮಾಡುತ್ತೇನೆ ಎಂದಾಗ ಎಂತಹವರಿಗಾದರೂ ಹುಚ್ಚು ಹಿಡಿದಿರಬಹುದು ಎಂದೆನಿಸುವುದು ಸಹಜ. ಬಿಹಾರದ ಪೂರ್ಣಿಯಾ ಮೂಲದ ಪ್ರಿನ್ಸ್ ಶುಕ್ಲಾ ಅವರಿಗೂ ಎದುರಾಗಿದ್ದು ಇದೇ ಪ್ರಶ್ನೆಗಳು. ಆದರೆ ಅಂದು 'ಹಳ್ಳಿಯವ' ಎಂದು ಮೂಗು ಮುರಿದವರೇ ಇಂದು ಅವರ ಸಾಧನೆ ನೋಡಿ ಹುಬ್ಬೇರಿಸುತ್ತಿದ್ದಾರೆ.
ಕೃಷಿ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದ ಪ್ರಿನ್ಸ್ ಶುಕ್ಲಾ, ಕೃಷಿ ವಿಜ್ಞಾನದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿ ಪಡೆದಿದ್ದರು. ವಿದ್ಯಾಭ್ಯಾಸದ ನಂತರ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆದರೆ ರೈತರ ಬೆಳೆಗಳಿಗೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳನ್ನು ಮಾರಾಟ ಮಾಡಲು ಅವರ ಮನಸ್ಸು ಒಪ್ಪಲಿಲ್ಲ. ಅಂತರಾಳದ ಕರೆಗೆ ಓಗೊಟ್ಟು, 2021ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ತವರಿಗೆ ಮರಳಿದರು.

ಆರಂಭಿಕ ಅವಮಾನ ಮತ್ತು ಸವಾಲುಗಳು:
ಹಳ್ಳಿಗೆ ಬಂದ ಪ್ರಿನ್ಸ್, ಡಿಸೆಂಬರ್ 2021ರಲ್ಲಿ 'AGRATE' (ಅಗ್ರೇಟ್) ಎಂಬ ಕೃಷಿ ಆಧಾರಿತ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು. ತಂದೆಯಿಂದ ಸಾಲವಾಗಿ ಪಡೆದ ಕೇವಲ 1 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಈ ಸಾಹಸಕ್ಕೆ ಕೈಹಾಕಿದರು. ಆರಂಭದಲ್ಲಿ ಜನರು ಅವರನ್ನು "ಮೂರ್ಖ", "ಹಳ್ಳಿಯವ" ಎಂದು ಗೇಲಿ ಮಾಡಿದರು. 2022ರ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ ಶೂನ್ಯವಾಗಿತ್ತು. ರೈತರು ಇವರ ವಯಸ್ಸನ್ನು ನೋಡಿ ನಂಬಿಕೆ ಇಡಲು ಹಿಂದೇಟು ಹಾಕಿದರು.
ವೈಯಕ್ತಿಕವಾಗಿ ರೈತರನ್ನು ತಲುಪುವುದು ಕಷ್ಟವಾದಾಗ, ಪ್ರಿನ್ಸ್ ಅವರು ರೈತ ಉತ್ಪಾದಕ ಸಂಸ್ಥೆಗಳ (FPO) ಮುಖ್ಯಸ್ಥರನ್ನು ಸಂಪರ್ಕಿಸಲು ನಿರ್ಧರಿಸಿದರು. ಗುಣಮಟ್ಟದ ಬೀಜಗಳು, ಪರಿಸರ ಸ್ನೇಹಿ ರಸಗೊಬ್ಬರಗಳು, ನೀರಾವರಿ ಉಪಕರಣಗಳು ಮತ್ತು ಮಲ್ಟಿ-ಕ್ರಾಪಿಂಗ್ (ಬಹುಬೆಳೆ) ಪದ್ಧತಿಯ ಬಗ್ಗೆ ರೈತರಿಗೆ ತರಬೇತಿ ನೀಡಲು ಆರಂಭಿಸಿದರು. ಕಮಲದ ಬೀಜ (ಮಖಾನ) ಮತ್ತು ಅಣಬೆ ಕೃಷಿಯಲ್ಲೂ ವೈಜ್ಞಾನಿಕ ವಿಧಾನಗಳನ್ನು ಪರಿಚಯಿಸಿದರು.
ಅವರ ಈ ಶ್ರಮಕ್ಕೆ 2023ರಲ್ಲಿ ಪ್ರತಿಫಲ ಸಿಗಲಾರಂಭಿಸಿತು. ಆ ವರ್ಷ 3 ಲಕ್ಷ ರೂ. ವಹಿವಾಟು ನಡೆಸಿದ್ದ ಕಂಪನಿ, ನಂತರದ ಎರಡು ವರ್ಷಗಳಲ್ಲಿ ಬರೋಬ್ಬರಿ 49 ಪಟ್ಟು ಬೆಳವಣಿಗೆ ಕಂಡಿತು. 2025ರ ಆರ್ಥಿಕ ವರ್ಷದ ವೇಳೆಗೆ 1.5 ಕೋಟಿ ರೂ. ತಲುಪಿದ್ದ ವಹಿವಾಟು, ಪ್ರಸ್ತುತ ವಾರ್ಷಿಕ 2.5 ಕೋಟಿ ರೂ.ಗೆ ಏರಿಕೆಯಾಗಿದೆ.
ಇಂದು 'ಅಗ್ರೇಟ್' ಸಂಸ್ಥೆಯು ಬಿಹಾರ ಮತ್ತು ಒಡಿಶಾದ 38 ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 10,000ಕ್ಕೂ ಹೆಚ್ಚು ಸಣ್ಣ ರೈತರ ಬದುಕಿನಲ್ಲಿ ಆರ್ಥಿಕ ಬದಲಾವಣೆ ತಂದಿದೆ. ಕೃಷಿ ಎಂದರೆ ಕೇವಲ ಮಣ್ಣಿನ ಕೆಲಸವಲ್ಲ, ಅದೊಂದು ಗೌರವಯುತ ಮತ್ತು ಲಾಭದಾಯಕ ಉದ್ಯಮ ಎಂಬುದನ್ನು ಪ್ರಿನ್ಸ್ ಶುಕ್ಲಾ ಸಾಬೀತುಪಡಿಸಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications