Bengaluru Second Airport: ಹೊಸೂರು ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಮಹತ್ವದ ಅಪ್ಡೇಟ್‌!

Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಪೈಪೋಟಿಯಾಗಿ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದು. ಇದೀಗ ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಹೊಸೂರಿನ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಫೈನಲ್‌ ಲಿಸ್ಟ್‌ ಮಾಡುತ್ತಿದೆ. ತಮಿಳುನಾಡು ಸರ್ಕಾರವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಎರಡು ಜಾಗಗಳನ್ನು ಶಾರ್ಟ್‌ಲಿಸ್ಟ್‌ ಮಾಡಿದೆ. ಈ ಸ್ಥಳಗಳ ವಿವರವಾದ ಅಧ್ಯಯನವು ಇನ್ನೇನು ಒಂದು ವಾರದ ಒಳಗೆ ಪೂರ್ಣವಾಗಲಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಇರುವಾಗ ಕರ್ನಾಟಕ ಸರ್ಕಾರವು ಇಲ್ಲಿಯ ವರೆಗೆ ವಿಮಾನ ನಿಲ್ದಾಣದ ಪ್ರಾಥಮಿಕ ವಿಷಯವನ್ನು ಸಹ ಫೈನಲ್‌ ಮಾಡಿಲ್ಲ.

ತಮಿಳುನಾಡು ಇತ್ತೀಚಿನ ದಿನಗಳಲ್ಲಿ ಕರ್ನಾಟಕಕ್ಕೆ ಭಾರೀ ಪೈಪೋಟಿ ಕೊಡುತ್ತಿದೆ. ಇದೀಗ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಏಪ್ರಿಲ್ ವೇಳೆಗೆ ಅಂತಿಮವಾಗುವ ಸಾಧ್ಯತೆ ಇದೆ. AAI ಇದೀಗ ತಮಿಳುನಾಡಿನ ಎರಡು ಸ್ಥಳಗಳಲ್ಲಿ ಸಮೀಕ್ಷೆ ನಡೆಸುತ್ತಿದೆ. ಇದರಲ್ಲಿ ಹೊಸೂರು ಸಮೀಪದ ಬೆಳಗೊಂಡಪಲ್ಲಿಯ ತನೇಜಾ ಏವಿಯೇಷನ್ ಹಾಗೂ ಏರೋಸ್ಪೇಸ್ ಲಿ. ಒಡೆತನದ ಖಾಸಗಿ ವಿಮಾನ ನಿಲ್ದಾಣದ ಸಮೀಪದ ಹಳ್ಳಿಗಳು ಇದರಲ್ಲಿ ಸೇರಿವೆ.

Bengaluru Second Airport Important update on construction of Hosur Airport

ಭಾರತೀಯ ವಿಮಾನ ಪ್ರಾಧಿಕಾರವು ಎರಡು ಜಾಗಗಳಲ್ಲಿ ವಿಮಾನ ನಿಲ್ದಾಣದ ಬಗ್ಗೆ ಚರ್ಚೆ ಮಾಡಿ ವರದಿಯನ್ನು ಕೇಂದ್ರ ಸರ್ಕಾರ ಹಾಗೂ ತಮಿಳುನಾಡಿನ ಸರ್ಕಾರಕ್ಕೆ ನೀಡಲಿದೆ. ಇದಾದ ಮೇಲೆ ತಮಿಳುನಾಡು ಸರ್ಕಾರವು ಈ ನಿಟ್ಟಿನಲ್ಲಿ ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ತಮಿಳುನಾಡಿನ ಸರ್ಕಾರವು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶರವೇಗದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಕರ್ನಾಟಕ ಸರ್ಕಾರವು ಈ ವಿಚಾರದಲ್ಲಿ ಹಿಂದುಳಿದಿದೆ. ಭಾರತೀಯ ವಿಮಾನ ಪ್ರಾಧಿಕಾರವು ವರದಿ ಕೊಟ್ಟ ಮೇಲೆ ತಮಿಳುನಾಡಿನ ಡಿಎಂಕೆ ಸರ್ಕಾರವು ಅದರ ಬಗ್ಗೆ ಚರ್ಚಿಸಲಿದೆ.

ಅಲ್ಲದೆ ವಿಮಾನ ನಿಲ್ದಾಣಕ್ಕೆ ಸಂಪರ್ಕ, ಭೂಮಿಯ ಅವಶ್ಯಕತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.

ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ತಮಿಳುನಾಡು ಸರ್ಕಾರವು ಈಗಾಗಲೇ ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಸ್ಥಳ ಅಂತಿಮವಾಗುತ್ತಿದ್ದಂತೆಯೇ ಮುಂದಿನ ಪ್ರಕ್ರಿಯೆಗಳು ಶುರುವಾಗಲಿವೆ. ಟ್ರಾಫಿಕ್‌ ಜಾಮ್‌ ಹೆಚ್ಚಾಗಿ ಇಲ್ಲದ ಹಾಗೂ ಸರ್ಕಾರಿ ಭೂಮಿಯ ಹೆಚ್ಚು ಲಭ್ಯವಿರುವ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಪ್ಲ್ಯಾನ್‌ ಮಾಡಿಕೊಳ್ಳಲಾಗುತ್ತಿದೆ.

ಐದು ಜಾಗ ಗುರುತಿಸಿದ್ದ ತಮಿಳುನಾಡು: ಇನ್ನು ತಮಿಳುನಾಡು ಸರ್ಕಾರವು ಹೊಸೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಐದು ಸ್ಥಳಗಳನ್ನು ಫೈನಲ್‌ ಮಾಡಿತ್ತು. ಅದರಲ್ಲಿ ಎರಡು ಜಾಗಗಳನ್ನು ಶಾರ್ಟ್‌ ಲಿಸ್ಟ್‌ ಮಾಡಿ ಭಾರತೀಯ ವಿಮಾನ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಇದೀಗ ಎರಡೂ ಜಾಗಗಳ ಅಧ್ಯಯನ ವರದಿಯೂ ಮುಕ್ತಾಯವಾಗಿದೆ.

ಅಷ್ಟೊಂದು ಸುಲಭ ಪ್ರಕ್ರಿಯೆಯಲ್ಲ: ಇನ್ನು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿನ್ನೆಲೆಯಲ್ಲಿ ಹೊಸೂರಲ್ಲಿ ತಮಿಳುನಾಡು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವುದು ಅಷ್ಟೊಂದು ಸುಲಭವಲ್ಲ ಎಂದೇ ಹೇಳಲಾಗುತ್ತಿದೆ. ಯಾಕೆಂದರೆ ವಿಮಾನ ಹಾರಾಟದ / ವೈಮಾನಿಕ ಟ್ರಾಫಿಕ್‌ ವಿಚಾರದ ಗೊಂದಲಗಳು ಇವೆ. ಇವೆಲ್ಲ‌ ಪರಿಹಾರವಾದರಷ್ಟೇ ತಮಿಳುನಾಡಿನ ಹಾದಿ ಸುಗಮವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+