Bengaluru Mumbai Sleeper VB: ನ.1ರಂದೇ ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ ರೈಲಿಗೆ ಚಾಲನೆ

ಬೆಂಗಳೂರು: ರಾಜಧಾನಿ ಬೆಂಗಳೂರು-ಮುಂಬೈ ನಡುವೆ ಬಹುನಿರೀಕ್ಷೆಯ 'ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು' (Bengaluru-Mumbai Sleeper Vande Bharat 27651/27652) ಕಾರ್ಯಾಚರಣೆ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ರೈಲು ಕರ್ನಾಟಕ-ಮಹಾರಾಷ್ಟ್ರ ನಡುವೆ ಇದೇ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ದಿನವೇ ತನ್ನ ಚೊಚ್ಚಲ ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಖಚಿತಪಡಿಸಿವೆ.

ಹೌದು, ಇಷ್ಟು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಕನ್ನಡಿಗರಿಗೆ ಇದೀಗ ರಾಜ್ಯೋತ್ಸವದಂತೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಎಲ್ಲ ವಿಧದ ತಪಾಸಣೆಗಳು ಅಂತಿಮಗೊಂಡಿವೆ. ಇದರ ಬೆನ್ನಲ್ಲೇ ರಾಜ್ಯೋತ್ಸವ ದಿನ ಉದ್ಘಾಟನಾ ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರೆಯಲಿದೆ.

Bengaluru-Mumbai Sleeper Vande Bharat

ಸದ್ಯ ನವೆಂಬರ್ 1ರಂದು ರೈಲಿನ ಉದ್ಘಾಟನಾ ಮೊದಲ ಅಧಿಕೃತ ಸಂಚಾರವಾಗಿದೆ. ಪ್ರಯಾಣಿಕರಿಗೆ ಲಭ್ಯವಾಗುವಂತೆ ವಾಣಿಜ್ಯ ಸಂಚಾರದ ವೇಳಾಪಟ್ಟಿ, ಅಧಿಕೃತ ಮಾಹಿತಿಯು ಶೀಘ್ರವೇ ಲಭ್ಯವಾಗಲಿದೆ. ರೈಲ್ವೆ ಇಲಾಖೆಯಿಂದ ಆ ಬಗ್ಗೆ ಅಧಿಸೂಚನೆ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ.

ಎರಡು ಮಾರ್ಗಗಳಲ್ಲಿ ಓಡಿಸುವಂತೆ ಒತ್ತಾಯ!

ಹೌದು ಬೆಂಗಳೂರು ಎಸ್‌ಎಂವಿಟಿ (SMVT) ರೈಲು ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (CSMT) ವರೆಗೆ ವಾರದ ಆರು ದಿನ ಸಂಚಾರ ಮಾಡಲಿದೆ. ಅದರಲ್ಲಿ ಮೂರು ದಿನ ಬೆಂಗಳೂರಿನಿಂದ ಆಂಧ್ರ ಗಡಿ ಮೂಲಕ ಬೀದರ್, ಕಲಬುರಗಿ ಮಾರ್ಗವಾಗಿ ಸಾಗಲಿದೆ. ಇದರಲ್ಲಿ ಮೂರು ದಿನ ಮತ್ತೊಂದು ಮಾರ್ಗವಾಗಿ ಬೆಂಗಳೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಓಡಿಸುವಂತೆಯೂ ಪ್ರಬಲ ಆಗ್ರಹ ಕೇಳಿ ಬಂದಿದೆ. ಸದ್ಯ ಮೊದಲ (ಬೆಂಗಳೂರು-ಆಂಧ್ರ ಗಡಿ-ಕಲಬುರಗಿ) ಮಾರ್ಗವಾಗಿ ಓಡಿಸಲು ಮುಂದಾಗಿದೆ.

ಆಧುನಿಕ ರೈಲಿನ ವೈಶಿಷ್ಟ್ಯ, ವೇಗ & ಪ್ರಯೋಜನ

ಬೆಂಗಳೂರಿನಿಂದ ಸುಮಾರು 1200 ಕಿಲೋ ಮೀಟರ್‍‌ಗೂ ಅಧಿಕ ದೂರವಿರುವ ಮುಂಬೈವರೆಗಿನ ಸುದೀರ್ಘ ಪ್ರಯಾಣವನ್ನು 22 ಗಂಟೆಗಳ ಬದಲಾಗಿ ಕೇವಲ 15-16 ಗಂಟೆಯಲ್ಲೆ ಕ್ರಮಿಸಲಿದೆ. ಇದರಿಂದ ಎರಡು ರಾಜ್ಯಗಳ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ರಾತ್ರಿ ಸಂಚಾರ ಮಾಡುವ ದೀರ್ಘ ಪ್ರಯಾಣದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು, ಅತ್ಯಾಧುನಿಕ ಸೌಲಭ್ಯಗಳ ಸಹಿತ ತಯಾರಿಸಲಾದ ಸ್ಲೀಪರ್ ವಂದೇ ಭಾರತ್ ರೈಲಾಗಿದೆ. ಗಂಟೆಗೆ 130 ಕಿಲೋ ಮೀಟರ್ ಚಲಿಸಬಲ್ಲ ಈ ರೈಲಿಗೆ ಸದ್ಯ 16 ಬೋಗಿಗಳು ಇರಲಿವೆ. ಮುಂದೆ ಈ ಬೋಗಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+