ಬೆಂಗಳೂರಿನಿಂದ ಮಹಾರಾಷ್ಟ್ರದ ಅಭಿವೃದ್ಧಿಗೆ ಹಿನ್ನಡೆ ಆಗಿದೆ: ಮಹಾ ಸಿ.ಎಂ ಹೇಳಿಕೆ!
ಬೆಂಗಳೂರಿನ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅಪಪ್ರಚಾರ ಹೆಚ್ಚಾಗುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕದ ಬಗ್ಗೆ ಕೆಲವರು ಅನವಶ್ಯಕವಾಗಿ ಕೆಲವೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಬೆಂಗಳೂರಿನ ಬಗ್ಗೆ ಬಹಿರಂಗವಾಗಿಯೇ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಚಿವರೇ ಹೇಳಿಕೆ ಕೊಡುತ್ತಿದ್ದು. ಭಾರೀ ಗೊಂದಲ ಹಾಗೂ ಕೆಟ್ಟ ಹೆಸರು ಬರುವುದಕ್ಕೆ ಕಾರಣವಾಗುತ್ತಿದೆ. ಇದೀಗ ಬೆಂಗಳೂರಿನ ನಗರ ನಕ್ಸಲರಿಂದ ನಮ್ಮ ರಾಜ್ಯದ ಅಭಿವೃದ್ಧಿಗೆ ಕಷ್ಟವಾಗುತ್ತಿದೆ ಅಂತಾ ನೆರೆಯ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಬಹಿರಂಗವಾಗಿಯೇ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಕರ್ನಾಟಕದ ರಾಜಧಾನಿ ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಆದರೆ, ಅಕ್ಕ - ಪಕ್ಕದ ರಾಜ್ಯದ ಪ್ರಭಾವಿಗಳೇ ಬೆಂಗಳೂರಿನ ಬಗ್ಗೆ ಅಪಪ್ರಚಾರ ಮುಂದುವರಿಸಿದ್ದಾರೆ. ಇದೀಗ ಬೆಂಗಳೂರಿಗರಿಂದಲೇ ನಮ್ಮ ರಾಜ್ಯ ಅಭಿವೃದ್ಧಿ ಆಗುತ್ತಿಲ್ಲ ಅಂತಾ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಆರೋಪ ಮಾಡಿದ್ದಾರೆ. ಈ ಗಂಭೀರ ಆರೋಪಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದ ಬೆಂಗಳೂರು ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಕೆಲವರಿಂದ ನಮ್ಮ ರಾಜ್ಯ ಅಭಿವೃದ್ಧಿನೇ ಆಗ್ತಿಲ್ಲ ಕಣ್ರೀ ಅಂತ ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿದ್ದೇನು ಅಂತಾ ನೋಡೋಣ.

ಬೆಂಗಳೂರಿನ ಬಗ್ಗೆ ಬೇಕಂತೆಲೇ ಕೆಲವರು ವಿವಾದಾತ್ಮಕವಾದ ಹೇಳಿಕೆಯನ್ನು ಕೊಡುತ್ತಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಕೆಟ್ಟ ಬೆಳವಣಿಗೆ ಅಂತಲೇ ಹೇಳಬಹುದು. ಇದೀಗ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವಿಸ್ ಬೆಂಗಳೂರಿನಲ್ಲಿರುವ ಕೆಲವು ನಗರ ನಕ್ಸಲರು ವಿದೇಶದಿಂದ ಹಣ ಪಡೆದುಕೊಂಡು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದ ಮಹಾರಾಷ್ಟ್ರದಲ್ಲಿ ಅಭಿವೃದ್ಧಿನೇ ಸಾಧ್ಯವಾಗುತ್ತಿಲ್ಲ ಎಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಗಢ್‌ಚಿರೋಲಿ ಎನ್ನುವ ಪ್ರದೇಶದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಅನ್ಯ ರಾಜ್ಯಗಳ ನಗರ ನಕ್ಸಲರಿಂದ ನಮ್ಮ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದಿದ್ದಾರೆ. ವಿದೇಶಗಳಿಂದ ದೇಣಿಗೆ ಪಡೆದುಕೊಂಡು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅವರಲ್ಲಿ ಬೆಂಗಳೂರಿಗರು ಹಾಗೂ ಕೋಲ್ಕತ್ತಾದವರು ಸೇರಿದ್ದಾರೆ. ಎರಡೂ ನಗರಗಳಲ್ಲಿರುವ ನಾಲ್ವರಿಂದ ಸುಳ್ಳು ಸುದ್ದಿ ಹರಡುತ್ತಿದೆ. ಇಲ್ಲಿನ ಜನರನ್ನು ಸಂವಿಧಾನದ ವಿರುದ್ಧ ಎತ್ತಿ ಕಟ್ಟುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಈಚೆಗೆ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಅವರು, ಬೆಂಗಳೂರಿಗಿಂತ ನಮ್ಮ ರಾಜ್ಯ ಉತ್ತಮವಾಗಿದೆ ಇಲ್ಲಿಗೆ ಬನ್ನಿ ಎಂದು ಕರ್ನಾಟಕದ ಹೂಡಿಕೆದಾರರನ್ನು ಸ್ವಾಗತಿಸಿದ್ದರು. ಅಲ್ಲದೇ ನಮ್ಮ ರಾಜ್ಯದಲ್ಲಿ ಯಾವ ಭಾಷೆಯಲ್ಲಾದರೂ ಮಾತನಾಡಿ, ಯಾವ ಆಹಾರವನ್ನಾದರೂ ಸೇವಿಸಿ ಎಂದು ಹೇಳುವ ಮೂಲಕವೂ ಕನ್ನಡಿಗರನ್ನು ಪರೋಕ್ಷವಾಗಿ ಕೆಣಕಿದ್ದರು.












Click it and Unblock the Notifications