Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ಭಾರೀ ಪೈಪೋಟಿ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ "ಇನ್ಫೋಸಿಸ್" ಶಾಶ್ವತ ಕ್ಯಾಂಪಸ್

ಬೆಂಗಳೂರಿನ ಐಟಿ - ಬಿಟಿ ಕ್ಷೇತ್ರಕ್ಕೆ ದಕ್ಷಿಣ ಭಾರತದ ರಾಜ್ಯಗಳಿಂದ ಭಾರೀ ಪೈಪೋಟಿ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ತೆಲಂಗಾಣದ ಹೈದರಾಬಾದ್ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರಗಳಿಂದ ಭಾರೀ ಪೈಪೋಟಿ ಎದುರಾಗುತ್ತಿದೆ. ದಶಕಗಳಿಂದಲೂ ಅವಿಭಜಿತ ಆಂಧ್ರಪ್ರದೇಶದ ಭಾಗವಾಗಿದ್ದ ಹೈದರಾಬಾದ್ ಹಾಗೂ ಬೆಂಗಳೂರಿನ ನಡುವೆ ಐಟಿ - ಬಿಟಿ ವಿಚಾರದಲ್ಲಿ ದೊಡ್ಡ ಮಟ್ಟದ ಪೈಪೋಟಿ ಇದೆ.

ಇದೀಗ ಬೆಂಗಳೂರಿನ ಮೂಲದ ಕಂಪನಿಯಿಂದಲೇ ಬೆಂಗಳೂರಿಗೆ ಪೈಪೋಟಿ ಎದುರಾಗುವ ಬಗ್ಗೆ ಚರ್ಚೆ ನಡೆದಿದೆ. ಇನ್ಫೋಸಿಸ್ ಮೊದಲು ಮಹಾರಾಷ್ಟ್ರದ ಪುಣೆಯಲ್ಲಿ ಪ್ರಾರಂಭವಾಯಿತು. ಇದಾದ ಎರಡನೇ ವರ್ಷಗಳ ಅವಧಿಯಲ್ಲಿ 1983ರಲ್ಲಿ ಇದರ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಅಂದಿನಿಂದಲೂ ಇನ್ಫೋಸಿಸ್ ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇದೆ. ಬೆಂಗಳೂರಿನ ಐಟಿ - ಬಿಟಿ ಕ್ಷೇತ್ರಕ್ಕೆ ಇನ್ಫೋಸಿಸ್ ಕೊಡುಗೆ ಅಪಾರ ಎಂದೇ ಹೇಳಬಹುದು.

Bengaluru Faces New Rival as Infosys Announces Permanent Campus in Visakhapatnam

ಇದೀಗ ಬೆಂಗಳೂರಿಗೆ ಪೈಪೋಟಿ ನೀಡುತ್ತಿರುವ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ಇನ್ಫೋಸಿಸ್‌ ದಾಪುಗಾಲು ಇರಿಸಿದೆ. ಇದು ಇನ್ಫೋಸಿಸ್‌ನ ವ್ಯವಹಾರ ಹಾಗೂ ಬ್ಯುಸಿನೆಸ್‌ನ ವಿಸ್ತಾರದ ಭಾಗವಾಗಿದೆಯಾದರೂ ಇದು ಬೆಂಗಳೂರಿನ ಐಟಿ ಕ್ಷೇತ್ರದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವ ಚರ್ಚೆ ಶುರುವಾಗಿದೆ. ಇನ್ಫೋಸಿಸ್‌ ವಿಶಾಖಪಟ್ಟಣಂನಲ್ಲಿ ಶಾಶ್ವತ ಕ್ಯಾಂಪಸ್ ಸ್ಥಾಪನೆ ಮಾಡುವುದಕ್ಕೆ ಮುಂದಾಗಿದೆ.

ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಯಾಗಿರುವ ಇನ್ಫೋಸಿಸ್ ವಿಶಾಖಪಟ್ಟಣಂನಲ್ಲಿ ಶಾಶ್ವತ ಕ್ಯಾಂಪಸ್ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ 20 ಎಕರೆ ಜಾಗವನ್ನು ಮಂಜೂರು ಮಾಡಲು ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ. ಕಂಪನಿಯ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸಭೆ ನಡೆಸಿದ್ದು, ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ತಿಂಗಳು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಇನ್ಫೋಸಿಸ್ ಮತ್ತು ಅದರ ಅಂಗಸಂಸ್ಥೆಗಳು ಸುಮಾರು 50 ದೇಶಗಳಲ್ಲಿ ಕ್ಯಾಂಪಸ್‌ಗಳನ್ನು ಹೊಂದಿವೆ.

ದಕ್ಷಿಣ ಭಾರತದಲ್ಲಿ ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಕ್ಯಾಂಪಸ್‌ಗಳಿವೆ. ಇದರ ಜೊತೆಗೆ, ಹೈದರಾಬಾದ್, ಚೆನ್ನೈ ಮತ್ತು ತಿರುವನಂತಪುರಂನಲ್ಲಿ ಕ್ಯಾಂಪಸ್‌ಗಳಿವೆ. ಈಗ ವಿಶಾಖಪಟ್ಟಣದಲ್ಲಿ ಕ್ಯಾಂಪಸ್ ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸುವ ಗುರಿಯನ್ನು ಇನ್ಫೋಸಿಸ್ ಹಾಕಿಕೊಂಡಿದೆ ಎಂದು ಹೇಳಲಾಗಿದೆ.

ಸಿದ್ಧರಾಗಿ ವಿಶಾಖಪಟ್ಟಣಂ!

ಇನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಆಂಧ್ರಪ್ರದೇಶದ ಐಟಿ ಸಚಿವ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಸಿದ್ಧರಾಗಿ, ವಿಶಾಖಪಟ್ಟಣಂ. ಈ ತಿಂಗಳು ವಿಶ್ವ ಚಾಂಪಿಯನ್‌ಗಳು ಬರುತ್ತಿದ್ದಾರೆ. ಯಾರು ಬರುತ್ತಾರೆಂದು ಯಾರು ಊಹಿಸಲು ಸಾಧ್ಯವಿಲ್ಲ ಎನ್ನುವ ಟ್ವೀಟ್ ಮಾಡಿದ್ದಾರೆ. ಇದು ಇನ್ಫೋಸಿಸ್ ಸಂಸ್ಥೆಯ ಬಗ್ಗೆ ಇರಬಹುದು ಎಂದು ಹಲವರು ಅಂದಾಜಿಸಿದ್ದಾರೆ.

ಬೆಂಗಳೂರಿಗೆ ಪೈಪೋಟಿ: ಇನ್ನು ಕಳೆದ ಒಂದು ವರ್ಷದ ಅವಧಿಯಿಂದಲೂ ಬೆಂಗಳೂರು - ವಿಶಾಖಪಟ್ಟಣಂ ನಗರಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬೆಂಗಳೂರಿಗೆ ಬರಬೇಕಾಗಿದ್ದ ಐಟಿ ಹಬ್ ಅವಕಾಶವು ಕೊನೆಯ ಕ್ಷಣದಲ್ಲಿ ಬೆಂಗಳೂರು ಕೈತಪ್ಪಿತ್ತು. ಅಲ್ಲದೇ ಹಲವು ಪ್ರತಿಷ್ಠಿತ ಹಾಗೂ ಐಟಿ - ಬಿಟಿ ಕಂಪನಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ಕಚೇರಿಗಳನ್ನು ಪ್ರಾರಂಭಿಸುತ್ತಿದ್ದು, ಇದು ಬೆಂಗಳೂರಿಗೆ ಪೈಪೋಟಿ ಎಂದೇ ಪರಿಗಣಿಸಲಾಗುತ್ತಿದೆ.

ಬೆಂಗಳೂರಿನ ಪ್ರಮುಖ ಯೋಜನೆಗಳು ಆಂಧ್ರಪ್ರದೇಶಕ್ಕೆ ಹೋಗುತ್ತಿರುವುದನ್ನು ಕರ್ನಾಟಕ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+