Get Updates
Get notified of breaking news, exclusive insights, and must-see stories!

Bengaluru-Coimbatore Vande Bharat: ಮಾರ್ಚ್ 11 ರಿಂದ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಟೈಂ ಚೇಂಜ್

ಬೆಂಗಳೂರು, ಫೆಬ್ರವರಿ.28: ಮಾರ್ಚ್ 11 ರಿಂದ ಬೆಂಗಳೂರು ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಪರಿಷ್ಕರಿಸಲಾಗುವುದು ಎಂದು ನೈಋತ್ಯ ರೈಲ್ವೆ (SWR) ಪ್ರಕಟಣೆಯಲ್ಲಿ ತಿಳಿಸಿದೆ. ರೈಲ್ವೇ ಮಂಡಳಿಯು ರೈಲಿನ ಹೊಸ ಸಮಯವನ್ನು ಅನುಮೋದಿಸಿದ್ದು, ಪ್ರಯಾಣಿಕರು ಇದನ್ನು ಗಮನಿಸುವಂತೆ ಮನವಿ ಮಾಡಿದೆ.

ವರದಿಗಳ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಮಿಳುನಾಡಿನ ಕೊಯಮತ್ತೂರಿನಿಂದ ಬೆಳಗ್ಗೆ 5 ಗಂಟೆಗೆ ಬದಲಾಗಿ 7.25 ಕ್ಕೆ ಹೊರಡಲಿದೆ. ಬೆಳಗ್ಗೆ 11.30 ರ ಬದಲಿಗೆ ಮಧ್ಯಾಹ್ನ 1.50 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪಲಿದೆ. ಬೆಂಗಳೂರಿನಿಂದ ರೈಲು ಬೆಳಗ್ಗೆ 11.30ಕ್ಕೆ ಬದಲಾಗಿ ಮಧ್ಯಾಹ್ನ 2.20ಕ್ಕೆ ಮತ್ತೆ ಆರಂಭವಾಗಲಿದೆ. ರಾತ್ರಿ 8.45 ಗಂಟೆಗೆ ಕೊಯಮತ್ತೂರು ತಲುಪಲಿದೆ.

Bengaluru-Coimbatore Vande Bharat Express timings revised from March 11

ಡಿಸೆಂಬರ್ 30, 2023 ರಿಂದ ಕೊಯಮತ್ತೂರು - ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆ ಒದಗಿಸುತ್ತಿದೆ. ಬೆಳಗ್ಗೆ 5 ಗಂಟೆಗೆ ರೈಲು ಹೊರಡುವುದರಿಮದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಯಾಣಿಕರು ದುರು ನೀಡುತ್ತಿದ್ದರು. ಪ್ರಯಾಣಿಕರ ಸಂಘಗಳು ಮತ್ತು ಜನಪ್ರತಿನಿಧಿಗಳು ರೈಲ್ವೆ ಸಚಿವಾಲಯಕ್ಕೆ ಪದೇ ಪದೇ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈಲ್ವೇ ನಿರ್ಗಮನ ಸಮಯವನ್ನು 5 ಗಂಟೆಯ ಬದಲು ಬೆಳಗ್ಗೆ 7.25 ಗಂಟೆಗೆ ಬದಲಾಯಿಸಲಾಗಿದೆ.

ಇನ್ನು, ವಂದೇ ಭಾರತ್ ರೈಲು ಸಮಯ ಬದಲಾವಣೆ ಬಗ್ಗೆ ಬೆಂಗಳೂರು ಮತ್ತು ಕೊಯಮತ್ತೂರು ನಡುವಿನ ನಿಲುಗಡೆ ನಿಲ್ದಾಣಗಳಲ್ಲಿಯೂ ಸಮಯದ ಬದಲಾವಣೆ ಬಗ್ಗೆ ಸೂಚನೆ ನೀಡಲಾಗುತ್ತದೆ. ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆಗೆ ಬರೆದ ಪತ್ರದಲ್ಲಿ, ರೈಲ್ವೆ ಮಂಡಳಿಯು (20641/20642) ಬೆಂಗಳೂರು ಕಂಟೋನ್ಮೆಂಟ್ - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಮಯವನ್ನು ಪರಿಷ್ಕರಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಅನುಮೋದಿಸಿದೆ ಎಂದು ಹೇಳಿದೆ.

ಇನ್ನು, ರೈಲ್ವೇ ಸಮಯ ಬದಲಾವಣೆ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ನಿರ್ದೇಶನ ನೀಡಿದೆ. ಡಿಸೆಂಬರ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಆರು ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಉದ್ಘಾಟಿಸಿದ ನಂತರ ರಾಜ್ಯಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲು ಪ್ರಾರಂಭಿಸಿತ್ತು.

Bengaluru-Coimbatore Vande Bharat Express timings revised from March 11

ಬೆಂಗಳೂರು-ಕೊಯಮತ್ತೂರು ಮತ್ತು ಮಂಗಳೂರು-ಮಡ್ಗಾಂವ್ ನಡುವೆ ವಂದೇ ಭಾರತ್ ರೈಲುಗಳು ಓಡಾಡುತ್ತಿದ್ದು, ರಾಜ್ಯದಲ್ಲಿ ಐದು ವಂದೇ ಭಾರತ್ ರೈಲುಗಳು ಸೇವೆ ನೀಡುತ್ತಿದೆ. ಬೆಂಗಳೂರು ಮತ್ತು ಕೊಯಮತ್ತೂರು ನಡುವಿನ ವಂದೇ ಭಾರತ್ ರೈಲು ಬಹಳಷ್ಟು ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರಿಗೆ ಪ್ರಯೋಜನ ನೀಡುತ್ತಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ, 380-ಕಿಲೋಮೀಟರ್ ದೂರವನ್ನು ಸರಿಸುಮಾರು ಆರು ಗಂಟೆಗಳಲ್ಲಿ ಕ್ರಮಿಸ ಬಹುದು. ಈ ರೈಲು ಹೊಸೂರು, ಧರ್ಮಪುರಿ, ಸೇಲಂ, ಈರೋಡ್ ಮತ್ತು ತಿರುಪ್ಪೂರ್‌ನಲ್ಲಿ ನಿಲುಗಡೆ ನೀಡುತ್ತದೆ. ಪ್ರಸ್ತುತ ಬೆಂಗಳೂರಿನಿಂದ ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಚೆನ್ನೈ, ಮೈಸೂರು, ಹೈದರಾಬಾದ್ ಮತ್ತು ಕೊಯಮತ್ತೂರುಗಳಿಗೆ ವಂದೇ ಭಾರತ್ ರೈಲುಗಳು ಹೋಗಲಿವೆ.

Vande Bharat Express: From March 11 timings of Vande Bharat train between Bengaluru-Coimbatore will be revised said South Western Railways (SWR). know more.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+