ಬೈಕ್‌ನಲ್ಲಿ ಕಾರ್ಗಿಲ್‌ಗೆ ತೆರಳಿ ಸೈನಿಕರಿಗೆ ಗೌರವ ಸಲ್ಲಿಸಿದ ಬೆಂಗಳೂರು ಯೋಧರು
ಬೆಂಗಳೂರು, ಜುಲೈ 25: ಬೆಂಗಳೂರಿನಿಂದ 6 ಜನ ಯೋಧರ ಗುಂಪೊಂದು ಕಾರ್ಗಿಲ್‌ಗೆ ತಮ್ಮ ಮೋಟರ್ ಸೈಕಲ್‌ನಲ್ಲಿ ಪ್ರಯಾಣ ಮಾಡಿ ಗಮ್ಯ ತಲುಪಿದ್ದಾರೆ.
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಬೇಕೆಂದ ಉದಾತ್ತ ಧ್ಯೇಯ ಇರಿಸಿಕೊಂಡು ಬೈಕ್ ಸವಾರಿ ಮಾಡಿದ್ದ ಈ ಸೈನಿಕರು. ಕಾರ್ಗಿಲ್ ತಲುಪಿ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.
ಮಡಿದ ಸೈನಿಕರಿಗೆ ಗೌರವ ಮಾತ್ರವಲ್ಲದೆ, ಯುವಕರನ್ನು ಸೇನೆ ಸೇರಲು ಉತ್ತೇಜನ ನೀಡುವ ಮಹತ್ ಉದ್ದೇಶವೂ ಅವರ ಬೈಕ್ ಪ್ರಯಾಣದಲ್ಲಿ ಅಡಕವಾಗಿತ್ತು.

ಸೇನಾ ಪೊಲೀಸ್‌ನ ಮೋಟಾರ್ ಸೈಕಲ್ ಪರಿಣತರ 'ಶ್ವೇತಾಶ್ವ' ಪಡೆ ಜುಲೈ 02ರ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟಿತ್ತು. ಬೆಳಗಾವಿ, ಪುಣೆ, ಮುಂಬೈ, ವಡೋದರ, ಉದಯಪುರ, ನಜಿರಾಬಾದ್, ನವದೆಹಲಿ, ಚಂಡಿಗಡ, ಮನಾಲಿ, ಸರ್ಚು ಮತ್ತು ಲೆಹ್ ಮೂಲಕ ಈ ಪಡೆ ಕಾರ್ಗಿಲ್ ತಲುಪಿದೆ.

ಟಿವಿಎಸ್ ಅಪಾಚೆ 200 ಸಿಸಿ ಬೈಕ್‌ನಲ್ಲಿ ಬೆಂಗಳೂರಿನಿಂದ ಕಾರ್ಗಿಲ್ ವರೆಗೆ ಸುಮಾರು 3,250 ಕಿ.ಮೀಟರ್ ದೂರವನ್ನು ಈ ಸೈನಿಕರು ಕ್ರಮಿಸಿದ್ದಾರೆ. ಧೈರ್ಯಶಾಲಿ ಬೆಂಗಳೂರಿನ ಯೋಧರ ಮುಡಿಗೆ ಈ ಮಹತ್ ಕಾರ್ಯ ಮತ್ತೊಂದು ಗರಿಯನ್ನು ಪೋಣಿಸಿದೆ.












Click it and Unblock the Notifications