ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಪರಿಸರ‌ ಪ್ರೇಮ ದೆಹಲಿಗೆ ಸೀಮಿತವೇ?

By Nayana
|
Google Oneindia Kannada News

ಬೆಂಗಳೂರು, ಜೂನ್‌ 28: ದೆಹಲಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಅಲ್ಲಿನ ಆಮ್‌ ಆದ್ಮಿ ಪಕ್ಷದ ರಾಜ್ಯ ಸರ್ಕಾರಗಳು ಜಂಟಿಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಸಾವಿರಾರು ಮರಗಳನ್ನು ನೆಲಕ್ಕುರುಳಿಸಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಚಳವಳಿಗೆ ಕರೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರ ಪರಿಸರ ಕಾಳಜಿ ಕೇವಲ ದೆಹಲಿಗೆ ಸೀಮಿತವೇ? ಬೆಂಗಳೂರಿನಲ್ಲೂ ನಿತ್ಯ ಹಲವು ಮರಗಳನ್ನು ಕಡಿಯುತ್ತಿದ್ದರೂ ರಾಹುಲ್ ಗೆ ಇದು ಕಾಣುತ್ತಿಲ್ಲವೇ ಎಂದು ಸಾರ್ವಜನಿಕರು ಧ್ವನಿ ಎತ್ತಿದ್ದಾರೆ.

'ಭಾವ ವಾದ್ರಾ ಆದಾಯದ ವಿಚಾರಕ್ಕೆ ರಾಹುಲ್ ಏಕೆ ಬಾಯಿ ತೆರೆಯಲ್ಲ?' 'ಭಾವ ವಾದ್ರಾ ಆದಾಯದ ವಿಚಾರಕ್ಕೆ ರಾಹುಲ್ ಏಕೆ ಬಾಯಿ ತೆರೆಯಲ್ಲ?'

ನಿನ್ನೆಯಷ್ಟೆ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ, 'ಬಿಜೆಪಿ ಹಾಗೂ ಆಪ್ ಸರ್ಕಾರಗಳು ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಮರಗಳನ್ನು ನಾಶ ಮಾಡಿವೆ. ಮರಗಳು ಮನುಷ್ಯನ ಅಸ್ತಿತ್ವಕ್ಕಾಗಿ ಅತ್ಯವಶ್ಯಕ ಹಾಗೂ ಅವುಗಳಿಗೆ ಸರಿಸಮನಾದುದು ಯಾವುದೂ ಇಲ್ಲ ಎಂಬುದು ಮಕ್ಕಳಿಗೂ ತಿಳಿದಿರುವ ವಿಚಾರ. ಹೀಗಾಗಿ ಉಭಯ ಸರ್ಕಾಗಳ ಹುಚ್ಚುತನದ ನಿಲುವಿನ ವಿರುದ್ಧ ಕಾಂಗ್ರೆಸ್ ಹೋರಾಟದಲ್ಲಿ ಕೈಜೋಡಿಸಿ' ಎಂದು ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ.

ಆದರೆ ಬೆಂಗಳೂರಿನ ವರ್ತೂರಿನಲ್ಲಿ ಜಾಹೀರಾತು ಲಕ ಅಳವಡಿಸಲು ಮರಗಳನ್ನು ಕತ್ತರಿಸಲಾಗುತ್ತಿದೆ. ಇಂತಹ ಹುಚ್ಚು ನಿರ್ಧಾರ ಮಾಡಿರುವ ಇಲ್ಲಿನ ಕಾಂಗ್ರೆಸ್ ಆಡಳಿತದ ಬಗೆಗೆ ಕೂಡ ರಾಹುಲ್ ಧ್ವನಿ ಎತ್ತಬೇಕು.

Bengalurians ask RaGa to insist his own party govt on environment

ಜೊತೆಗೆ ರಾಹುಲ್ ನೆರವಿನೊಂದಿಗೆ ಸರ್ಕಾರ ನಡೆಸುತ್ತಿರುವ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ರಾಹುಲ್ ಪರಿಸರ ಕಾಳಜಿಯ ಪಾಠ ಹೇಳಿಕೊಡಬೇಕು ಎಂದು ಬೆಂಗಳೂರಿನ ನಾಗರಿಕರು ಸಾಮಾಜಿಕ ಜಾಲತಾಣದ ಮೂಲಕವೇ ಸಲಹೆ ನೀಡಿದ್ದಾರೆ.

ಆದರೆ ರಾಜಕಾರಣದ ದೃಷ್ಟಿಕೋನವನ್ನೂ ಮೀರಿ ತಮ್ಮದೇ ಪಕ್ಷದ ಪಾಲುದಾರ ಸರ್ಕಾರಕ್ಕೆ ಹಾಗೂ ತಮ್ಮದೇ ಪಕ್ಷ ಆಡಳಿತ ಇರುವ ಬಿಬಿಎಂಪಿಗೆ ಮರಗಳನ್ನು ನಾಶಪಡಿಸದಂತೆ ರಾಹುಲ್ ಗಾಂಧಿ ನಿರ್ದೇಶನ ನೀಡಿ, ನೈಜ ಪರಿಸರ ಪ್ರೇಮ ಮೆರೆಯುತ್ತಾರಾ? ಕಾದು ನೋಡಬೇಕು.

English summary
AICC chief Rahul Gandhi has criticized tree chopping in Delhi. But Bengalurians have urged Rahul to insist his own party's government to stop trees cutting in Bengaluru everyday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X