ಬಂಗಾಳ: ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಮತ್ತೆ ಕಲ್ಲು ತೂರಾಟ, ರೈಲು ಸಂಚಾರಕ್ಕೆ ಅಡ್ಡಿ
ಕೋಲ್ಕತ್ತಾ ಜನವರಿ 9: ಒಂದು ವಾರದ ಅವಧಿಯಲ್ಲಿ, ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟದ ಮತ್ತೊಂದು ಘಟನೆ ಮುನ್ನೆಲೆಗೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದ್ದು, ರೈಲಿನ ಸಿ14 ಕಂಪಾರ್ಟ್‌ಮೆಂಟ್ ಮೇಲೆ ಭಾನುವಾರ ಕಲ್ಲು ತೂರಾಟ ನಡೆದಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿರುವುದು ಇದು ಮೂರನೇ ಬಾರಿ.
ಬೋಲ್‌ಪುರದ ರೈಲು ನಿಲ್ದಾಣದಲ್ಲಿ ಕೇವಲ ಎರಡು ನಿಮಿಷಗಳ ನಿಲುಗಡೆಗೆ ವಿರುದ್ಧವಾಗಿ ರೈಲು 10 ನಿಮಿಷಗಳ ಕಾಲ ನಿಲ್ಲುವಂತೆ ಒತ್ತಾಯಿಸಿ ಘಟನೆ ನಡೆದಿದೆ. ಘಟನೆಯಿಂದಾಗಿ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು. ಕಲ್ಲು ತೂರಾಟದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ಘಟನೆಯನ್ನು ಪೊಲೀಸ್ ಅಧಿಕಾರಿಗಳು ಗಮನಿಸುತ್ತಿದ್ದಾರೆಂದು ದೃಶ್ಯಗಳು ತೋರಿಸಿವೆ. ಸ್ಟೇಷನ್ ದಾಟಿ ಮಾಲ್ಡಾ ಸ್ಟೇಷನ್ ತಲುಪುವಷ್ಟರಲ್ಲಿ ಈ ಘಟನೆ ನಡೆದಿದೆ.

ಈ ಹಿಂದೆ, ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ನಡೆಸಲಾಗಿತ್ತು, ರೈಲು ಬಿಹಾರ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯ ತನಿಖೆಗೆ ಎನ್‌ಐಎ ಮಧ್ಯಪ್ರವೇಶಿಸಬೇಕೆಂದು ಬಿಜೆಪಿ ಒತ್ತಾಯಿಸಿತ್ತು. ಡಿಸೆಂಬರ್ 30 ರಂದು ಹೌರಾ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ರೈಲಿಗೆ ಚಾಲನೆ ನೀಡಿದರು.












Click it and Unblock the Notifications