ರಾಜಕೀಯ ಗಲಭೆ : ಬಿಜೆಪಿ ನಾಯಕಿ ರೂಪಾ ಗಂಗೂಲಿ ತಲೆಗೆ ಪೆಟ್ಟು

ಕೋಲ್ಕತ್ತಾ, ಮೇ 23: ಪಶ್ಚಿಮ ಬಂಗಾಳದಲ್ಲಿ ಅಸೆಂಭ್ಲಿ ಚುನಾವಣೆ ನಂತರ ಎಂದಿನಂತೆ ಹಿಂಸಾಚಾರ, ರಾಜಕೀಯ ಪ್ರೇರಿತ ಗಲಭೆಗಳು ಮೊದಲಾಗಿವೆ. ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡುವುದು ಮುಂದುವರೆದಿದ್ದು, ಭಾನುವಾರ ನಟಿ ಹಾಗೂ ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ.

ರೂಪಾ ಗಂಗೂಲಿ ಅವರಿದ್ದ ವಾಹನ ಹಾಗೂ ಬೆಂಗಾವಲಿನ ವಾಹನ ಮೇಲೆ ಕೋಲ್ಕತ್ತಾದ ಡೈಮಂಡ್ ಹಾರ್ಬರ್ ಬಳಿ ದಾಳಿ ಹಲ್ಲೆ ನಡೆದಿದ್ದು, ಗಂಗೂಲಿ ಅವರ ತಲೆಗೆ ಏಟು ಬಿದ್ದಿದೆ. ಅವರನ್ನು ಖಾಸಗಿ ಆಸ್ಪತ್ರೆಗ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. [ಹಗರಣಗಳ ನಡುವೆಯೂ ಗಹಗಹಿಸಿದ ಮಮತಾ ಬ್ಯಾನರ್ಜಿ]

Bengal Post poll Violence : Actor and BJP leader Roopa Ganguly attacked

ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದರು ಎಂದು ಗಂಗೂಲಿ ಅವರು ಆಪಾದಿಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೂಪಾ ಸೋಲುಂಡಿದ್ದರು. ಮಾಜಿ ಕ್ರಿಕೆಟರ್ ತೃಣಮೂಲ ಕಾಂಗ್ರೆಸ್ಸಿನ ಲಕ್ಷ್ಮಿ ರತನ್ ಶುಕ್ಲಾ ವಿರುದ್ಧ ಪರಾಭವಗೊಂಡರು.[ರೀಲ್ ನಿಂದ ರಿಯಲ್ ಮಹಾಭಾರತಕ್ಕೆ ರೂಪಾ ಗಂಗೂಲಿ]

ರೂಪಾ ಗಂಗೂಲಿ ಅವರು ದಕ್ಷಿಣ 24 ಪರಗಣ ಜಿಲ್ಲೆಯ ಕೊಕ್ಡದ್ವೀಪದಿಂದ ವಾಪಾಸಾಗುತ್ತಿದ್ದಾಗ ಈ ಹಲ್ಲೆ ನಡೆದಿದೆ. ರೂಪಾ ಅವರು ರಾಜಕೀಯ ದಾಳಿ ಸಂತ್ರಸ್ಥರನ್ನು ಭೇಟಿ ಮಾಡಲು 24 ಪರಗಣ ಜಿಲ್ಲೆಗೆ ಭೇಟಿ ನೀಡಿದ್ದರು. [ದ್ರೌಪತಿ ಮೇಲೆ ಕೌರವ ಕಾರ್ಯಕರ್ತರ ಹಲ್ಲೆ - ಆರೋಪ]

ಪಶ್ಚಿಮ ಬಂಗಾಲದ ಸಿಎಂ ಆಗಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಅರುಣ್ ಜೇಟ್ಲಿರಂಥ ಹಿರಿಯ ನಾಯಕರನ್ನು ಆಹ್ವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+