ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸ್ ಆಪ್ ಸಂದೇಶ ಜೈಲು ತಲುಪಿಸಬಹುದು, ಎಚ್ಚರ!

|
Google Oneindia Kannada News

ವಾಟ್ಸ್ ಆಪ್ ನಲ್ಲಿ ಬಹಳ ಮೆಸೇಜ್ ಗಳನ್ನು ಫಾರ್ವರ್ಡ್ ಮಾಡ್ತಿರ್ತೀರಾ? ಅಥವಾ ಯಾವುದಾದರೂ ವಾಟ್ಸ್ ಆಪ್ ಗ್ರೂಪ್ ನ ಅಡ್ಮಿನ್ ಆಗಿದ್ದೀರಾ? ನಿಮಗೆ ಬಂದ ಮೆಸೇಜ್ ಗಳ ಸಾಚಾತನ ಪರಿಶೀಲನೆ ಮಾಡದೆ ಹಾಗೇ ಇನ್ನೊಬ್ಬರಿಗೆ, ಇನ್ನೊಂದು ಗ್ರೂಪ್ ಗೆ ಫಾರ್ವರ್ಡ್ ಮಾಡಿದರೋ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಬೀಳ್ತೀರಿ, ಎಚ್ಚರ!

ಮಧ್ಯಪ್ರದೇಶದ, ರಾಜ್ ಘಡದ ಇಪ್ಪತ್ತೊಂದು ವರ್ಷ ವಯಸ್ಸಿನ ಜುನೈದ್ ಖಾನ್ ಗೆ ಇದೀಗ ಅಂಥದೇ ಅನುಭವ ಆಗಿದೆ. ಈತ ವಾಟ್ಸ್ ಆಪ್ ಗ್ರೂಪ್ ವೊಂದರ ಸದಸ್ಯನಾಗಿದ್ದ. ಅದಕ್ಕೆ ಬಂದಿದ್ದ ಆಕ್ಷೇಪಾರ್ಹ ಸಂದೇಶವೊಂದಕ್ಕೆ ಹೊಣೆಗಾರನನ್ನಾಗಿ ಮಾಡಿದ ಪೊಲೀಸರು, ಈತನನ್ನು ಬಂಧಿಸಿ, ಜೈಲಿಗೆ ಕಳಿಸಿ ಐದು ತಿಂಗಳೇ ಕಳೆದಿದೆ.

Whatsapp

IT ಕಾಯ್ದೆ ಮತ್ತು ಐಪಿಸಿ 124A (ದೇಶದ್ರೋಹ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಸಲಿಗೆ ಆಗಿದ್ದೇನೆಂದರೆ ಫೆಬ್ರವರಿ 14ರಂದು ವಾಟ್ಸ್ ಆಪ್ ಗ್ರೂಪ್ ನ ಸದಸ್ಯ ಇರ್ಫಾನ್ ದೇಶದ್ರೋಹ, ಆಕ್ಷೇಪಾರ್ಹ ಸಂದೇಶ ರವಾನಿಸಿದ್ದ. ಆ ಬಗ್ಗೆ ಇತರರು ಇರ್ಫಾನ್ ಮತ್ತು ಗ್ರೂಪ್ ನ ಅಡ್ಮಿನ್ ವಿರುದ್ಧ ದೂರು ದಾಖಲಿಸಿದ್ದರು.

ಇನ್ನು ಮುಂದೆ ವಾಟ್ಸಾಪ್ ಸಂದೇಶ ಮನಬಂದಂತೆ ಫಾರ್ವರ್ಡ್ ಮಾಡುವಂತಿಲ್ಲಇನ್ನು ಮುಂದೆ ವಾಟ್ಸಾಪ್ ಸಂದೇಶ ಮನಬಂದಂತೆ ಫಾರ್ವರ್ಡ್ ಮಾಡುವಂತಿಲ್ಲ

ಈ ವಿಚಾರ ಗೊತ್ತಾದ ಮೇಲೆ ಗ್ರೂಪ್ ನ ಅಡ್ಮಿನ್ ಗಳ ಪೈಕಿ ಒಬ್ಬೊಬ್ಬರಾಗಿ ಕಳಚಿಕೊಂಡಿದ್ದಾರೆ. ಕಡೆಗೆ ಸೀನಿಯಾರಿಟಿ ಮೇಲೆ ಅಡ್ಮಿನ್ ಆಗಿ ಉಳಿದುಕೊಂಡವನು ಜುನೈದ್. ಪೊಲೀಸರು ಆತನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಅಂದಹಾಗೆ ಇರ್ಫಾನ್ ಗೆ ಹದಿನೇಳು ವರ್ಷ. ಆತನನ್ನು ರಿಮ್ಯಾಂಡ್ ಹೋಮ್ ನಲ್ಲಿ ಇಡಲಾಗಿದೆ.

ದೇಶದ್ರೋಹದಂಥ ಗಂಭೀರ ಆರೋಪ ಹೊತ್ತಿರುವ ಜುನೈದ್ ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಎರಡನೇ ವರ್ಷದ ಬಿ.ಎಸ್ ಸಿ., ವಿದ್ಯಾರ್ಥಿಯಾಗಿದ್ದ ಆತ ಪರೀಕ್ಷೆಯನ್ನು ಕೂಡ ಬರೆಯಲಾಗಿಲ್ಲ.

English summary
Are you one of those who forward lots of messages or are a group admin on Whatsapp? Forwarding messages without verifying, or circulating hate messages in your group can land you in big trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X