ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ನಲ್ಲಿ 7000 ಇದ್ದ ಉದ್ಯೋಗಿಗಳ ಸಂಖ್ಯೆ 2750ಕ್ಕೆ ಇಳಿದಿದ್ದು ಏಕೆ?

|
Google Oneindia Kannada News

ನವದೆಹಲಿ, ನವೆಂಬರ್ 22: ಟ್ವಿಟ್ಟರ್‌ನ ಸೋಷಿಯಲ್ ನೆಟ್ ವರ್ಕಿಂಗ್ ವ್ಯಾಪಾರ ಮತ್ತು ಮಾರಾಟ ವಿಭಾಗದಲ್ಲಿನ ಮತ್ತಷ್ಟು ಉದ್ಯೋಗಿಗಳನ್ನು ಎಲೋನ್ ಮಸ್ಕ್ ವಜಾಗೊಳಿಸಿದ್ದಾರೆ. ಆ ಮೂಲಕ ಉದ್ಯೋಗ ಕಡಿತ ಹಾಗೂ ರಾಜೀನಾಮೆಯಿಂದ ಸೊರಗಿದ ಟ್ವಿಟ್ಟರ್ ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ.

ಕಳೆದ ವಾರ, ಉದ್ಯೋಗಿಗಳು ತಮ್ಮ 'ಹಾರ್ಡ್‌ಕೋರ್' ಆವೃತ್ತಿಗೆ ಬದ್ಧರಾಗಬೇಕು, ಇಲ್ಲವೇ ನೌಕರಿಯನ್ನು ತೊರೆಯಬೇಕು ಎಂದು ಕೇಳಿಕೊಂಡಿದ್ದರು. ಇದಾದ ಬಳಿಕ ತಾಂತ್ರಿಕ ವಿಭಾಗಕ್ಕಿಂತ ವ್ಯಾಪಾರ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಕಂಪನಿ ತೊರೆಯುವುದಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

1200 ಉದ್ಯೋಗಿಗಳ ರಾಜೀನಾಮೆ ಬೆನ್ನಲ್ಲೇ ಮಸ್ಕ್ ಸಂದೇಶ1200 ಉದ್ಯೋಗಿಗಳ ರಾಜೀನಾಮೆ ಬೆನ್ನಲ್ಲೇ ಮಸ್ಕ್ ಸಂದೇಶ

ಅದರಲ್ಲೂ ಉಳಿದಿರುವ ಉದ್ಯೋಗಿಗಳನ್ನು ವಜಾಗೊಳಿಸುವ ನಿಟ್ಟಿನಲ್ಲಿ ಮಸ್ಕ್ ಉದ್ಯೋಗ ಕಡಿತ ನೀತಿಯನ್ನು ಪಾಲಿಸುವುದಕ್ಕೆ ಮುಂದಾಗಿದ್ದಾರೆ. ಕಳೆದ ಭಾನುವಾರದಿಂದಲೇ ಕೆಲವರು ನೋಟಿಸ್ ಸ್ವೀಕರಿಸುವುದಕ್ಕೆ ಶುರು ಮಾಡಿದ್ದಾರೆ. ಅದಾಗ್ಯೂ, ಪ್ರಸ್ತುತ ಸುತ್ತಿನಲ್ಲಿ ಈ ಉದ್ಯೋಗ ಕಡಿತವು ಎಷ್ಟು ಮಂದಿಯ ಮೇಲೆ ಪ್ರಭಾವ ಬೀರುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಟ್ವಿಟರ್ ಅನ್ನು ಮಸ್ಕ್ ಸ್ವಾಧೀನಪಡಿಸಿಕೊಳ್ಳುವುದಕ್ಕೂ ಪೂರ್ವದಲ್ಲಿ 7000ಕ್ಕೂ ಹೆಚ್ಚು ಉದ್ಯೋಗಿಗಳಿದ್ದರು. ಆದರೆ ಈಗ ಆ ಸಂಖ್ಯೆಯು ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಉದ್ಯೋಗ ಕಡಿತದ ಹೆಸರಿನಲ್ಲಿ ನೌಕರರನ್ನು ಮನೆಗೆ ಕಳುಹಿಸಲಾಗುತ್ತಿದೆ. ಈ ಬೆಳವಣಿಗೆಯ ಕುರಿತು ಉದ್ಯೋಗಿಗಳು ಏನು ಹೇಳುತ್ತಾರೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಅದೊಂದು ಸಭೆಯಲ್ಲಿ ಸಿಕ್ಕಿತ್ತು ಉದ್ಯೋಗ ಕಡಿತದ ಸುಳಿವು

ಅದೊಂದು ಸಭೆಯಲ್ಲಿ ಸಿಕ್ಕಿತ್ತು ಉದ್ಯೋಗ ಕಡಿತದ ಸುಳಿವು

ಕಳೆದ ಭಾನುವಾರ ಎಲೋನ್ ಮಸ್ಕ್ ಹಾಗೂ ಮಾರಾಟ ವಿಭಾಗದ ನೂತನ ಮುಖ್ಯಸ್ಥ ಕ್ರಿಸ್ ರೈಡಿ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿತ್ತು. ಮಾರಾಟ ವಿಭಾಗದ ಬಹುತೇಕ ಎಲ್ಲಾ ಉದ್ಯೋಗಿಗಳು ಆ ಸಭೆಯಲ್ಲಿ ಹಾಜರಾಗಿದ್ದರು. ಅದೇ ಸಭೆಯಲ್ಲಿ ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಹಲವು ಪ್ರಕಟಣೆಯು ಹೊರ ಬೀಳಬಹುದು ಎಂಬುದು ಉದ್ಯೋಗಿಗಳ ನಿರೀಕ್ಷೆ ಆಗಿತ್ತು ಎಂದು ಇಬ್ಬರು ಉದ್ಯೋಗಿಗಳು ಹೇಳಿದ್ದಾರೆ ಎಂಬುದಾಗಿ ಬ್ಲೂಮ್‌ಬರ್ಗ್ ಶನಿವಾರವೇ ವರದಿ ಮಾಡಿತ್ತು.

ಉದ್ಯೋಗ ಕಡಿತದ ಬಗ್ಗೆ ಮಾತಾಡಲಿಲ್ಲ ಮಸ್ಕ್!

ಉದ್ಯೋಗ ಕಡಿತದ ಬಗ್ಗೆ ಮಾತಾಡಲಿಲ್ಲ ಮಸ್ಕ್!

ಭಾನುವಾರ ನಡೆದ ವ್ಯಾಪಾರ ವಿಭಾಗದ ಸಭೆಯಲ್ಲಿ ಎಲೋನ್ ಮಸ್ಕ್ ಇನ್ನೊಂದು ಸುತ್ತಿನ ಉದ್ಯೋಗ ಕಡಿತದ ಬಗ್ಗೆ ಮಾತನಾಡುತ್ತಾರೆ ಎಂತಲೇ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಎಲೋನ್ ಮಸ್ಕ್ ಆ ಸಮಯವನ್ನು ಬೇರೆಯದಕ್ಕಾಗಿ ಬಳಸಿಕೊಂಡರು. ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆಯನ್ನು ಮರುಸ್ಥಾಪಿಸುವ ನಿರ್ಧಾರವನ್ನು ಒಳಗೊಂಡಂತೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಸ್ಕ್ ಮಾತನಾಡಿದರು. ಇದರ ಜೊತೆಗೆ ಕಂಪನಿಯು ನಿರ್ದಿಷ್ಟ ಬಳಕೆದಾರರಿಗೆ ಹೆಚ್ಚು ಗುರಿಯಾಗಿ ಜಾಹೀರಾತುಗಳನ್ನು ಮಾಡಬೇಕಾಗಿದೆ ಎಂದು ವಿವರಿಸಿದರು. ಇದರ ಹೊರತಾಗಿ ಸಭೆಯಲ್ಲಿ ಉದ್ಯೋಗಿಗಳ ವಜಾಗೊಳಿಸುವ ಬಗ್ಗೆ ಎಲೋನ್ ಮಸ್ಕ್ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ.

ಈ ಕಂಪನಿಯಲ್ಲಿ ನಿಮ್ಮ ಕೆಲಸವನ್ನು ಇವತ್ತೇ ಕೊನೆಗೊಳಿಸಿ

ಈ ಕಂಪನಿಯಲ್ಲಿ ನಿಮ್ಮ ಕೆಲಸವನ್ನು ಇವತ್ತೇ ಕೊನೆಗೊಳಿಸಿ

ಟ್ವಿಟ್ಟರ್ ಕಂಪನಿಯು ವಜಾಗೊಳಿಸಿದ ಉದ್ಯೋಗಿಗಳಿಗೆ ಈ-ಮೇಲ್ ಸಂದೇಶದ ಮೂಲಕ ಸೂಚನೆ ನೀಡಿದೆ. "ಟ್ವಿಟರ್‌ನಲ್ಲಿ ನಿಮ್ಮ ಪಾತ್ರ," ಎಂಬ ತೆಲೆಬರಹದ ಅಡಿಯಲ್ಲಿ ಮೇಲ್ ಅನ್ನು ಮಾಡಲಾಗಿದೆ. ಈ ಸಂದೇಶದಲ್ಲಿ ನಮ್ಮ ಕಾರ್ಯಪಡೆಯ ಹೆಚ್ಚಿನ ಪರಿಶೀಲನೆಯ ನಂತರ, ನಮ್ಮ ಸಾಂಸ್ಥಿಕ ರಚನೆಯಲ್ಲಿ ಇನ್ನು ಮುಂದೆ ಅಗತ್ಯವಿಲ್ಲದ ಉದ್ಯೋಗಿಗಳನ್ನು ನಾವು ಗುರುತಿಸಿದ್ದೇವೆ," ಎಂದು ಉಲ್ಲೇಖಿಸಿದೆ. ಇದಿಷ್ಟೇ ಅಲ್ಲದೇ "ಇಂದು ಈ ಕಂಪನಿಯಲ್ಲಿ ನಿಮ್ಮದು ಕೊನೆಯ ಕೆಲಸದ ದಿನ," ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಕಂಪನಿಗೆ ಸಂಬಂಧಿಸಿದ ವಸ್ತುಗಳನ್ನು ವಾಪಸ್ ನೀಡುವುದಕ್ಕೆ ಸಂಬಂಧಿಸಿದಂತೆ ನಂತರದಲ್ಲಿ ತಿಳಿಸಲಾಗುವುದು ಎಂದು ಸಂದೇಶದಲ್ಲಿ ಬರೆಯಲಾಗಿದ್ದು, ಕೊನೆಯಲ್ಲಿ ಟ್ವಿಟ್ಟರ್ ಎಂದು ಸಹಿ ಮಾಡಲಾಗಿದೆ.

7000 ಇದ್ದ ಉದ್ಯೋಗಿಗಳ ಸಂಖ್ಯೆ ಮಸ್ಕ್ ಬಂದ ಮೇಲೆ ಎಷ್ಟಾಯಿತು?

7000 ಇದ್ದ ಉದ್ಯೋಗಿಗಳ ಸಂಖ್ಯೆ ಮಸ್ಕ್ ಬಂದ ಮೇಲೆ ಎಷ್ಟಾಯಿತು?

ಜಾಗತಿಕ ಸೋಷಿಯಲ್ ಮೀಡಿಯಾ ಕಂಪನಿ ಆಗಿರುವ ಟ್ವಿಟ್ಟರ್ ಸಂಸ್ಥೆಯಲ್ಲಿ ಎಲೋನ್ ಮಸ್ಕ್ ಬರುವುದಕ್ಕೂ ಪೂರ್ವದಲ್ಲಿ ಪರಿಸ್ಥಿತಿ ಹೀಗೆ ಇರಲಿಲ್ಲ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಇದೇ ಟ್ವಿಟ್ಟರ್ ಕಂಪನಿಯಲ್ಲಿ 7000ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದರು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಟ್ವಿಟ್ಟರ್ ಅನ್ನು ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಂಡ ನಂತರದಲ್ಲಿ ಹಂತ-ಹಂತವಾಗಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಕಂಪನಿಯಲ್ಲಿನ ಬೆಳವಣಿಗೆಗಳಿಂದ ರೋಸಿ ಹೋಗಿರುವ ಅದೆಷ್ಟೋ ಉದ್ಯೋಗಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರ ನಡೆದಿದ್ದೂ ಆಗಿದೆ. ಈಗ ಉದ್ಯೋಗಿಗಳ ಸಂಖ್ಯೆಯು 7000 ದಿಂದ 2750ಕ್ಕೆ ಇಳಿಕೆಯಾಗಿದೆ ಎಂದು ಕಂಪನಿಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

English summary
Before Elon Musk Twitter company Had more than 7,000 Workers, But Now?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X