ಅಯೋಧ್ಯೆಯ ಸರಯೂ ನದಿ ದಂಡೆ ಮೇಲೆ ಮನಸೆಳೆವ ದೀಪಾವಳಿ ಚಿತ್ರ

Posted By:
Subscribe to Oneindia Kannada

ಅಯೋಧ್ಯಾ, ಅಕ್ಟೋಬರ್ 19: ರಾಮ ಜನ್ಮಭೂಮಿ ಅಯೋಧ್ಯೆಗೆ ಈಗ ಹಬ್ಬದ ಕಳೆ. ತ್ರೇತಾಯುಗದ ದೀಪಾವಳಿಯೇ ಅಯೋಧ್ಯೆಗೆ ಅವತರಿಸಿದೆಯಾ ಎಂಬ ಅನುಮಾನವೊಮ್ಮೆ ಕಾಡಿದರೂ ಅಚ್ಚರಿಯಿಲ್ಲ! ಹಾಗಿದೆ ಅಯೋಧ್ಯೆಯ ಸೊಬಗು, ಸಂಭ್ರಮ!

ಲಂಕಾಧಿಪತಿ ರಾವಣನನ್ನು ಸೋಲಿಸಿ ಸೀತಾ ಮಾತೆಯನ್ನು ಅವನ ಸೆರೆಯಿಂದ ಬಿಡಿಸಿಕೊಂಡು, 14 ವರ್ಷದ ವನವಾಸವನ್ನು ಮುಗಿಸಿ ಅಯೋಧ್ಯೆಗೆ ರಾಮ ಹಿಂದಿರುಗಿದ ದಿನ ದೀಪಾವಳಿ ಎಂಬುದು ಪುರಾಣಗಳ ಉಲ್ಲೇಖ.

ದೀಪಾವಳಿಗೆ ಟ್ವಿಟ್ಟರ್ ನಲ್ಲಿ ಶುಭ ಕೋರಿದ ಮೋದಿ, ಕೋವಿಂದ್

ಅದಕ್ಕೆಂದೇ ದೀಪಾವಳಿ ಎಂದರೆ ಅಯೋಧ್ಯೆಗೆ ಸ್ವರ್ಗವೇ ಇಳಿಯುತ್ತದೆ. ಅದರಲ್ಲೂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ನಡೆಯುತ್ತಿರುವ ದೀಪಾವಳಿಯಾದ್ದರಿಂದ ಈ ದೀಪಾವಳಿ ಮತ್ತಷ್ಟು ಅದ್ಧೂರಿಯಾಗಿದೆ. ಅಯೋಧ್ಯೆಯನ್ನು ಉತ್ತರ ಪ್ರದೇಶದ ಅತ್ಯಂತ ಪ್ರಮುಖ ಪ್ರವಾಸೀ ತಾಣವನ್ನಾಗಿ ಬದಲಿಸಬೇಕೆಂಬ ಆಸೆಯೂ ಯೋಗಿ ಆದಿತ್ಯನಾಥ್ ಅವರಿಗಿರುವುದರಿಂದ ಈ ಬಾರಿಯ ದೀಪಾವಳಿಗೆ ತ್ರೇತಾಯುಗದ ಸೊಬಗು ಅಯೋಧ್ಯೆಗೆ ಅವತರಿಸಿದೆ.

ರಾಮಮಂದಿರ ನಿರ್ಮಾಣದ ಕುರಿತೂ ಸದ್ಯಕ್ಕೆ ಸುದ್ದಿಯಾಗುತ್ತಿರುವುದರಿಂದ ಅಯೋಧ್ಯೆಯ ದೀಪಾವಳಿ ಮತ್ತಷ್ಟು ಮಹತ್ವದ್ದೆನ್ನಿಸಿದೆ.

ಅಯೋಧ್ಯೆಯಲ್ಲಿ ನಡೆದ ದೀಪಾವಳಿಯ ಮನಸೆಳೆಯುವ ಚಿತ್ರಗಳೀಗ ಸಾಮಾಝಿಕ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ.

ಸರಯೂ ನದಿ ದಂಡೆ ಮೇಲೆ ಸಾಲು ದೀಪ

ಸರಯೂ ನದಿ ದಂಡೆ ಮೇಲೆ ಸಾಲು ದೀಪ

ಲಕ್ಷಾಂತರ ಭಕ್ತರು ಇಶಶ್ಟ ದೇವ ರಾಮನನ್ನು ಭಜಿಸುತ್ತ, ಪುರಾಣ ಪ್ರಸಿದ್ಧ ಸರಯೂ ನದಿಯ ತಟದ ಮೇಲೆ ಸಾಲುದಿಪಗಳನ್ನು ಹಚ್ಚಿ ದೀಪಾವಳಿ ಆಚರಿಸದರು. ಸಾಲು ದೀಪದ ಬೆಳಕಿನಲ್ಲಿ ಅಯೋಧ್ಯೆಗೆ ತ್ರೆತಾಯುಗವೇ ಇಳಿದುಬಂದಂತನ್ನಿಸುತ್ತಿತ್ತು.

ಸರಯೂ ನದಿಯಲ್ಲಿ ಅಯೋಧ್ಯೆಯ ಪ್ರತಿಬಿಂಬ

ಸರಯೂ ನದಿಯಲ್ಲಿ ಅಯೋಧ್ಯೆಯ ಪ್ರತಿಬಿಂಬ

ದೀಪಾಲಂಕೃತ ಅಯೋಧ್ಯೆ ಸರಯೂ ನದಿಯಲ್ಲಿ ಪ್ರತಿಬಿಂಬವಾಗಿ ಕಂಡು, ಆ ಮನಮೋಹಕ ಸೌಂದರ್ಯಕ್ಕೆ ಮತ್ತಷ್ಟು ಸೊಬಗು ನೀಡಿದ್ದು ಹೀಗೆ.

ಅಯೋಧ್ಯೆ ತುಂಬ ರಂಗಿನ ರಂಗವಲ್ಲ!

ಅಯೋಧ್ಯೆ ತುಂಬ ರಂಗಿನ ರಂಗವಲ್ಲ!

ಅಯೋಧ್ಯೆಯ ತುಂಬ ಹಚ್ಚಿದ್ದ ಹಣತೆಗಳು ಪುರಾಣ ಪ್ರಸಿದ್ಧ ರಾಮಜನ್ಮಭೂಮಿಯ ತುಂಬ ರಂಗಿನ ರಂಗವಲ್ಲಿ ಬಿಡಿಸಿದ್ದವು. ಆ ರಂಗಲ್ಲಿ ಅಯೋಧ್ಯೆ ರಮಣೀಯತೆ ಕಂಡಿದ್ದು ಹೀಗೆ!

ಅಯೋಧ್ಯೆ ಚಿತ್ರಗಳು

ಅಯೋಧ್ಯೆಯ ದೀಪಾವಳಿಯ ಕೆಲವು ಸುಂದರ ಚಿತ್ರಗಳನ್ನು ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಅಯೋಧ್ಯೆಯ ದೀಪಾವಳಿ

ಪಾರಂಪರಿಕ ತಾಣ ಅಯೋಧ್ಯೆ ಎರಡು ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಯ ಬೆಳಕಿನಲ್ಲಿ ಕಂಡಿದ್ದು ಹೀಗೆ ಎಂದು ಅಯೋಧ್ಯೆಯ ವಿಡಿಯೋವೊಂದನ್ನು ಶ್ರೀರಾಮ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಸುವರ್ಣಯುಗ ಮರುಕಳಿಸಿದೆ...

ಕೊನೆಗೂ ಅಯೋಧ್ಯೆಯ ಸುವರ್ಣಯುಗ ಮರುಕಳಿಸಿದೆ. ಅಯೋಧ್ಯೆ ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗುವ ದಿನವೂ ದೂರವಿಲ್ಲ ಎಂದು ರೌಶಾನ್ ರಾಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Banks of river Saryu lit up with lights & earthen lamps as part of Deepavali celebrations. This is the first Deepavali for Yogi Adithyanath after he became chief minister of Uttar Pradesh. Here are the few pictures of Ayodhya Deepavali.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ