ಡಿಜಿಟಲ್ ವ್ಯವಹಾರದ ಎಫೆಕ್ಟ್, ಎಟಿಎಂ ಕೇಂದ್ರಗಳಿಗೆ ಬಾಗಿಲು

Posted By:
Subscribe to Oneindia Kannada

ದೇಶದಲ್ಲಿ ಎಟಿಎಂ ಕೇಂದ್ರಗಳನ್ನು ಇದೇ ಮೊದಲ ಬಾರಿಗೆ ಕಡಿಮೆ ಮಾಡಲಾಗಿದೆ. ಒಂದು ಕಡೆ ಡಿಜಿಟಲ್ ವ್ಯವಹಾರದ ಪ್ರಮಾಣ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ವಿವಿಧ ಬ್ಯಾಂಕ್ ಗಳು ಎಟಿಎಂ ಕೇಂದ್ರಗಳಿಗಾಗಿ ಆಗುವ ಖರ್ಚನ್ನು ಗಮನದಲ್ಲಿಟ್ಟುಕೊಂಡು ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ.

ಬಳ್ಳಾರಿ : ಎಟಿಎಂನಲ್ಲಿ 500 ರೂ. ನೋಟಿನ ಬದಲು ಕಾಗದ ಬಂತು!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜತೆಗೆ ಸಹವರ್ತಿ ಬ್ಯಾಂಕ್ ಗಳು ವಿಲೀನವಾದ ನಂತರ ಕೆಲವು ಕಡೆ ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿದೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ ಇಡೀ ದೇಶದಲ್ಲಿ ಕಳೆದ ಜೂನ್ ನಿಂದ ಆಗಸ್ಟ್ ಮಧ್ಯೆ 358 ಎಟಿಎಂ ಕೇಂದ್ರಗಳ ಬಾಗಿಲು ಹಾಕಲಾಗಿದೆ.

Banks shutter ATMs as cities go digital

ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಹೆಚ್ಚುತ್ತಲೇ ಇದ್ದ ಎಟಿಎಂ ಕೇಂದ್ರಗಳ ಸಂಖ್ಯೆ ಇದೇ ಮೊದಲ ಬಾರಿಗೆ ಕಡಿಮೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ಎಟಿಎಂ ಕೇಂದ್ರಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ.

ರಕ್ಷಣೆ ಇಲ್ಲದ ಎಟಿಎಂ ಮುಲಾಜಿಲ್ಲದೆ ಮುಚ್ಚಿ ಎಂದ ಹುಬ್ಬಳ್ಳಿ ಪೊಲೀಸರು

ಇನ್ನು ಬ್ಯಾಂಕ್ ಗಳು ನೀಡುವ ಕಾರಣ ಏನೆಂದರೆ, ಏರ್ ಪೋರ್ಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಎಟಿಎಂ ಕೇಂದ್ರ ಇದ್ದರೆ ಅದರ ಬಾಡಿಗೆ, ವಿದ್ಯುತ್ ವೆಚ್ಚ, ರಕ್ಷಣಾ ಸಿಬ್ಬಂದಿ ಮತ್ತಿತರ ವೆಚ್ಚ ಸೇರಿ ದುಬಾರಿಯಾಗುತ್ತದೆ. ಅದರಲ್ಲೂ ಮುಂಬೈನಂಥ ನಗರದಲ್ಲಿ ಬಾಡಿಗೆಯೇ ನಲವತ್ತು ಸಾವಿರದಷ್ಟಾಗುತ್ತದೆ.

ಇನ್ನು ಚೆನ್ನೈ, ಬೆಂಗಳೂರಿನಂಥ ನಗರದಲ್ಲಿ ಬಾಡಿಗೆ ಎಂಟರಿಂದ ಹದಿನೈದು ಸಾವಿರ ಇದೆ. ಒಟ್ಟಾರೆ ಒಂದು ಎಟಿಎಂ ಕೇಂದ್ರದ ಮಾಸಿಕ ಖರ್ಚು ಮೂವತ್ತು ಸಾವಿರದಿಂದ ಒಂದು ಲಕ್ಷ ರುಪಾಯಿ ಬರುತ್ತದೆ. ಅದರಲ್ಲೂ ಹದಿನೈದರಿಂದ ಹದಿನೆಂಟು ಡಿಗ್ರಿ ತಾಪಮಾನ ಕಾಯ್ದುಕೊಳ್ಳಲು ಏಸಿ ಬಳಸಲಾಗುತ್ತದೆ. ಅದರಿಂದ ವಿದ್ಯುತ್ ಬಿಲ್ ವಿಪರೀತವಾಗುತ್ತದೆ ಎಂದು ಬ್ಯಾಂಕ್ ನವರು ಹೇಳುತ್ತಾರೆ.

ನಗರ ಪ್ರದೇಶಗಳಲ್ಲಿ ಈಗಾಗಲೇ ಡಿಜಿಟಲ್ ವ್ಯವಹಾರ ತುಂಬ ಹೆಚ್ಚಿನ ಮಟ್ಟದಲ್ಲಿ ಆಗುತ್ತಿದೆ. ಆದ್ದರಿಂದ ಎಟಿಎಂನ ಉಪಯೋಗ ಅಷ್ಟಾಗಿ ಇರುವುದಿಲ್ಲ. ಇವುಗಳನ್ನು ಗ್ರಾಮೀಣ ಭಾಗದತ್ತ ತಿರುಗಿಸುವುದು ಇಂದಿನ ಅಗತ್ಯ. ಅಲ್ಲಿನ್ನೂ ಡಿಜಿಟಲ್ ವ್ಯವಹಾರ ದೊಡ್ಡ ಮಟ್ಟದಲ್ಲಿ ಆರಂಭವಾಗಿಲ್ಲ ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here's one more proof of Indians going off cash. Between June and August this year, the total number of ATMs in the country decreased by 358.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ