₹12,000 ಸಾಲ ಕೊಡಿಸುವ ನೆಪದಲ್ಲಿ ₹39,000 ಮೌಲ್ಯದ ಕೋಳಿ ಮಾಂಸ ತಿಂದು ತೇಗಿದ ಬ್ಯಾಂಕ್ ಮ್ಯಾನೇಜರ್; ಮುಂದೇನಾಯ್ತು?
ಛತ್ತೀಸ್‌ಗಢ, ಡಿಸೆಂಬರ್, 11: ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಅಧಿಕಾರಿಗಳೇ ಜನರ ಬಳಿ ಇಲ್ಲಸಲ್ಲದ ಭರವಸೆಗಳನ್ನು ನೀಡಿ ಹಣ ಪೀಕಿರುವ ಘಟನೆಗಳು ನಡೆದಿವೆ. ಆದರೆ ಇದೀಗ ವಿಚಿತ್ರ ಎಂಬಂತೆ ಬ್ಯಾಂಕ್ ಮ್ಯಾನೇಜರ್ ಸಾಲ ಕೊಡಿಸುವುದಾಗಿ ದೊಡ್ಡ ವಂಚನೆ ಮಾಡಿರುವ ಘಟನೆಯೊಂದು ಬೆಳಕಿದೆ ಬಂದಿದೆ.
ಕೆಲವೊಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಬಿಡುತ್ತವೆ. ಹಾಗೆಯೇ ಬ್ಯಾಂಕ್ ಮ್ಯಾನೇಜರ್‌ವೊಬ್ಬ ಸಾಲ ಕೊಡಿಸುವುಸಾಗಿ ನಂಬಿಸಿ ಸುಮಾರು 39,000 ರೂಪಾಯಿ ಮೌಲ್ಯದ ಕೋಳಿ ಮಾಂಸ ಹೊಟ್ಟಿಗಿಳಿಸಿ ಮೋಸ ಮಾಡಿದ ಘಟನೆ ನಡೆದಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಈ ಘಟನೆ ವಿವರವನ್ನು ಇಲ್ಲಿ ತಿಳಿಯಿರಿ.
ಕೋಳಿ ಫಾರಂ ತೆರೆಯಲು ಏನುಲ್ಲ ಅಂದರೂ 12,00,000 ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಬ್ಯಾಂಕ್ ಮ್ಯಾನೇಜರ್ ಮೋಸ ಮಾಡಿರುವ ಘಟನೆ ಛತ್ತೀಸ್‌ಗಢ ರಾಜ್ಯದ ಬಿಲಾಸ್‌ಪುರ ಜಿಲ್ಲೆಯ ಮಸ್ತೂರಿ ಪಟ್ಟಣದಲ್ಲಿ ನಡೆದಿದೆ. ಸಾಲ ಕೊಡಿಸುವ ಭರವಸೆ ನೀಡಿದ್ದ ಮ್ಯಾನೇಜರ್‌ಗೆರೆ ಪ್ರತಿದಿನ ಕೋಳಿ ಮಾಂಸ ತಂದುಕೊಡುತ್ತಿದ್ದ ರೈತನಿಗೆ ಇದೀಗ ಮೋಸದ ಬಗ್ಗೆ ತಿಳಿದಿದ್ದು, ಮ್ಯಾನೇಜರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮಸ್ತೂರಿ ಪಟ್ಟಣದ ರೈತ ರೂಪಚಂದ್ ಮನ್ಹರ್ ಎಂಬಾತ ಕೋಳಿ ಫಾರಂ ಹೊಂದಿದ್ದಾನೆ. ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಣೆ ಮಾಡಸಲು ಬಯಸಿದ ರೈತ ಸ್ಥಳೀಯ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರನ್ನು ಸಂಪರ್ಕಿಸಿ 12 ಲಕ್ಷ ರೂಪಾಯಿ ಸಾಲ ಕೇಳಿದ್ದಾನೆ. ಆಗ ಸಾಲ ನೀಡುವುದಾಗಿ ಭರವಸೆ ನೀಡಿದ್ದ ಮ್ಯಾನೇಜರ್ ಪ್ರತೀ ದಿನ ಬ್ಯಾಂಕ್ಗೆ ಕೋಳಿ ಮಾಂಸ ತಂದುಕೊಡುವಂತೆ ಹೇಳಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನು ರೈತ ಸಾಲ ಸಿಗುತ್ತದೆಂಬ ನಿರೀಕ್ಷೆಯಲ್ಲಿ ಪ್ರತಿದಿನ ಬ್ಯಾಂಕ್ ಮ್ಯಾನೇಜರ್ಗೆ ಕೋಳಿ ಮಾಂಸ ತಂದುಕೊಡುತ್ತಿದ್ದ. ಜೊತೆಗೆ ರೈತ ಸಾಲಕ್ಕೆ 10% ಕಮಿಷನ್ ಕೂಡ ನೀಡಿದ್ದರು. ಈ ರೈತ ಸಾಲ ಪಡೆಯಲು ಪ್ರತಿ ಶನಿವಾರ ಬೇರೆ ಕಡೆಯಿಂದ ಕೋಳಿ ಖರೀದಿಸುತ್ತಿದ್ದರು. ಹೀಗೆ ಮ್ಯಾನೇಜರ್ 39,000 ರೂಪಾಯಿ ಮೌಲ್ಯದ ಕೋಳಿ ಮಾಂಸ ತಿಂದ ಘಟನೆ ನಡೆದಿದೆ.
ಕೊನೆಗೂ ಬ್ಯಾಂಕ್ ಮ್ಯಾನೇಜರ್ ಸಾಲ ಕೊಡದೆ, ಮೋಸ ಮಾಡಿರುವುದನ್ನ ತಿಳಿಸದ ರೈತ ಪೊಲೀಸರಿಗೆ ದೂರು ನೀಡಿದ್ದಾನೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಸ್‌ಬಿಐ ಶಾಖೆ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.












Click it and Unblock the Notifications