ಸೆಪ್ಟೆಂಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳ ಬ್ಯಾಂಕು ರಜೆ ದಿನ ಪಟ್ಟಿ
ನವದೆಹಲಿ, ಆಗಸ್ಟ್ 26: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಸೆಪ್ಟೆಂಬರ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಆಗಸ್ಟ್ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ, ಲಾಕ್ ಡೌನ್ ಮುಗಿದಿದ್ದು, ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಕೆಲವೆಡೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾತ್ರ ಜುಲೈ ತಿಂಗಳಂತೆ ಆಗಸ್ಟ್ ತಿಂಗಳಲ್ಲೂ ಕಡಿಮೆ ರಜೆ ದಿನಗಳಿತ್ತು. ಆದರೆ, ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬದ ದೆಸೆಯಿಂದ ಹೆಚ್ಚಿನ ರಜೆ ನಿರೀಕ್ಷಿಸಲಾಗಿದೆ.
ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ.
ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಗಮನಿಸಿ: ಕರ್ನಾಟಕದಲ್ಲಿ ಗಣೇಶ ಚತುರ್ಥಿಗೆ ಒಂದು ದಿನ ಮಾತ್ರ ರಜೆ ಲಭ್ಯವಾಗಲಿದೆ. ಮಿಕ್ಕಂತೆ ವಿವಿಧ ರಾಜ್ಯಗಳ ರಜಾ ದಿನಗಳ ಬಗ್ಗೆ ವಿವರ ಮುಂದಿದೆ..
ಸೆಪ್ಟೆಂಬರ್ 2021ರಲ್ಲಿ ಬ್ಯಾಂಕ್ ರಜಾ ದಿನ
| ಸೆಪ್ಟೆಂಬರ್ 2021ರಲ್ಲಿ ಬ್ಯಾಂಕ್ ರಜಾ ದಿನ | |||
|---|---|---|---|
| ದಿನ | ದಿನಾಂಕ | ರಜಾ ದಿನ | ನಗರ |
| ಸೆಪ್ಟೆಂಬರ್ 5, 2021 | ಭಾನುವಾರ | ವಾರದ ರಜೆ | ದೇಶದೆಲ್ಲೆಡೆ |
| ಸೆಪ್ಟೆಂಬರ್ 8 | ಬುಧವಾರ | ಶಂಕರದೇವ ತಿಥಿ | ಗುವಾಹಟಿ |
| ಸೆಪ್ಟೆಂಬರ್ 9 | ಗುರುವಾರ | ತೀಜ್ (ಹರಿತಾಲಿಕಾ) | ಗ್ಯಾಂಗ್ ಟಕ್ |
| ಸೆಪ್ಟೆಂಬರ್ 10 | ಶುಕ್ರವಾರ | ಗಣೇಶ ಚತುರ್ಥಿ | ಬೆಂಗಳೂರು, ಅಹಮದಾಬಾದ್, ಬೇಲಾಪುರ್, ಭುವನೇಶ್ವರ್, ಚೆನ್ನೈ, ಹೈದರಾಬಾದ್, ಮುಂಬೈ, ಪಣಜಿ |
| ಸೆಪ್ಟೆಂಬರ್ 11 | ಶನಿವಾರ | 2ನೇ ಶನಿವಾರ/ ಗಣೇಶ ಪಂಚಮಿ | ಪಣಜಿ |
| ಸೆಪ್ಟೆಂಬರ್ 12 | ಭಾನುವಾರ | ವಾರದ ರಜೆ | ದೇಶದೆಲ್ಲೆಡೆ |
| ಸೆಪ್ಟೆಂಬರ್ 17 | ಶುಕ್ರವಾರ | ಕರ್ಮ ಪೂಜಾ | ರಾಂಚಿ |
| ಸೆಪ್ಟೆಂಬರ್ 19 | ಭಾನುವಾರ | ವಾರದ ರಜೆ | ದೇಶದೆಲ್ಲೆಡೆ |
| ಸೆಪ್ಟೆಂಬರ್ 20 | ಸೋಮವಾರ | ಇಂದ್ರಜಾತ್ರಾ | ಗ್ಯಾಂಗ್ ಟಕ್ |
| ಸೆಪ್ಟೆಂಬರ್ 21 | ಮಂಗಳವಾರ | ಶ್ರೀನಾರಾಯಣ ಗುರು ಸಮಾಧಿ ದಿನ | ಕೊಚ್ಚಿ, ತಿರುವನಂತಪುರಂ |
| ಸೆಪ್ಟೆಂಬರ್ 25 | ಶನಿವಾರ | 4ನೇ ಶನಿವಾರ | ಭಾರತದೆಲ್ಲೆಡೆ |
| ಸೆಪ್ಟೆಂಬರ್ 26 | ಭಾನುವಾರ | ವಾರದ ರಜೆ | ದೇಶದೆಲ್ಲೆಡೆ |
ಇದಲ್ಲದೆ, ಸೆಪ್ಟೆಂಬರ್ 9ರಂದು ಗೌರಿ ತೃತಿಯಾ ಹಬ್ಬದ ಸಂದರ್ಭದಲ್ಲಿ ನಿರ್ಬಂಧಿತ ರಜೆ, ಸೆಪ್ಟೆಂಬರ್ 19 ರಂದು ಅನಂತ ಚತುರ್ದಶೀ, ನೋಂಪು ದಿನದಂದು ಬ್ಯಾಂಕ್ ಸಿಬ್ಬಂದಿ ರಜೆ ಮೇಲೆ ಹೋಗುವ ಸಂದರ್ಭ ಒದಗಬಹುದು. ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ.
Recommended Video
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications