ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನವರಿ 2021ರಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ನೋಡಿ
ನವದೆಹಲಿ, ಜ. 1: ಹೊಸ ವರ್ಷದ ಆರಂಭದಲ್ಲಿ ಸರ್ಕಾರಿ ರಜಾದಿನಗಳ ಪಟ್ಟಿಗಳ ಜೊತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ.
ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.
2021ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ, ಚೆಕ್ ಮಾಡಿ
ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.
ಕರ್ನಾಟಕ : 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ
ಜನವರಿ 2021ರಲ್ಲಿ ಬ್ಯಾಂಕ್ ರಜಾ ದಿನ | ||
---|---|---|
ದಿನಾಂಕ | ದಿನ | ರಜಾದಿನಗಳು |
01 ಜನವರಿ 2021 | ಶುಕ್ರವಾರ | ಹೊಸ ವರ್ಷ ದಿನ |
ಜನವರಿ 02 | ಶನಿವಾರ | ಹೊಸ ವರ್ಷಾಚರಣೆ |
ಜನವರಿ 03 | ಭಾನುವಾರ | ವಾರದ ರಜೆ |
ಜನವರಿ 09 | ಶನಿವಾರ | ಎರಡನೇ ಶನಿವಾರ |
ಜನವರಿ 10 | ಭಾನುವಾರ | ವಾರದ ರಜೆ |
ಜನವರಿ 12 | ಮಂಗಳವಾರ | ಸ್ವಾಮಿ ವಿವೇಕಾನಂದ ಜನ್ಮದಿನ |
ಜನವರಿ 14 | ಗುರುವಾರ | ಮಕರ ಸಂಕ್ರಾಂತಿ/ಪೊಂಗಲ್/ಮಘೇ ಸಂಕ್ರಾಂತಿ |
ಜನವರಿ 15 | ಶುಕ್ರವಾರ | ತಿರುವಳ್ಳುವರ್ ದಿನ/ಮಾಘ್ ಬಿಹು ಹಾಗೂ ತುಸು ಪೂಜಾ |
ಜನವರಿ 16 | ಶನಿವಾರ | ಉಳವರ್ ತಿರುನಾಳ್ |
ಜನವರಿ 17 | ಭಾನುವಾರ | ವಾರದ ರಜೆ |
ಜನವರಿ 20 | ಬುಧವಾರ | ಗುರು ಗೋವಿಂದ್ ಸಿಂಗ್ ಜೀ ಜನ್ಮದಿನ |
ಜನವರಿ 23 | ಶನಿವಾರ | ನಾಲ್ಕನೇ ಶನಿವಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ |
ಜನವರಿ 24 | ಭಾನುವಾರ | ವಾರದ ರಜೆ |
ಜನವರಿ 25 | ಸೋಮವಾರ | ಐಮೊಯಿನೊ ಇರ್ತಾಪ(ಮಣಿಪುರ) |
ಜನವರಿ 26 | ಮಂಗಳವಾರ | ಗಣತಂತ್ರ ದಿನಾಚರಣೆ |
ಜನವರಿ 31 | ಭಾನುವಾರ | ವಾರದ ರಜೆ |