2020ನೇ ಸಾಲಿನ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು

ನವದೆಹಲಿ, ಜುಲೈ 31: ದೇಶದೆಲ್ಲೆಡೆ ಬ್ಯಾಂಕುಗಳ ಆಗಸ್ಟ್ ತಿಂಗಳ ರಜಾದಿನಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪ್ರಕಟಿಸಿದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜಾದಿನವಿರಲಿದೆ.

ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ.

ಈದ್ ಉಲ್ ಅಧಾ, ರಕ್ಷಾ ಬಂಧನ್, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಕರ್ಮ ಪೂಜಾ, ಓಣಂ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಆರ್ ಬಿಐ ಪ್ರಕಟಿಸಿದೆ.

Bank Holidays In August 2020: Check The Complete List

ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ.

* ಆಗಸ್ಟ್ 1 (ಶನಿವಾರ) : ಈದ್ ಉಲ್ ಅಧಾ (ರಜಾದಿನ)
* ಆಗಸ್ಟ್ 03 (ಸೋಮವಾರ): ರಕ್ಷಾ ಬಂಧನ್-ಅಹಮದಾಬಾದ್, ಡೆಹ್ರಾಡೂನ್, ಜೈಪುರ, ಕಾನ್ಪುರ್, ಲಕ್ನೋ ಮುಂತಾದೆಡೆ ರಜಾದಿನ.
* ಆಗಸ್ಟ್ 11 (ಮಂಗಳವಾರ): ಶ್ರೀಕೃಷ್ಣ ಜನ್ಮಾಷ್ಟಮಿ -ಭುವನೇಶ್ವರ, ಚೆನ್ನೈ, ಹೈದರಾಬಾದ್, ಪಾಟ್ನಾ ಮುಂತಾದೆಡೆ ರಜಾದಿನ
* ಆಗಸ್ಟ್ 12 (ಬುಧವಾರ): ಶ್ರೀಕೃಷ್ಣ ಜನ್ಮಾಷ್ಟಮಿ -ಅಹಮದಾಬಾದ್, ಭೋಪಾಲ್, ಚಂಡೀಗಢಮ, ಜೈಪುರ, ಜಮ್ಮು, ಕಾನ್ಪುರ್, ಲಕ್ನೋ, ರಾಯ್ ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮುಂತಾದೆಡೆ ರಜಾದಿನ.

* ಆಗಸ್ಟ್ 13 (ಗುರುವಾರ): ದೇಶಭಕ್ತರ ದಿನಾಚರಣೆ- ಇಂಫಾಲದಲ್ಲಿ ರಜಾದಿನ.
* ಆಗಸ್ಟ್ 20 (ಸೋಮವಾರ): ಶ್ರೀಮಂತ ಶಂಕರದೇವ ತಿಥಿ-ಗುವಾಹಟಿಯಲ್ಲಿ ರಜಾದಿನ.
* ಆಗಸ್ಟ್ 21 (ಮಂಗಳವಾರ): ತೀಜ್ ಹಬ್ಬದ ಅಂಗವಾಗಿ ಗ್ಯಾಂಗ್ ಟಾಕ್ ನಲ್ಲಿ ರಜಾದಿನ
* ಆಗಸ್ಟ್ 22 (ಬುಧವಾರ): ಗಣೇಶ ಚತುರ್ಥಿ-ಬೆಂಗಳೂರು, ಅಹಮದಾಬಾದ್, ಚೆನ್ನೈ, ಬೇಲಾಪುರ್, ಹೈದರಾಬಾದ್, ಮುಂಬೈ, ನಾಗ್ಪುರ್ ಹಾಗೂ ಪಣಜಿಯಲ್ಲಿ ರಜಾದಿನ.
* ಆಗಸ್ಟ್ 29 (ಶನಿವಾರ): ಕರ್ಮ ಪೂಜಾ, ಅಶುರ-ಜಮ್ಮು, ಶ್ರೀನಗರ, ರಾಂಚಿಯಲ್ಲಿ ರಜಾದಿನ.
* ಆಗಸ್ಟ್ 30 (ಭಾನುವಾರ): ಮೊಹರಂ.
* ಆಗಸ್ಟ್ 31 (ಸೋಮವಾರ): ಇಂದ್ರ ಜಾತ್ರಾ- ಗ್ಯಾಂಗ್ ಟಾಕ್, ತಿರುಓಣಂ-ತಿರುವನಂತಪುರಂ, ಕೊಚ್ಚಿ ಇತರೆಡೆ ರಜಾದಿನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+