• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಸಾ ಡಿಸೈನ್ ಮಾಡಿರುವ ವೆಂಟಿಲೇಟರ್ ಗಳು ಬೆಂಗಳೂರಿನಲ್ಲೇ ತಯಾರಿ!

|

ಬೆಂಗಳೂರು, ಮೇ.31: ನೊವೆಲ್ ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ ರಾಷ್ಟ್ರಗಳಲ್ಲೇ ಅಮೆರಿಕಾ ಅಗ್ರಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಟ್ ಆಪ್ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾಗೂ ಕೂಡಾ ಕೊವಿಡ್-19 ಬಿಸಿ ತಟ್ಟಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ನಾಸಾ ಸಂಸ್ಥೆಯು ಹೊಸದಾಗಿ ವಿಶಿಷ್ಟ ರೀತಿಯ ವೆಂಟಿಲೇಟ್ ಒಂದನ್ನು ಡಿಸೈನ್ ಮಾಡಿದೆ. ನಾಸಾದ ಜೆಟ್ ಪ್ರಪಲ್ಶನ್ ಲ್ಯಾಬ್​​ನಲ್ಲಿ ಇದರ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ನಾಸಾಗೆ ವಿಶಿಷ್ಟ ವೆಂಟಿಲೇಟರ್ ಗಳನ್ನು ತಯಾರಿಸಿ ಕೊಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ನಾಸಾದಿಂದ ವಿಶೇಷ 'ವೈಟಲ್' ವೆಂಟಿಲೇಟರ್ ತಯಾರಿಕೆ: ಭಾರತೀಯ ಕಂಪನಿಗಳ ಸಾಥ್

ಜಗತ್ತಿನಾದ್ಯಂತ ಒಟ್ಟು 21 ಸಂಸ್ಥೆಗಳಿಗೆ ಈ ವಿಶಿಷ್ಟ ವೆಂಟಿಲೇಟರ್ ತಯಾರಿಕಾ ಜವಾಬ್ದಾರಿ ನಾಸಾ ನೀಡಿದೆ. ಭಾರತ, ಮೆಕ್ಸಿಕೊ, ಬ್ರೆಜಿಲ್, ಮಲೇಷಿಯಾ ಮತ್ತು ಯುಎಇಯ ಸಂಸ್ಥೆಗಳು ನಾಸಾಗೆ ಈ ವಿಶಿಷ್ಟ ವೆಂಟಿಲೇಟರ್ ಗಳನ್ನು ತಯಾರಿಸಿ ನೀಡಲು ಸಿದ್ಧವಾಗಿವೆ. ವೆಂಟಿಲೇಟರ್​ನ ತಂತ್ರಜ್ಞಾನ, ಸಾಫ್ಟ್ ವೇರ್, ಸ್ಕೆಚಸ್ ಎಲ್ಲವನ್ನೂ ಆಲ್ಫಾ ಡಿಸೈನ್ ಟೆಕ್ನಾಲಜೀಸ್‌ ಗೆ ನಾಸಾ ಒದಗಿಸಿದೆ.

ನಾಸಾ ಡಿಸೈನ್ ಮಾಡಿದ ವೆಂಟಿಲೇಟರ್ ಗಳ ಬೆಲೆ ಕಡಿಮೆ:

ಅಸಲಿಗೆ ಬೇರೆ ವೆಂಟಿಲೇಟರ್ ಗಳಿಗೆ ಹೋಲಿಕೆ ಮಾಡಿ ನೋಡಿದಾಗ ನಾಸಾ ಡಿಸೈನ್ ಮಾಡಿರುವ ವೆಂಟಿಲೇಟರ್ ಗಳಲ್ಲಿ ಬಿಡಿಭಾಗಗಳನ್ನು ಬಳಸಿಕೊಂಡು ಸಿದ್ಧಪಡಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ನಾಸಾ ಡಿಸೈನ್ ಮಾಡಿರುವ ವೆಂಟಿಲೇಟರ್ ಗಳ ಬೆಲೆಯೂ ಕೂಡಾ ಬೇರೆ ವೆಂಟಿಲೇಟರ್​​ಗಳಿಗಿಂತ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದರಿಂದ ವಿಶ್ವದಾದ್ಯಂತ ಎಲ್ಲಾ ರೋಗಿಗಳಿಗೆ ಅನುಕೂಲಕರವಾಗಲಿದೆ ಎನ್ನಲಾಗಿದೆ.

ಸದ್ಯದ ಮಟ್ಟಿಗೆ ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಯು ನಾಸಾಗೆ ಒಟ್ಟು 5 ವೆಂಟಿಲೇಟರ್ ಗಳ ಪ್ರೊಟೊಟೈಪ್ ತಯಾರಿಸಿ ಕಳಿಸಲು ಸಜ್ಜಾಗಿದೆ. ಎಫ್​​ಡಿಎ ಸಮ್ಮತಿ ಬಳಿಕ ಅಮೆರಿಕಾದಲ್ಲಿ ಮತ್ತು ಯೂರೋಪ್​​ನಲ್ಲಿ ಮಾರಾಟ ಮಾಡಲು ಸಂಸ್ಥೆ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ 5 ವೆಂಟಿಲೇಟರ್ ತಯಾರಿಸಿ ಐಸಿಎಂಆರ್ ಗೆ ಪ್ರೊಟೊಟೈಪ್ ಕಳಿಸಲು ನಿರ್ಧರಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ವೆಂಟಿಲೇಟರ್​​ಗಳಿಗಿಂತ ಇದು ವಿಶಿಷ್ಟ ಮತ್ತು ಅತ್ಯಗತ್ಯ ತಂತ್ರಜ್ಞಾನ ಹೊಂದಿದೆ. ಭವಿಷ್ಯದಲ್ಲಿ ಅತ್ಯುತ್ತಮ ಮಾರುಕಟ್ಟೆ ಹೊಂದಿದೆ ಎನ್ನುವ ಭರವಸೆಯನ್ನು ಆಲ್ಫಾ ಡಿಸೈನ್ ಟೆಕ್ನಾಲಜೀಸ್‌ ಸಂಸ್ಥೆ ಹೊಂದಿದೆ.

English summary
The Bangalore-based company is responsible for preparing a ventilator designed by NASA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X